ಜಿಲ್ಲಾ ಕಾಂಗ್ರೆಸ್ ನಿಂದ ವಿನೂತನ ಪ್ರತಿಭಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.8: ನಗರದ ಅಶೋಕ ಚಿತ್ರಮಂದಿರ ಬಳಿಯ ಅಂಡರ್ ಪಾಸ್ ಕಾಮಗಾರಿಯು ಅವೈಜ್ಞಾನಿಕ ವಿಧಾನಗಳಿಂದ ಕೂಡಿದೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷ ವಿನೂತನವಾಗಿ ಅಶೋಕ ಚಿತ್ರಮಂದಿರ ಬಳಿ ಪ್ರತಿಭಟನೆ ನಡೆಸಿತು.ರಸ್ತೆಯಲ್ಲೇ ಜಿಲೇಬಿ ಮಾಡುವ ಮೂಲಕ, ಅದನ್ನು ಅಂಡರ್ ಪಾಸ್ ಬಳಸಿಕೊಂಡು ಬರುವ ವಾಹನ ಸವಾರರಿಗೆ ನೀಡುವ ಮೂಲಕ ಸರ್ಕಾರದ ಗಮನ ಸೆಳೆದರು. ಕೇಂದ್ರ ಸರ್ಕಾರದಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳು ಇದೇ ರೀತಿ ಜಿಲೇಬಿಯಂತೆ ಸುತ್ತಿ ಬಳಸಿಕೊಂಡು ಬರಬೇಕು. ಪ್ರಯಾಸ ಪಟ್ಟುಕೊಂಡು ಬರುವ ವಾಹನ ಸವಾರರಿಗೆ ಅವರ ಸಾಧನೆ ಮಾಡಿದ್ದಾರೆಂದು ಶಭಾಷಗಿರಿ ನೀಡಿ ಸಿಹಿ ವಿತರಿಸಲಾಯಿತು.ಈ ವೇಳೆ ಕಾಂಗ್ರೆಸ್ ಪಕ್ಷದ ದಿನೇಶ್ ಶೆಟ್ಟಿ, ಕೆ.ಜಿ.ಶಿವಕುಮಾರ್, ಯುವರಾಜ್, ಅನಿತಾಬಾಯಿ, ಕವಿತಾ ಚಂದ್ರಶೇಖರ್, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಸಲೀನಾ,‌ ಮಂಜುಳಮ್ಮ, ಶುಭಮಂಗಳ ಇತರರು ಇದ್ದರು