ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟನೆ
ಗುಳೇದಗುಡ್ಡ,ಏ8: ಮಹಿಳೆ ಒಂದಿಲ್ಲ ಒಂದು ರೀತಿಯಲ್ಲಿ ಶೋಷಿತಳಾಗುತ್ತಿದ್ದಾಳೆ. ಹೆಣ್ಣು ಮಕ್ಕಳು ಕುಟುಂಬದ ಆಧಾರ ಸ್ಥಂಭಗಳಾಗಿದ್ದಾರೆ. ಸಮಸಮಾಜ ಕಟ್ಟುವ ಅವಶ್ಯಕತೆ ಇದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಮಲ್ಲಿಕಾ ಎಸ್. ಘಂಟಿ ಹೇಳಿದರು.
ಅವರು ಪಟ್ಟಣದ ಶ್ರೀ ಜ. ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ(ಬಿ.ಎಡ್)ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರಜಾಸತ್ತಾತ್ಮಕ ರಾಷ್ಟ್ರವಾದ ನಮ್ಮ ದೇಶದಲ್ಲಿ ಸಂವಿಧಾನ ಎಲ್ಲವನ್ನು ನೀಡಿದೆ ಅದರ ಅನುಸಾರ ಎಲ್ಲರೂ ಅನುಸರಿಸಬೇಕು ಎಂದು ಹೇಳಿದರು.
ಸಂಸ್ಥೆಯ ಚೇರ್ಮನ್ ರಾಜು ಜವಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಮಹಿಳೆ ಎಲ್ಲರಂಗಗಳಲ್ಲೂ ಪುರಷನಷ್ಟೇ ಸಮಾನವಾಗಿ ಬೆಳೆಯುತ್ತಿದ್ದು, ಮಹಿಳೆ ಅಬಲೆ ಎಂಬ ಹಣೆಪಟ್ಟಿ ತೆಗೆದುಹಾಕಬೇಕು ಎಂದರು.
ಶ್ರೀ ಜ. ಗುರುಸಿದ್ದೇಶ್ವರ ಬೃಹನಠದ ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮಿಜಿ ಸಾನಿಧ್ಯವಹಿಸಿ ಮಾತನಾಡಿ, ಸಂವಿಧಾನದ ಆಶಯವನ್ನು ನಾವು ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳು ಅಳವಡಿಸಿಕೊಂಡು ಮಕ್ಕಳಿಗೆ ಹೇಳುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದು ಹೇಳಿದರು.
. ಇದೇ ಸಂದರ್ಭದಲ್ಲಿ 2022-23ನೇ ಸಾಲಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ 7ನೇ ರ್ಯಾಂಕ್ ಪಡೆದ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿ ಸುಸ್ಮಾ ಚಿತ್ರಗಾರ ಹಾಗೂ ಶಿಕ್ಷಕ ನವೀನ ಗಾಡದ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ವೈಸ್ ಚೇರ್ಮನ್ ಬಸವಣ್ಣೆಪ್ಪ ಚಿಂದಿ, ನಿರ್ದೇಶಕರಾದ ವಿರುಪಾಕ್ಷಪ್ಪ ಅರುಟಗಿ, ಅಯ್ಯಪ್ಪ ವಾಳದುಂಕಿ, ಶಶಿಧರ ಜಾಲಿಹಾಳ, ಸುರೇಶ ರಾಜನಾಳ, ನೇತ್ರಾವತಿ ತಾಂಡೂರ, ಸುರೇಖಾ ತಿಪ್ಪಾ, ಪ್ರೇಮಾ ಚಿಂದಿ, ಪ್ರಾಚಾರ್ಯ ಎಚ್.ಎಸ್.ಘಂಟಿ, ಉಪನ್ಯಾಸಕಿಯರಾದ ಸರಿತಾ ಚಂದನ್ನವರ, ಬಿ.ಎ.ನದಾಫ್, ಎಸ್.ಎಂ. ನೆಲ್ಲೂರ, ಇಂದುಮತಿ ಬೋರಣ್ಣವರ, ವಿ.ಕೆ.ಬದಿ, ಎಸ್.ಸಿ.ಗದ್ದಿಗೌಡರ ಮತ್ತು ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.