ಸೂಕ್ತ ಪರಿಹಾರ ನೀಡದಿದ್ದರೆ ಮುಂಗಾರು ಬಿತ್ತನೆ ಮಾಡುತ್ತೇವೆ: ಭೂ ಸಂತ್ರಸ್ಥರು
(ಸಂಜೆವಾಣಿ ಪ್ರತಿನಿಧಿಯಿಂದ )
ಬಳ್ಳಾರಿ, ಏ.08: ಮುಂಬರುವ ಜೂನ್ ಒಳಗೆ ನಮಗೆ ಸೂಕ್ತ ಪರಿಹಾರ ಪ್ರಕಟಿಸದೇ ಇದ್ದಲ್ಲಿ ಕೈಗಾರಿಕೆಗಳಿಗೆ ನೀಡಿರುವ ಜಮೀನಿನಲ್ಲಿ ನಮ್ಮ ಸಂತ್ರಸ್ಥ ರೈತರು ಮುಂಗಾರು ಬಿತ್ತನೆ ಮಾಡಲಿದ್ದಾರೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ್ ಹೇಳಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ.  ಕುಡಿತಿನಿ ಭೂ ಸಂತ್ರಸ್ಥರ ರೈತರ ಹೋರಾಟ 500ನೇ ದಿನಕ್ಕೆ ಕಾಲಿಡುತ್ತಿದೆ.  2010ರಲ್ಲಿ ಕುಡುತಿನಿ ಸುತ್ತಮುತ್ತಲಿನ ಗ್ರಾಮಗಳ ರೈತರ ಸಾಗುವಳಿ ಭೂಮಿಯನ್ನು ಮೋಸದ ಬೆಲೆ ನಿಗದಿ ಮಾಡಿ ಖರೀದಿ ಮಾಡಿರುವುದನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ ಗಳು ಒಪ್ಪಿಕೊಂಡಿದ್ದರೂ,  ಅನ್ಯಾಯವನ್ನು ಸರಿಪಡಿಸಿ  ಪರಿಹಾರ ನೀಡಲು  ಸಾಧ್ಯವಾಗಿಲ್ಲ. ಮೋಸದ ಬೆಲೆ ನಿಗಧಿಯನ್ನು ರದ್ದು ಮಾಡಲು ಸಹ ಹಿಂದೇಟು ಹಾಕುತ್ತಿದೆ. ಇದರಿಂದ 13 ಸಾವಿರ ಹೆಚ್ಚಿನ ಎಕರೆ ಪ್ರದೇಶದ   ರೈತ  ಕುಟುಂಬಗಳು ಅದರಲ್ಲೂ,  ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹಾಗೂ ದೇವದಾಸಿ ಮಹಿಳೆಯರು ಸೇರಿದಂತೆ ಶೇಕಡ 25ರಷ್ಟು ಬಡ ರೈತ ಕುಟುಂಬಗಳಿಗೆ ಅನ್ಯಾಯವಾಗಿದೆ.
ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷವಾಗುತ್ತಿದ್ದರೂ ರೈತರಿಗೆ ಆಶಾದಾಯಕ ತೀರ್ಮಾನಗಳನ್ನು ತೆಗೆದುಕೊಳ್ಳಲು ವಿಳಂಬ ಮಾಡುತ್ತಿದೆ. . ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದರೂ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದರು.
ಆದರೆ ಇದೇ ರೀತಿ ದೇವನಹಳ್ಳಿ ಹಾಗೂ ಆನೇಕಲ್ ತಾಲೂಕು ಸೇರಿದಂತೆ ಹಲವು ಕಡೆಯಲ್ಲಿ  ರೈತರಿಗೆ ವಂಚಿಸಲಾಗಿದೆ. ಭೂ ಸಂತ್ರಸ್ತರ ರೈತರ ರಾಜ್ಯ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆದಿದ್ದು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಆರ್ಥಿಕ ತಜ್ಞರು ಹಾಗೂ ಬುದ್ಧಿಜೀವಿಗಳ ಹಾಗೂ ರೈತ ಮುಖಂಡರ ಸಭೆ ಸೇರಿ ಅನ್ಯಾಯದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.
