ಕಳಸಾರೋಹಣ ಕಾರ್ಯಕ್ರಮ
ಹುಬ್ಬಳ್ಳಿ, ಏ 8: ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಹಜರತ್ ಮಕ್ತುಮಷಾವಲಿ ದರ್ಗಾದ ನೂತನ ಕಳಸಾ ರೋಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಜರತ್ ಶ್ರೀ ಹಟೇಲಬಾಷಾ ದರ್ಗಾದಿಂದ ಭವ್ಯ ಮೆರವಣಿಗೆಯನ್ನು ಶ್ರೀ ಅಮೀರಖಾನ್ ಅಜ್ಜಾರ ಹಾಗೂ ಶ್ರೀ ಸಂಗಯ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಗ್ರಾಮದ ಗುರುಹಿರಿಯರ ಹಾಗೂ ಯುವಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿಸಲಾಯಿತು.
ಈ ಸಂದರ್ಭದಲ್ಲಿ ಮಮ್ಮದಅಲಿ ದಾಡಿವಾಲೆ, ರಫೀಕ್ ಜಮಖಂಡಿ, ತಾಜುದ್ದೀನ್ ಬರದುರ, ರಾಮಣ್ಣ ವಾಲಿಕಾರ್, ಸಲೀಮ್ ಬರ್ದ್ವಾಡ, ಕಲಂದರ ಮುಲ್ಲಾ, ಹನುಮಂತಪ್ಪ ಮೇಟಿ, ಉಮಣ್ಣ ಬಡ್ನಲ್, ಕಲ್ಲಪ್ಪ ಮರಬದ್, ಪಕ್ಕಣ್ಣ ಗಾಣಿಗೇರ್, ವಾಸುದೇವ್ ಉಡೋಜಿ, ಭೀಮಣ್ಣ ಮೋರಬದ್ದ, ಬಸವಂತಪ್ಪ ಮೋರಬದ, ರಾಜೇಶಸಾಬ ಹಂಗರ್ಕಿ, ಸೈಯದಸಾಬ ನಡುವಿನಮನಿ, ರಜಾಕ ಕಾರಡಗಿ, ಖಾದರಸಾಬ ಸೆಕ್ರೇಟಿರಿ, ಇಮಾಮ ಹುಸೇನರ ಮಾಳಗಿಮನಿ, ಸಲೀಂ ಚಂದನಮಟ್ಟಿ, ಆಶಿಫ ಚಂದನಮಟ್ಟಿ ಸೇರಿದಂತೆ ಗ್ರಾಮದ ಸಮಸ್ತ ಗುರುಹಿರಿಯರು, ಯುವಕರು ಉಪಸ್ಥಿತರಿದ್ದರು.