ರಣಬಿಸಿಲಿಗೆ ವೃದ್ಧ ಬಲಿ
ರಾಯಚೂರು,ಏ.೮- ಬಿಸಿಲಿನ ತಾಪ ತಾಳಲಾರದೆ ಕುಸಿದು ಬಿದ್ದು ವೃದ್ಧನೋರ್ವ ಮೃತಪಟ್ಟ ಘಟನೆ ಜರುಗಿದೆ.
ನಗರದ ಯಕ್ಲಾಸಪುರ ನಿವಾಸಿ ರಾಮಣ್ಣ (೭೦) ಅವರು ಬಿಸಿಲಿಗೆ ಮೃತಪಟ್ಟ ವೃದ್ದ ಎನ್ನಲಾಗುತ್ತಿದೆ. ಮಧ್ಯಾಹ್ನ ಬಿಸಿಲಿನಲ್ಲಿ ನಡೆದು ಹೊಗುತ್ತಿದ್ದ ವೇಳೆ, ನಿಶ್ಯಕ್ತಿಗೆ ಒಳಗಾಗಿ ತಲೆ ಸುತ್ತು ಬಂದು ಏಕಾಏಕಿ ಕುಸಿದು ಬಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ವೃದ್ಧನ ಮೃತ ದೇಹ ಹಸ್ತಾಂತರಿಸಿದ್ದಾರೆ.