ಶ್ರೀ ಕರೆಮ್ಮದೇವಿ ಜಾತ್ರಾ ಮಹೋತ್ಸವ
ಮುನವಳ್ಳಿ,ಏ8 : ಪಟ್ಟಣದ ಸೂಲಕಟ್ಟಿ ಶ್ರೀ ಕರೆಮ್ಮದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಕರೆಮ್ಮದೇವಿಯ ಮೂರ್ತಿಗೆ ರವಿವಾರ ಏಳನೆ ದಿನದ ಪೂಜೆ ಜರುಗಿತು.
ಬೆಳಗ್ಗೆ 6 ಗಂಟೆಗೆ ಗೋವು ಪೂಜೆ ನಂತರ ಸುಮಂಗಲೆಯರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾಧ್ಯಮೇಳಗಳೊಂದಿಗೆ ಮೆರವಣಿಗೆ ಮೂಲಕ ಮಲಪ್ರಭಾ ನದಿಯಿಂದ ನೀರು ತಂದು ಗಂಗಾ ಪೂಜೆ ನೇರವೆರಿಸಿ ಮುತೈದೆಯರಿಗೆ ಕಂಕಣಧಾರಣ ಕಾರ್ಯಕ್ರಮ ಜರುಗಿತು.
ದಿವ್ಯಸಾನಿಧ್ಯ ವನ್ನು ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು ವಹಿಸಿದ್ದರು.
ಕಮಿಟಿಯ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.