ಯುಗಾದಿ ಚೈತ್ರ ಮಾಸ ಬಲಭೀಮಸೇನ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ
ಸೇಡಂ,ಎ,08: ತಾಲೂಕಿನ ಸುಕ್ಷೇತ್ರ ಮೋತಕಪಲ್ಲಿ ಶ್ರೀ ಬಲಭೀಮಸೇನ ದೇವಸ್ಥಾನದಲ್ಲಿ 09/04/2024 ರಂದು ಕ್ರೋದಿನಾಮ-ಸಂವತ್ಸರದ ಯುಗಾದಿ ಮಹೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ಈ ಕೆಳಗಿನಂತೆ ಮಾಡಲಾಗುತ್ತಿದೆ ಎಂದು ಶ್ರೀ ದೇವಸ್ಥಾನದ ಶ್ರೀಗಳು ತಿಳಿಸಿದ್ದಾರೆ.
1.ಬೆಳಿಗ್ಗೆ 5:00ಗೆ ಸುಪ್ರಭಾತ
2.ಬೆಳಗ್ಗೆ 8:30ಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಮತ್ತು ಪಂಚಾಂಗದ ಪೂಜೆ.
3.ಸಾಯಂಕಾಲ 5:00ಗೆ ಪಂಚಾಂಗ ಶ್ರವಣ &ಚಿmಠಿ; ಬೇವು ಬೆಲ್ಲ ಪ್ರಸಾದ ವಿತರಣೆ.
4.ಸಾಯಂಕಾಲ 7:30 ಗಜವಾಹನೋತ್ಸವ ಮತ್ತು ತೊಟ್ಟಿಲೋತ್ಸವ ಜರುಗಲಿದೆ.
ಭಾರತದಲ್ಲಿ ಯುಗಾದಿ ಚೈತ್ರ ಮಾಸದ ಮೊದಲ ದಿನ ಈ ದಿನ ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ.” ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.
ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ಬೇವು – ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ.
ಯುಗಾದಿಯ ದಿನ ನಿಂಬಫಲಭಕ್ಷಣದ ಮಂತ್ರ :
ಶತಾಯುರ್ವಜ್ರದೇಹತ್ವo ಸರ್ವಸಂಪತ್ಪ್ರದಂ ತಥಾ ಟ ಸರ್ವಾರಿಷ್ಟಹರಂ ಕುರ್ವೇ ನಿಂಬಪತ್ರಾಶನಂ ಶುಭಮ್ ಟಟ ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ. ಪ್ರತಿಯೊಬ್ಬರ ಜೀವನವು ನೋವು-ನಲಿವಿನಿಂದ ಕೂಡಿರುತ್ತದೆ. ಅವುಗಳನ್ನು ಸಮಾನ ದೃಷ್ಟಿಯಲ್ಲಿ ಸ್ವೀಕರಿಸಬೇಕು. ನೋವು ಎದುರಾದಾಗ ದೃತಿಗೆಡದೆ, ನಲಿವಿನಿಂದಾಗಿ ಅಹಂಕಾರಕ್ಕೆ ಒಳಗಾಗದೆ, ಎರಡು ಸಂದರ್ಭದಲ್ಲೂ ಸಮತೋಲನವನ್ನು ಕಾಯ್ದುಕೊಂಡು ಜೀವನವನ್ನು ನಡೆಸಬೇಕು. ಅಂತೆಯೇ ಒಂದು ವರ್ಷ ಎಂದರೆ 365 ದಿನಗಳು ಈ ದಿನಗಳಲ್ಲಿ ಸಂಪೂರ್ಣವಾಗಿ ಸಂತೋಷದಿಂದ ಹಾಗೂ ಕೇವಲ ದುಃಖದಿಂದಲೇ ಕೂಡಿರುವುದಿಲ್ಲ. ಸುಖ-ದುಃಖ ಎರದು ಚಕ್ರದ ರೀತಿಯಲ್ಲಿ ತಿರುಗುತ್ತಿರುತ್ತದೆ. ಆಗ ಎಲ್ಲವನ್ನೂ ಸಮನಾಗಿ ಸ್ವೀಕರಿಸುತ್ತಾ ಸಾಗಬೇಕು ಎನ್ನುವುದೇ ಯುಗಾದಿ ಹಬ್ಬದ ಒಳಾರ್ಥ.
ಯುಗಾದಿ ದಿನದಂದು ವಿಶೇಷವಾದ ಪಚಡಿಯನ್ನು ತಯಾರಿಸಲಾಗುತ್ತದೆ. ಉಪ್ಪು, ಸಿಹಿ, ಹುಳಿ, ಒಗರು, ಕಹಿ ಮತ್ತು ಖಾರ ಹೊಂದಿರುವ ವಿಶೇಷ ಪಚಡಿ ಇದಾಗಿದೆ. ಬೆಲ್ಲ, ಜೀವನದಲ್ಲಿ ಆಸಕ್ತಿ ಸೂಚಿಸುವ ಉಪ್ಪು, ಜೀವನದಲ್ಲಿ ಬರುವ ಕಷ್ಟಗಳ ಸೂಚನೆಯಾದ ಬೇವು, ಬದುಕಿನ ಸವಾಲಿನ ಕ್ಷಣಗಳಿಗೆ ಸೂಚನೆಯಾದ ಹುಳಿ, ಹೊಸ ಸವಾಲುಗಳು ಮತ್ತು ಕಾತರವನ್ನು ಸೂಚಿಸುವ ಎಳೆ ಮಾವಿನಕಾಯಿ ತುಂಡುಗಳು, ಬದುಕಿನಲ್ಲಿ ಸಿಟ್ಟಿಗೆ ಕಾರಣವಾದ ಕ್ಷಣಗಳನ್ನು ಸೂಚಿಸುವ ಮೆಣಸಿನ ಹುಡಿ ಹೀಗೆ ಈ ಆರೂ ಸಾಮಾಗ್ರಿಗಳನ್ನು ಬಳಸಿ ಪಚಡಿಯನ್ನು ತಯಾರಿಸಲಾಗುತ್ತದೆ.