ನೇಮಕಾತಿ ಪ್ರಕ್ರಿಯೆ ಮುಂದುವರೆಸದಂತೆ ಸಚಿವ ಎಚ್.ಕೆ.ಪಾಟೀಲ ಪತ್ರ
ಸಂಜೆವಾಣಿ ವಾರ್ತೆ
ಲಿಂಗಸುಗೂರು.೦೮- ಕಲ್ಯಾಣ ಕರ್ನಾಟಕೇತರ ಅಭ್ಯರ್ಥಿಗಳ ಹಿದೃಷ್ಠಿಯಿಂದ ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಕೇಂದ್ರಿಕೃತ ದಾಖಲಾತಿ ಘಟಕ ಸಂಸ್ಥೆಗಳ ನೇಮಕಾತಿಯಲ್ಲಿ ಸಂವಿಧಾನದ ಕಲಂ ೩೭೧(ಜೆ) ದಡಿ ಮೀಸಲಾತಿ ಮುಂದುವರೆಸದಂತೆ ಸಚಿವ ಎಚ್.ಕೆ ಪಾಟೀಲ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕ ಜನತೆಗೆ ಬರ ಸಿಡಿಲು ಬಡಿದಂತೆ ಆಗಿದೆ ಅದಕ್ಕಾಗಿ ಕಲ್ಯಾಣ ಕರ್ನಾಟಕ ಜನ ಎಚ ಕೆ ಪಾಟೀಲರ ವಿರುದ್ಧ ಹೋರಾಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅತೀ ಸಂಘರ್ಷಕ್ಕೆ ಕಾರಣವಾಗುವ ಅಂಶಗಳು ಎದ್ದು ನಿಂತಿದೆ .
೨೦೨೪ರ ಜನವರಿ ೨೨ರಂದ ಮುಖ್ಯಮಂತ್ರಿಸಿದ್ಧರಾಮಯ್ಯ ಅವರಿಗೆ ನಡವಳಿ ಹೆಸರಲ್ಲಿ ಎಪಿಎಸ್‌ಸಿ,ಕೆಇಎ ಸಿಎಸಿ ಸಂಸ್ಥೆ ಮೂಲಕ ನೇಮಕ ಮಾಡುವ ನಾನಾ ಇಲಾಖೆಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕೇತರ ಭಾಗದ ೨೪ ಜಿಲ್ಲೆಗಳ ಅಭ್ಯರ್ಥಿಗಳಿಗೆ ಆಗತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಸಲ್ಲಿಸಿರುವ ಮನವಿಗಳನ್ನು ಲಗತ್ತಿಸಿ ಬರೆದುಕೊಂಡಿರುವ ಪತ್ರದಲ್ಲಿನ ಅನೇಕ ಅಂಶಗಳು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.
೩೭೧(ಜೆ) ವಿಶೇಷ ಮೀಸಲಾತಿ ನಿಯಮಗಳಿಗೆ ಸಂಬಂಧಿಸಿ ೨೦೨೩ ಫೆಬ್ರುವರಿ ೧ರಂದು ಸರ್ಕಾರ ಹೊರಡಿಸಿದ ಸುತ್ತೋಲೆ ವಿವಿಧ ನೇಮಕಾತಿಗೆ ಪೂರ್ವಾನ್ವಯ ಆಗುವಂತೆ ಇದೆ. ಈ ಸುತ್ತೋಲೆಯು ರಾಜ್ಯಪಾಲರು ಹೊಡಸಿದ ಮೂಲ ಗೆಜೆಟ್ ಕಾಯ್ದೆ ಮತ್ತು ನಿಯಮಗಳಿಗೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜಾರಿಗೊಳಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ವೈಯಕ್ತಿಕ ಅಭಿಪ್ರಾಯ ವ್ಯಕ್ತಡಿಸಿರುವುದು ನೋವಿನ ಸಂಗತಿಯಾಗಿದೆ.
ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿ ಓರ್ವ ಅಭ್ಯರ್ಥಿ ಪ್ರಕಣದಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಆದೇಶವನ್ನೆ ಮುಂದಿಟ್ಟು ಈ ಆದೇಶವನ್ನು ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸದಂತೆ ಇಲಾಖೆ ಹಂತದಲ್ಲಿಯೆ ಕೆ.ಎ.ಟಿ ಆದೇಶ ಮತ್ತು ಸಾರ್ವಜನಿಕರಿಂದ ಬಂದಿರುವ ದೂರು ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸಬೇಕು. ಸಮಿತಿ ವರದಿ ಬರವವರೆಗೆ ಮೀಸಲಾತಿ ಮುಂದುವೆಸದಂತೆ ಬರೆದುಕೊಂಡಿರುವುದನ್ನು ಸಂಘ ಸಂಸ್ಥೆಗಳು ಖಂಡಿಸಿವೆ.
‘ಸಂವಿಧಾನದ ಕಲಂ ೩೭೧ಜೆ) ಸೌಲಭ್ಯ ತಂದಕೊಟ್ಟವರು ಕಾಂಗ್ರೆಸ್ಸಿಗರೆಂದು ಪ್ರತಿ ಭಾಷಣದಲ್ಲಿ ಹೇಳುತ್ತಾರೆ. ಆದರೆ, ಕಾಂಗ್ರೆಸ್ ಸರ್ಕಾರದ ಸಚಿವ ಎಚ್.ಕೆ ಪಾಟೀಲ ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳ ಹಿತಾಸಕ್ತಿಗೆ ನಮ್ಮ ಭಾಗದವರ ಮೀಸಲು ಹಕ್ಕು ಕಸಿಯುವ ಹುನ್ನಾರ ನಡೆಸಿದ್ದಾರೆ. ಸಂವಿಧಾನ ಕಲಂ ೩೭೧(ಎ) ಮೀಸಲಾತಿ ಹೆತ್ತವರಿಂದಲೆ ಕತ್ತು ಹಿಸುಕುವ ಕೃತ್ಯ ನಡೆದಿದೆ’ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಲೇವಡಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಎನ್.ಎಸ್ ಬೋಸಾರಾಜು, ‘ಸಚಿವ ಎಚ್.ಕೆ ಪಾಟೀಲ ಪತ್ರ ಬರೆದಿರುವುದು ಗಮನಕ್ಕೆ ಬಂದಿಲ್ಲ. ಸಚಿವ ಸಂಪುಟದಲ್ಲಿ ಚರ್ಚಿಸದೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಕಲ್ಯಾಣ ಕರ್ನಾಟಕ ಭಾಗದ ೩೭೧(ಜೆ) ಮೀಸಲಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.