ಕುಡುತಿನಿ ಭೂಸಂತರು ಸೇರಿದಂತೆ  ಸರ್ಕಾರದ ವಿಳಂಬ  ನೀತಿಯನ್ನು ಪ್ರತಿಭಟಿಸಿ  ರಾಜ್ಯಮಟ್ಟದ ಚಳುವಳಿಯನ್ನು ತೀವ್ರಗೊಳಿಸಲಾಗುವುದು. ರೈತರ ತಾಳ್ಮೆಯನ್ನು ಸರ್ಕಾರಗಳ  ಹಗುರವಾಗಿ ಪರಿಣಗಣಿಸಬಾರದು ಜೂನ್ ಒಳಗಡೆ ನಮ್ಮ ಹೋರಾಟದ ಬೇಡಿಕೆಗಳನ್ನು  ಇತ್ಯರ್ಥಗಳಿಸದೆ ಹೋದಲ್ಲಿ ನಮ್ಮ ಭೂಮಿಯನ್ನು ನಾವು ವಶಪಡಿಸಿಕೊಳ್ಳಲಾಗುವುದು.  ಈ ವರ್ಷದ ಮುಂಗಾರು ಬೆಳೆಯನ್ನು ಉಳುಮೆ ಮಾಡಲಾಗುವುದು ಎಂದು ತಿಳಿಸಿದರು. 
ಸಿಐಟಿಯು ರಾಜ್ಯ ಉಪಾಧ್ಯಕ್ಷ    ಜೆ.  ಸತ್ಯಬಾಬು ಮಾತನಾಡಿ,  2023 ನವಂಬರ್ 14ರಂದು ಮುಖ್ಯಮಂತ್ರಿ ನೇತ್ರತ್ವದಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಲಾಯಿತು. ಹಾಗೂ ಕಳೆದ ತಿಂಗಳು  ರಾಜ್ಯ  ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಸಭೆಯನ್ನು ನಡೆಸಲಾಗಿದೆ.  ರೈತರಿಗೆ ನೀಡಿದ ಅನ್ಯಾಯದ ಭೂ ಬೆಲೆಯ ಸರಿಪಡಿಸುವ ಕುರಿತು ಸುಪ್ರೀಂ ಕೋರ್ಟಿನ ಆದೇಶಾನುಸಾರ ಪರಿಹಾರ ನೀಡಲು ರೈತರ ಪರ ಸರ್ಕಾರ ಮಧ್ಯ ಪ್ರವೇಶ ಮಾಡಲಾಗುವದಾಗಿ ಹೇಳಿದ್ದರು.  ಆದರೆ ಇನ್ನು ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
 ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿ. ಎಸ್ ಶಿವಶಂಕರ ಮಾತನಾಡಿ, ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳು ರೈತ ವಿರೋಧಿ ನೀತಿಯನ್ನು ಪ್ರತಿಭಟಿಸಿ ಜೂನ್ ನಲ್ಲಿ ರಾಜ್ಯ ಮಟ್ಟದ ಹೋರಾಟ ನಡೆಯಲಿದೆ ಕುಡಿತಿನಿ ಭೂ ಸಂಸದರು ನಮ್ಮ ಭೂಮಿ ತಮಗೆ ನೀಡಲು ಒತ್ತಾಯಿಸಿ  ನೇರವಾಗಿ ಭೂಮಿಗೆ ಉಳಿಮೆಯನ್ನು ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ  ಪ್ರಧಾನ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ ಜಂಟಿ ಕಾರ್ಯದರ್ಶಿ ಎಂ ತಿಪ್ಪೇಸ್ವಾಮಿ ಕನ್ನಡ ರಕ್ಷಣಾ ವೇದಿಕೆಯ ಮುಖಂಡರಾದ ಜಂಗ್ಲಿ ಸಾಬ್ ರೈತರಗಳಾದ  ಬಿಳಿಬಾಯಪ್ಪ ಸಿದ್ದಮ್ಮನಹಳ್ಳಿ, ಅಂಜನಪ್ಪ  ವೆಂಕಟೇಶ್ ಕುಡುತಿನಿ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಜಿಲ್ಲಾ ಕಾರ್ಯದರ್ಶಿ ಎ ಸ್ವಾಮಿ  ಜನವಾದಿ ಮಹಿಳಾ ಸಂಘಟನೆಯ ಜೆ. ಚಂದ್ರಕುಮಾರಿ ಮತ್ತು ಕುಡುತಿನಿ ಸುತ್ತಮುತ್ತಲಿನ ಗ್ರಾಮಗಳ ಭೂ ಸಂತ್ರಸ್ತರು ಭಾಗವಹಿಸಿದ್ದರು