ದೆಗಲೂರ್‍ನಿಂದ ಮೈಲಾರಕ್ಕೆ ಪೂಜ್ಯ ಗುಂಡುಮಹಾರಾಜ ಪಲ್ಲಕಿ ಯಾತ್ರೆಗೆ ಸ್ವಾಗತ
ಬೀದರ್: ಏ.8:ಮಹಾರಾಷ್ಟ್ರದ ದೆಗಲೂರ್‍ದಿಂದ ಹೊರಟಿದ್ದ ಸದ್ಗುರು ಶ್ರೀ ಗುಂಡುಮಹಾರಾಜ ಪಲ್ಲಕ್ಕಿಯು ಭಾಲ್ಕಿ ತಾಲೂಕಿನ ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಆಗಮಿಸಿದೆ.
ದೆಗಲೂರಿನಲ್ಲಿರುವ ಪೂಜ್ಯ ಸದ್ಗುರು ಗುಂಡುಮಹಾರಾಜ ಸಂಸ್ಥಾನದಿಂದ ಪ್ರತಿ ವರ್ಷ ಈ ಪಲ್ಲಕ್ಕಿ ಪಾದಯಾತ್ರೆಯು ಮೈಲಾರ ಕ್ಷೇತ್ರಕ್ಕೆ ಆಗಮಿಸುತ್ತದೆ. ಪೂಜ್ಯ ಸದ್ಗುರು ಚಂದ್ರಶೇಖರ ಮಹಾರಾಜ ದೆಗಲೂಕರ್‍ಕರ್ ಅವರ ಮಾರ್ಗದರ್ಶನದಲ್ಲಿ ಏಪ್ರಿಲ್ 1 ರಂದು ಮಧ್ಯಾಹ್ನ ದೆಗಲೂರಿನಿಂದ ಹೊರಟ್ಟಿದ್ದ ಯಾತ್ರೆಯು ಭಾನುವಾರ ಮೈಲಾರ ಕ್ಷೇತ್ರ ತಲುಪಿತು.
ಪೂಜ್ಯರನ್ನು ಬಿಜೆಪಿಯ ಹಿರಿಯ ನಾಯಕ ಈಶ್ವರಸಿಂಗ್ ಠಾಕೂರ್, ವೆಂಕಟೇಶ್ ಮೋರಖಂಡಿಕರ್ ಮತ್ತಿತರ ಗಣ್ಯರು ಸತ್ಕರಿಸಿ, ಗೌರವಿಸಿದರು.
ಮೈಲಾರ ಕ್ಷೇತ್ರದಲ್ಲಿ ಪೂಜ್ಯ ಚಂದ್ರಶೇಖರ ಮಹಾರಾಜರಿಂದ ಕೀರ್ತನ ನಡೆಯಿತು. ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೆಗಲೂರಿನ ಸದ್ಗುರು ಗುಂಡೂಮಹಾರಾಜ ಸಂಸ್ಥಾನದ ನೂರಾರು ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ದೆಗಲೂರು, ಖರಗ, ಯೇರಗಿಫಾಟಾ, ಚಂಡೇಗಾಂವ್, ಮಾಳೇಗಾಂವ್, ಕ್ಷೀರಸಮುದ್ರ, ಮಾನೂರು (ಬಿ), ಸೋಪೂರ, ಕರಂಜಿ (ಬಿ), ನಾಗನಪಳ್ಳಿ, ಚಿಂತಾಕಿ, ಸುಂಕನಾಳ ಕ್ರಾಸ್, ಉಜನಿ, ಚಾಂಬೋಳ, ನವಲಾಸಪುರ ಕ್ರಾಸ್, ದದ್ಧಾಪುರ, ನೌಬಾದ್ ಮೂಲಕ ಈ ಯಾತ್ರೆಯು ಮೈಲಾರ ಕ್ಷೇತ್ರ ತಲುಪಿತು.