ಬಿಜೆಪಿಯಲ್ಲಿ ಶ್ರೀರಾಮುಲು ಸೇರಿ 40  ಅಲಿಬಾಬಾ  ಕಳ್ಳರ ಗುಂಪು: ಭೀಮ ನಾಯ್ಕ್
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಏ.08 ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಶ್ರೀರಾಮುಲು ಸೇರಿ 40 ಅಲಿಬಾಬ ಕಳ್ಳರ ಗುಂಪು ಎಂದು ಮಾಜಿ ಶಾಸಕ ಕೆಎಂಎಫ್ ರಾಜ್ಯಾಧ್ಯಕ್ಷ ಎಸ್ ಭೀಮ ನಾಯ್ಕ್ ಹೇಳಿದರು.
 ಪಟ್ಟಣದ ಅಶೋಕ ಫಾರ್ಮ್ ಹೌಸ್ ನಲ್ಲಿ ಭಾನುವಾರ ಕರೆದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಚುನಾವಣೆ ಪಾಂಡವರು ಮತ್ತು ಕೌರವರ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಆನಂದ್ ಸಿಂಗ್  ತುಕಾರಾಂ ಯಾರು ಅಂತ ಜನರಿಗೆ ಗೊತ್ತಿಲ್ಲ ಅಂತಾರೆ ಅವರಿಗೆ ಒಳ್ಳೆಯವರು ಗೊತ್ತಿರುವುದಿಲ್ಲ ಕಳ್ಳರು ಸುಳ್ಳ ಹೇಳುವಂತ ಮಹಾನ್ ವ್ಯಕ್ತಿಗಳು ಗೊತ್ತು. ಅವರಿಗೆ ಗಣಿ ಲೂಟಿ ಮಾಡಲು ಸಹಕರಿಸಿದ ಶ್ರೀರಾಮುಲು ಕರುಣಕರ  ರೆಡ್ಡಿ ಗೊತ್ತಿರಬೇಕು ಅಂತ ಹೇಳಿರಬೇಕು.  ಗಣಿ ಗಾರಿಕೆ ಸೇರಿದಂತೆ ವಿವಿಧ ವಿಚಾರ ದಲ್ಲಿ ಒಂದೇ ನಾಣ್ಯ ದ ಮುಖಗಳಿದ್ದಂತೆ
 ಇಂಥವರ ಮಧ್ಯೆ ಸರಳ ಸಜ್ಜನ ಕೆ ರಾಜಕಾರಣಿ ತುಕಾರಾಂ, ಫಿನಿಕ್ಸ್ ತರ ಎದ್ದು ಬರುತ್ತಾರೆ.
 ಚುನಾವಣೆಯ ಮುಂಚೆ ನಾನು ಹೇಳಿದ್ದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ, ಗೃಹಿಣಿಯರಿಗೆ 2,000, ಕರೆಂಟ್ ಫ್ರೀ ಮಹಿಳೆಯರಿಗೆ ಬಸ್ ಫ್ರೀ ಸೇರಿದಂತೆ ಐದು ಗ್ಯಾರಂಟಿ ಕೊಡಲಾಗುವುದು ಎಂದು ಹೇಳಿದಾಗ ಬಿಜೆಪಿ ಮುಖಂಡರು ನಗುತ್ತಿದ್ದರು. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗುವುದು ಅಂತ ಹೇಳಿದ್ದೆ ಈಗ ಎಲ್ಲವೂ ಸತ್ಯವಾಗಿದೆ.
 ಸಿದ್ದರಾಮಯ್ಯ ಸರ್ಕಾರ 5 ಗ್ಯಾರಂಟಿ ಈಡೇರಿಸಿದ್ದಾರೆ ನುಡಿದಂತೆ ನಡೆಯಲಿರುವ ಕಾಂಗ್ರೆಸ್ ಪಕ್ಷ ಇಂದು ಜನರ ಮನಸ್ಸು ಗೆದ್ದಿದೆ , ಬಿಜೆಪಿ ಏನು ಮಾಡಿದ್ದರೆ ಒಂದು ಹೇಳಿ ನಾವೇನು ಮಾಡಿದ್ದೇವೆ ಎಂಬುವುದು ಅವರ ಯೋಗ್ಯತೆಗೆ ಗ್ಯಾರೆಂಟಿ ನೀಡಿದರೆ ಸರ್ಕಾರ ದಿವಾಳಿಯಾಗುತ್ತಿದೆ ಎಂದು ಹೇಳಿಕೊಂಡು ಓಡಾಡಿದ್ದಾರೆ. ಈಗ ಏನು ಹೇಳುತ್ತಾರೆ ಯಾವ ನೈತಿಕತೆಯ ಮೇಲೆ ನೀವು ಓಟು ಕೇಳುತ್ತೀರಿ. ಕಾಂಗ್ರೆಸ್ ಕಾರ್ಯಕರ್ತರು  ಐದು ಗ್ಯಾರಂಟಿ ಮೇಲೆ ಮನೆ ಮನೆಗೆ ಹೋಗಿ ಓಟು ಹಾಕಿಸುವಂತೆ ಮಾಡಬೇಕು. ಜೆಡಿಎಸ್ ಗೆ ಹೀನಾಯ ಪರಿಸ್ಥಿತಿ ಬಂದಿದೆ. