ಚುನಾವಣೆ ಕಾರ್ಯವನ್ನು ಜವಾಬ್ದಾರಿ, ನಿಷ್ಠೆಯಿಂದ ನಿರ್ವಹಿಸಿ: ತಹಶೀಲ್ದಾರ ಸುರೇಶ ವರ್ಮಾ
ರಾಯಚೂರು,ಏ.೦೮-
ಚುನಾವಣೆ ಎಂಬುವುದು ರಾಷ್ಟ್ರದ ತುರ್ತು ಹಾಗೂ ಮಹತ್ತರವಾದ ಕಾರ್ಯವಾಗಿದ್ದು, ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ತಮಗೆ ವಹಿಸಿದ ಚುನಾವಣಾ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿಯಿಂದ ಮತ್ತು ನಿಷ್ಠೆಯಿಂದ ಮಾಡಬೇಕು ಎಂದು ತಹಶೀಲ್ದಾರ ಸುರೇಶ ವರ್ಮಾ ಅವರು ಹೇಳಿದರು.
ಅವರು ಏ.೦೮ರ(ಸೋಮವಾರ) ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮತಗಟ್ಟೆ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಚುನಾವಣಾಧಿಕಾರಿಗಳಿಗೆ ಮತದಾನದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಮತದಾನದ ದಿನದಂದು ಹಾಗೂ ಮತದಾನದ ಹಿಂದಿನ ದಿನದಂದು ಮತದಾನಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ದತೆಗಳನ್ನು ಆಯಾ ಮತಗಟ್ಟೆಗಳ ಅಧಿಕಾರಿಗಳು ಸಿದ್ದಪಡಿಸಿಕೊಳ್ಳಬೇಕು. ಮತ್ತು ಚುನಾವಣೆಯನ್ನು ಪಾರದರ್ಶಕ, ನಿಯಮಾನುಸಾರವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಮತದಾನದ ಕುರಿತು ತರಬೇತಿದಾರರು ನೀಡುವ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಆಲಿಸಿ, ಯಾವುದೇ ಗೊಂದಲಗಳಿದ್ದರೆ ತರಬೇತುದಾರರಿಂದ ಪರಿಹರಿಸಿಕೊಳ್ಳಬೇಕು. ತರಬೇತಿ ಕಾರ್ಯಗಾರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ, ಮಾಸ್ಟರ್ ತರಬೇತುದಾರ ಸದಾಶಿವಪ್ಪ, ಡಯಟ್ ಪ್ರಾಚಾರ್ಯ ಶ್ರೀನಿವಾಸರೆಡ್ಡಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಶ್ರೀನಿವಾಸ, ಮತದಾರರ ಸಾಕ್ಷರತಾ ಕ್ಲಬ್‌ನ ದಂಡಪ್ಪ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.