ಶಾಸಕರ ಸಹೋದರ ನಾಗಪ್ಪ ವಜ್ಜಲ್ ನಿಧನ
ಸಂಜೆವಾಣಿ ವಾರ್ತೆ
ಲಿಂಗಸುಗೂರು.ಏ.೦೮- ತಾಲೂಕಿನ ಶಾಸಕ ಮಾನಪ್ಪ ವಜ್ಜಲ್ ರವರ ಸಹೋದರ ನಾಗಪ್ಪ ವಜ್ಜಲ್ ಇಂದು ನಿಧನ ಹೊಂದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ತಾಲ್ಲೂಕಿನಲ್ಲಿ ಸಮಾಜ ಸೇವೆ ಮಾಡಿ ಶಾಸಕರ ಬಲಗೈಯಾಗಿ ಮೂರು ಅವಧಿಗೆ ಶಾಸಕರನ್ನಾಗಿ ಆಯ್ಕೆಗೆ ಕಾರಣೀಭೂತರಾದ ನಾಗಪ್ಪ ವಜ್ಜಲ್ ಇಂದು ನಿಧನದ ಸುದ್ದಿ ಪಟ್ಟಣದ ತುಂಬ ಹರಡಿಕೊಂಡಿದೆ.
ಶಾಸಕರ ಸಹೋದರ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಏಕಾಏಕಿ ಸೋಮವಾರದಂದು ನಿಧನ ಹೊಂದಿದ ಪರಿಣಾಮವಾಗಿ ಕುಟುಂಬ ಸದಸ್ಯರಿಗೆ ಕಣ್ಣಿರು ಒರೆಸಲು ಆ ದೇವರು ಶಕ್ತಿ ನೀಡುವ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಲು ಸಾಂತ್ವನದ ನಾಗರಿಕರು ಸಾರ್ವಜನಿಕರು ಸೇರಿದಂತೆ ಅವರ ಅಭಿಮಾನಿಗಳಿಗೆ ಭಾರಿ ಆಘಾತ ಉಂಟಾಗಿದೆ.
ಅಪರೂಪದ ಸಜ್ಜನರು, ಜನ ನಾಯಕರು ಲಿಂಗಸ್ಗೂರು ತಾಲ್ಲೂಕಿನಲ್ಲಿ ಮಾಲಕರು ಎಂದೇ ಹೆಸರುವಾಸಿಯಾಗಿದ್ದ ವಜ್ಜಲ್ ಮನೆತನದ ಕುಡಿ, ಶಕ್ತಿ, ಶ್ರೀಯುತ ನಾಗಪ್ಪ ಮಾಲಕರು ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಭಗವಂತ ಶಾಂತಿಯನ್ನು ಕರುಣಿಸಲಿ. ಅವರ ಕುಟುಂಬಕ್ಕೆ ಈ ಅತೀವ ದುಖಃ ಭರಿಸುವ ಶಕ್ತಿಯನ್ನು ದಯಪಾಲಿಸಲಿ.