ಗುರು ಚರಂತಪ್ಪ ಮಹಾಸ್ವಾಮಿಗಳು ಬಹುದೊಡ್ಡ ಪವಾಡ ಪುರುಷರು

ಸಂಜೆವಾಣಿ ವಾರ್ತೆ
ಬೆಂಗಳೂರು.ಏ. 8;  ಗುರು ದೊಡ್ಡ ಬಸವೇಶ್ವರ ಪೌಂಡೇಶನ್ ಪುಣ್ಯಕ್ಷೇತ್ರ ನಂದಿಪುರದ ಮಹಿಮಾವತಾರ ಗುರು ಚರಂತಪ್ಪಜ್ಜನವರ  ಪುಣ್ಯ ಸ್ಮರಣೋತ್ಸವ ಹಾಗೂ ಚರಂತಾರ್ಯ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿಂದು ಹಮ್ಮಿಕೊಳ್ಳಲಾಗಿತ್ತು.ಇದೇ ಸಂದರ್ಭದಲ್ಲಿ ತಥಾಗತ್ ಆಸ್ಪತ್ರೆಯ ಡಾ.ಮಹಾತೇಂಶ್ ಚರಂತಿಮಠ, ಮಾಜಿ ಮಂತ್ರಿ ಎನ್..ಕೆ.ಸೋಗಿ, ಜೂನಿಯರ್ ರಾಜಕುಮಾರ್(ನಾರಾಯಣಪ್ಪ), ತುಮಕೂರು ವಿಶ್ವವಿದ್ಯಾಲಯದ ಉಪನ್ಯಾಸಕಿ, ಲೇಖಕಿ ಮೀನಾಕ್ಷಿ ಕಂಡಿಮಠ, ರಂಗತಜ್ಞ ಹೆರಿನ್ ಮೈಸೂರು, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ವಿಜೇತೆ ಡಾ.ವಾಣಿಶ್ರೀ ಅವರಿಗೆ ಚರಂತಾರ್ಯ ಶ್ರೀ  ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್.ವಿ.ಪಾಟೀಲ ಗುಂಡೂರು ವಿರಚಿತ 551ನೇ ನಡೆದಾಡುವ ದೇವರು ಭಾಗ- 2 ಬಾಲ ಚರಂತೇಶ್ವರ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಐಎಎಸ್‌ ಅಧಿಕಾರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸೋಮಶೇಖರ್ ಮಾತನಾಡಿ, ನಂದಿಪುರ ಪುಣ್ಯಕ್ಷೇತ್ರದ ಚರಂತಾರ್ಯ ಮಹಾಸ್ವಾಮಿಗಳು,  ಜೀವನದಲ್ಲಿ ತಮ್ಮ ದೇಹದ ಮೇಲೆ ಯಾವುದೇ ಆಸೆ ಆಕಾಂಕ್ಷೆಗಳನ್ನು ಹೊಂದಿರದೇ ಇರುವುದರಿಂದ ಅವರು ಮಹಾನ್ ಪವಾಡ ಪುರುಷರಾಗಿ ಬೆಳದರು, ಸನ್ಯಾಸಿಗಳ ಸಮಾಜಿಕ ಚಿಕಿತ್ಸಕರಾಗಿ ಕೆಲಸ ಮಾಡಿದರು, ಮಾತೃ ಹೃದಯವನ್ನು ಹೊಂದಿದ ಮಹಾವ್ಯಕ್ತಿಯಾಗಿದ್ದರು, ಪ್ರೀತಿ, ಅನುಕಂಪವನ್ನು ಹೊಂದಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಹೇಳಿದರುಶಿವಗಂಗೆ ಮೇಲಣ ಗವಿಮಠದ ಡಾ.ಮಲಯ ಶಾಂತಮುನಿ ಶಿವಚಾರ್ಯ ಸ್ವಾಮೀಜಿ, ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ,ಬಳ್ಳಾರಿ ಕಮ್ಮರಚೇಡು ಕಲ್ಯಾಣ ಸ್ವಾಮೀಜಿ, ಕೊಂಚುರ ಸವಿತಾ ಪೀಠ ಮಹಾಸಂಸ್ಥಾನದ ಸವಿತಾನಂದ ಸ್ವಾಮೀಜಿ, ವಿಜಯನಗರ ಜಿಲ್ಲೆಯ ಬೆಣ್ಣೆ ಹಳ್ಳಿ ಹಿರೇಮಠದ ಪಂಚಾಕ್ಷರಿ ಶಿವಚಾರ್ಯಸ್ವಾಮಿಗಳು, ಗದ್ದಿಕೆರೆ ಹಿರೇಮಠದ ಅಭಿನವ ಚರಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಆಂದ್ರಪ್ರದೇಶದ ಜಂಗಮರ ಹೊಸಹಳ್ಳಿಯ ಅಜಾತ ಶಂಬುಲಿಂಗ ಶಿವಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.ಬೆಂಗಳೂರಿನ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಪ್ರಭುದೇವ ಎನ್.ಎಂ.ದೇವೇಂದ್ರ ಕುಮಾರ್ ಪತ್ತಾರ್, ಡಾ.ಎಂ.ಶಿವಮೂರ್ತಿ, ನಿವೃತ್ತ ಜಿಲ್ಲಾಧಿಕಾರಿ ಎಸ್.ಎಂ.ಸೊನ್ನದ, ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ ಬಣಕಾರ,  ಎ.ಎಂ.ಎಂ.ಕೊಟ್ರಸ್ವಾಮಿ,ಕೆ.ಕೊಟ್ರೇಶ್ ಮತ್ತಿತರರು ಭಾಗವಹಿಸಿದ್ದರು.ಕರಿಬಸಬನಗೌಡ ಹಾಗೂ ಹೆಚ್.ಎಂ.ಗುರುಬಸವರಾಜಯ್ಯ ನಿರ್ವಹಿಸಿದರು.