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯನ್ನು ಹೆದರಿಸುತ್ತಿದ್ದಾರೆ. ಒಂದು ವೇಳೆ ಹೊಂದಾಣಿಕೆಯಾಗದೆ ಪ್ರತ್ಯೇಕವಾಗಿ ಜೆಡಿಎಸ್ ಸ್ಪರ್ಧಿಸಿದ್ದಾರೆ ಕ್ಷೇತ್ರದಲ್ಲಿ ಜೆಡಿಎಸ್ ಗೆ ಎಷ್ಟು ಮತಗಳು ಬೀಳುತ್ತಿದ್ದವು ಎಂಬುವುದು ಗೊತ್ತಾಗುತ್ತಿತ್ತು   ಕುಮಾರಸ್ವಾಮಿ ಹೊಟ್ಟೆ ಕಿಚ್ಚಿನ ಪಾರ್ಟಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೀರುವುದು ಸಹಿಸುತ್ತಿಲ್ಲ. ಸರ್ವ ಜನಾಂಗವನ್ನು  ಪ್ರೀತಿಸುವ ಸಿದ್ದರಾಮಯ್ಯ ಬಸವಣ್ಣ ಫೋಟೋ ಹಾಕಿಸಿದ್ದು ಕಾಂಗ್ರೆಸ್ ಸರ್ಕಾರ, ಮಾಲ್ವಿ ಜಲಾಶಯಕ್ಕೆ ಶಾಶ್ವತ ನೀರು ಒದಗಿಸಿದೆ ಆದರೆ ಈಗಿನ ಶಾಸಕರು  ಗೇಟ್ ದುರಸ್ತಿ ಮಾಡುವ ಕೆಲಸ ಮಾಡಲು ಆಗುತ್ತಿಲ್ಲ, ಒಳ್ಳೆಯ ಕೆಲಸ ಮಾಡಿದರೆ ನನ್ನ ಸಹಕಾರ ಇರುತ್ತದೆ.ಕಮಿಷನ್ ತೆಗೆದುಕೊಳ್ಳುವುದು ಬಿಡಬೇಕು.
 ಗೋವುಗಳ ಬಗ್ಗೆ ಬಿಜೆಪಿ ಯವರಿಗೆ ಮಾತಾಡುತ್ತಾರೆ ಆದರೆ ಒಂದು ಆಕಳ ಸಾಕಿದ್ದರೆಯೇ,? ನಾವು ಸಾಕಿದ್ದೆವೆ ರಾಮ ಬಿಜೆಪಿ ಸ್ವತ್ತಲ್ಲಾ ನಾವು ಶ್ರೀ ರಾಮನ ಭಕ್ತರು ನಮ್ಮ ಎದೆಯಲ್ಲಿ ರಾಮನಿದ್ದಾನೆ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಗಿಮಿಕ್ ಮಾಡುತ್ತಿದ್ದಾರೆ.
 ನೂರಒಂದು ಸುಳ್ಳು ಹೇಳಿ ಬಿಜೆಪಿ ಅಧಿಕಾರಕ್ಕೆ ಬರಲು ಅವಣಿಸುತ್ತದೆ. ಇದ್ದನ್ನು ಮತದಾರರು ಅರ್ಥಮಾಡಿಕೊಳ್ಳಬೇಕು ಎಂದರು.
ಹೆಗ್ದಾಳ್ ರಾಮಣ್ಣ, ಕುರಿ ಶಿವಮೂರ್ತಿ, ಕೆ ಮೈಲಾರಪ್ಪ, ಪವಾಡಿ ಹನುಮಂತಪ್ಪ, ಅಕ್ಕಿ ತೋಟೇಶ್, ಬಾನಮ್ಮ ವಕೀಲರಾದ ಬಿವಿ ಶಿವಯೋಗಿ ಮಾತನಾಡಿದರು.
 ಈ ಸಂದರ್ಭದಲ್ಲಿ ಹಲ್ದಾಳ್ ವಿಜಯ್ ಕುಮಾರ್ ಹಂಪಾಪಟ್ಟಣದ ಭೀಮಣ್ಣ, ರೋಗಾಣಿ ಹುಲುಗಪ್ಪ, ನೆಲ್ಕುದ್ರಿ ಚಂದ್ರಪ್ಪ, ನಂದಿ ಬಂಡಿ ಸೋಮಣ್ಣ, ಕೊಟ್ಟೂರಿನ ಶಿವಣ್ಣ, ಯಶೋಧ ಮಂಜುನಾಥ, ಡಿಶ್ ಮಂಜುನಾಥ, ಗುರು ಮಲ್ಲಿಕಾರ್ಜುನ, ಬುಡನ್ ಸಾಬ್ ಹುಡೆದ್ ಗುರು ಬಸವರಾಜ್ ಶಿವ ಚರಣ, ಮರಿಯಮ್ಮನಹಳ್ಳಿ ಸತ್ಯಣ್ಣ, ಚಿರಬಿ  ಕೊಟ್ರೇಶ್, ಪಿಗ್ಮಿ ಹನುಮಂತಪ್ಪ  ಪುರಸಭೆಯ ಸದಸ್ಯರಾದ ಮರಿ ರಾಮಪ್ಪ ರಾಜೇಶ್ ಬ್ಯಾಡಗಿ, ಅಲ್ಲಾಭಕ್ಷಿ  ಹುಚ್ಚಪ್ಪ, ಇತರರಿದ್ದರು
 ಕಾರ್ಯಕ್ರಮದ ನಿರೂಪಣೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ ನಿರ್ವಹಿಸಿದರು.