ಮತದಾನ ಜಾಗೃತಿಗಾಗಿ ಬೈಕ್  ಜಾಥಾ

ಸಂಜೆವಾಣಿ ವಾರ್ತೆ
ದಾವಣಗೆರೆ. ಏ.8; ಮಹಾನಗರ ಪಾಲಿಕೆಯ  ಸಿಬ್ಬಂದಿಗಳು ಬೈಕ್ ಜಾಥ ನಡೆಸುವ ಮೂಲಕ  ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸಿದರು.ನಗರದ ದುರ್ಗಾಂಬಿಕಾ ದೇವಸ್ಥಾನದಿಂದ ಪ್ರಾರಂಭವಾದ ಬೈಕ್ ಜಾಥ ಕಾಳಿಕಾ ದೇವಿ ರಸ್ತೆ , ದೊಡ್ಡಪೇಟೆ ಗಣಪತಿ ದೇವಸ್ಥಾನ, ಹೋಂಡಾದ ಸರ್ಕಲ್, ಜಾಲಿ ಟಾಕೀಸ್ ಮುಖ್ಯ ರಸ್ತೆ , ಶಿವಾಲಿನಗರ ಮುಖ್ಯ ರಸ್ತೆ , ಕೊಂಡಜ್ಜಿ ರಸ್ತೆ ಮೂಲಕ  ಸಾಗಿ  ಆರ್ ಟಿ ಓ ವೃತ್ತದಲ್ಲಿ  ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ  ಜಾಥಾ ಕಾರ್ಯಕ್ರಮ ಪೂರ್ಣಗೊಳಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ  ಬಿ ಪ್ರಕಾಶ್,  ಮಹಾಂತೇಶ್ ಕೆಆರ್  ನೀಲಪ್ಪ,  ಉಮ್ಲಾ ನಾಯಕ್, ತನ್ವೀರ್ ಅಹ್ಮದ್,  ದಫೇದಾರಗಳಾದ ದುಗ್ಗೇಶ್,  ಶ್ರೀನಿವಾಸ ಮೂರ್ತಿ, ಉಮೇಶ, ನಾಗಣ್ಣ  ಇತರರು  ಭಾಗವಹಿಸಿದ್ದರು.