ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ
ಕಾಳಗಿ.ಎ.8. ಈ ಬಾರಿ ರಂಜಾನ್ ಹಾಗೂ ಯುಗಾದಿ ಹಬ್ಬಗಳು ಒಟ್ಟಾಗಿ ಬಂದಿದ್ದು, ಶಾಂತಿ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಸಿಪಿಐ ಎನ್.ವೈ. ಗುಂಡುರಾವ್ ಹೇಳಿದರು. ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ರವಿವಾರ ಹಮ್ಮಿಕೊಂಡಿದ್ದ ರಂಜಾನ್ ಮತ್ತು ಯುಗಾದಿ ಪ್ರಯುಕ್ತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದೂಗಳಿಗೆ ಯುಗಾದಿ ಹಾಗೂ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಪವಿತ್ರ ಹಬ್ಬಗಳಾಗಿವೆ. ಎರಡು ಹಬ್ಬಗಳನ್ನು ಸಂಭ್ರಮ, ಸಡಗರದಿಂದ ಶಾಂತಿಯುತವಾಗಿ ಎಲ್ಲರೂ ಹಬ್ಬವನ್ನು ಆಚರಿಸಬೇಕು ಎಂದರು. ಪಿ ಎಸ್ ಐ ವಿಶ್ವನಾಥ ಬಾಕಳೆ, ಮಹಮ್ಮದ್ ಗುಡುಸಾಬ್, ರವಿದಾಸ ಪತಂಗೆ, ರೇವಣಸಿದ್ಧ ಕಲಶೆಟ್ಟಿ, ಕಾಳಪ್ಪ ಕರೆಮನೋರ್,ವಿಠ್ಠಲ್ ಸೇಗಾಂವಕರ್, ಹೈದರ್ ಅಲಿ, ಪ್ರಭಾಕರ್ ಡೊಣ್ಣೂರ್, ಪ್ರಭಾಕರ್ ಪೂಜಾರಿ ಸೇರಿದಂತೆ ಅನೇಕರಿದ್ದರು.