ಮುಸ್ಲಿಂ ಭಾಂದವರಿಗೆ ಹಣ್ಣುಹಂಪಲು ವಿತರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಏ.8; ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಅತ್ಯಂತ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ರೋಜಾ ಆಚರಣೆ ಕೇವಲ ಉಪವಾಸ ಮಾಡದೆ ಇನ್ನೊಬ್ಬರ ಹಸಿವನ್ನು ಹೇಗೆಂದು ಅರಿತುಕೊಳ್ಳಲು ಪೈಗಂಬರ್ ಅವರು ಉಪವಾಸವನ್ನು ಆಚರಣೆ ಮಾಡಬೇಕೆಂದು ಸಂದೇಶವನ್ನು ಸಾರಿರುವುದರಿಂದ ನಮ್ಮ ಸುತ್ತಮುತ್ತ ಇರುವ ಅನೇಕ ಬಡವರು, ನಿರ್ಗತಿಕರು ಹಸಿವಿನಿಂದ ಎಷ್ಟೊಂದು ತೊಂದರೆ ಅನುಭವಿಸುತ್ತಿರಬಹುದು ಎಂಬುದನ್ನು ರೋಜಾ ಮುಖಾಂತರ ನಾವು ತಿಳಿದುಕೊಂಡು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಬಹುದಾಗಿದೆ. ಇಸ್ಲಾಂ ಧರ್ಮದ ಮುಖಾಂತರ ಸಮಸ್ತ ಬ್ರಹ್ಮಾಂಡದಲ್ಲಿ ಜೀವಿಸುತ್ತಿರುವ ಮನಕುಲಕ್ಕೆ ರೋಜಾ ಆಚರಣೆಯು ನೈತಿಕ ಮೌಲ್ಯದ ಸಂದೇಶವನ್ನು ನೀಡುತ್ತದೆ.ಆದ್ದರಿಂದ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವು ಅತ್ಯಂತ ಸಂಭ್ರಮ ಸಡಗರದಿಂದ ಜರುಗುವುದು. ಈ ನಿಮಿತ್ತ  ವಿನೋಬನಗರದ 2ನೇ ಮೇನ್, ಮಸೀದಿಯ ಹತ್ತಿರ ದೊಡ್ಡೇಶ್ ಸ್ನೇಹ ಬಳಗದಿಂದ ಉಪವಾಸವಿರುವ ಮುಸ್ಲಿಂಬಾAಧವರಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಮುಸ್ಲಿಂ ಬಾಂಧವರಿಗೆ ಈ ಮೂಲಕ ಶುಭ ಕೋರಲಾಯಿತು ಎಂದು ಹೆಚ್.ಎಸ್. ದೊಡ್ಡೇಶ್ ಅವರು ತಿಳಿಸಿದರು..ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಹೆಚ್.ಎಸ್.ದೊಡ್ಡೇಶ್, ಪರಶುರಾಂವರಗೋಡುದಿನ್ನಿ, ಶೇರ್ ಅಲಿ, ರೆಹಮಾನ್ ಖಾನ್, ಎಸ್.ಎನ್.ಮಲ್ಲಿಕ್, ಚೇತನ್, ರಘು, ಮಂಜು, ಅರುಣ್, ಪರಶುರಾಮ್ ಮತ್ತಿತರರು ಭಾಗವಹಿಸಿದ್ದರು.