ಪುರವಂತರಿಗೆ ಮಾಶಾಸನ ನೀಡಬೇಕು: ಸಿದ್ರಾಮಪ್ಪ ಆಲಗೂಡಕರ್
ಕಲಬುರಗಿ:ಏ. 8:ಹಿಂದಿನ ಸರಕಾರ ದಕ್ಷಿಣ ಕನ್ನಡದ ಯಕ್ಷಗಾನ ಕಲಾವಿದರಿಗೆ ಮಾಶಾಸನ ಮಂಜೂರು ಮಾಡಿದೆ. ಆದರೆ ವೀರಭದ್ರನ ವಡಪುಗಳು ಹೇಳುವ ನಮ್ಮ ಉತ್ತರ ಕರ್ನಾಟಕದ ವೀರಗಾಸೆ ನೃತ್ಯ ಕಲಾವಿದರಿಗೆ ಸರ್ಕಾರ ಮಾಶಾಸನ ಮಂಜೂರು ಮಾಡಿರುವುದಿಲ್ಲ. ಆದ್ದರಿಂದ ಪ್ರಸ್ತುತ ಸರ್ಕಾರವು ಮಾಶಾಸನ ನೀಡಬೇಕೆಂದು ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ್ ತಿಳಸಿದ್ದಾರೆ.
ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದ ಗೋತ್ರಪುರುಷನಾದ ಶ್ರೀ ವೀರಭದ್ರ ದೇವರ ಒಡಪುಗಳು ಹೇಳುತ್ತಿರುವ ಪುರವಂತರು ವೀರಗಾಸೆ, ನೃತ್ಯ ಕಲೆ ಪ್ರದರ್ಶಿಸುತ್ತ ಶ್ರೀ ವೀರಭದ್ರನ ಅನುಯಾಯಿಗಳಾಗಿ ಸಾವಿರಾರು ವಷರ್Àಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಷ್ಟದಲ್ಲಿ ಉಪಜೀವನ ಸಾಗಿಸುತ್ತಿರುವ ಪುರವಂತರಿಗೆ ಮಾಶಾಸನ ಮಂಜೂರು ಮಾಡಿ ಪುರಾತನ ಸಂಸ್ಕøತಿ ಕಲೆ ಸಂರಕ್ಷಿಸಿ ಬೆಳೆಸಬೇಕೆಂದು ಸಿದ್ರಾಮಪ್ಪ ಆಲಗೂಡಕರ್ ತಿಳಿಸಿದ್ದಾರೆ.