ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ ಶಾಲಾಪೂರ್ವ ಶಿಕ್ಷಣ ಅತ್ಯವಶ್ಯಕ – ಮೂಕಾಂಬಿಕ
ರಾಯಚೂರು,ಏ.೦೮- ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ ಶಾಲಾಪೂರ್ವ ಶಿಕ್ಷಣ ಬಹಳ ಮುಖ್ಯ ಎಂದು ವಲಯ ಮೇಲ್ವಿಚಾರಕಿ ಮೂಕಾಂಬಿಕ ಹೇಳಿದರು.
ನಗರದ ಹರಿಜನವಾಡದಲ್ಲಿ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶುಅಭಿವೃದ್ದಿ ಯೋಜನೆ, ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ, ಕಲಿಕಾ ಟಾಟಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾಪೂರ್ವ ಶಿಕ್ಷಣ ತರಬೇತಿ ಬಲವರ್ಧನಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾಪೂರ್ವ ಶಿಕ್ಷಣದ ತರಬೇತಿಯು ಹಾಕುವುದು ಅಂಗನವಾಡಿ ಕಾರ್ಯಕರ್ತರ ಕೈಯಲ್ಲಿದೆ. ಮಕ್ಕಳ ಸಾಮಾಜಿಕ, ಬೌದ್ಧಿಕ, ಮಾನಸಿಕ, ಶೈಕ್ಷಣಿಕ ಬೆಳವಣಿಗೆಯು ೩ ರಿಂದ ೬ ವರ್ಷದ ಮಕ್ಕಳಿಗೆ ಕಾರ್ಯಕರ್ತೆಯರು ಹಂತ ಹಂತವಾಗಿ ಆಟ ಹಾಗೂ ಪಾಠದ ಮೂಲಕ ಹೇಳಿಕೊಡುತ್ತಾರೆ ಎಂದರು.
ಕಲಿಕೆಗೆ ಬೇಕಾದ ಎಲ್ಲಾ ರೀತಿಯ ಸ್ಥಳೀಯವಾಗಿ ದೊರೆಯುವಂತಹ ಬೋಧನಾ ತಯಾರಿಸಿಕೊಳ್ಳುತ್ತಾರೆ. ಅದರ ಮೂಲಕ ಮಕ್ಕಳಿಗೆ ಯಾವ ರೀತಿಯ ಚಟುವಟಿಕೆಗಳನ್ನು ತಯಾರಿಸಿ ಮಕ್ಕಳಿಗೆ ಕ್ಯಾಲೆಂಡರ್, ಅವಮಾನ ಸಂಖ್ಯೆ, ಎಣಿಕೆ, ಶಬ್ದ ಆಟ, ಗಣಿತ ಪೂರ್ವ ತಯಾರಿ ಓದುವ ತಯಾರಿ ಸಂಗೀತ, ನಾಟ್ಯ, ಕಥೆ, ಭಾಷೆ, ಆಟಗಳು, ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಿಸುವುದು ಮಕ್ಕಳಿಗೆ ಶಿಸ್ತು, ಸಂಯಮ, ಹೊಂದಾಣಿಕೆ ನಾಯಕತ್ವ ಮನೋಭಾವವನ್ನು ಮಕ್ಕಳಿಗೆ ಈ ಚಟುವಟಿಕೆಗಳನ್ನು ಮೂಡಿಸುವುದರ ಮೂಲಕ ಕಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಧ್ಯಾ, ಹಿರಿಯ ಮೇಲ್ವಿಚಾರಕಿ ಮಹಾಲಿಂಗಮ್ಮ, ಕಸ್ತೂರಿ, ಮಲ್ಲಮ್ಮ ಸೇರಿದಂತೆ ಹರಿಜನವಾಡ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.