ಕೃಷ್ಣರಾಜದಲ್ಲಿ ಎಂ.ಲಕ್ಷ್ಮಣ್ ಅಬ್ಬರದ ಪ್ರಚಾರ
ಸಂಜೆವಾಣಿ ನ್ಯೂಸ್
ಮೈಸೂರು: ಏ.08:- ಮೈಸೂರು ಕೊಡಗು ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಭಾನುವಾರ ನಗರದ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿ ಮತಯಾಚಿಸಿದರು.
ನಗರದ ಕುಕ್ಕರಹಳ್ಳಿ ಕೆರೆ ವಾಯುವಿಹಾರಿಗಳನ್ನು ಕೆ.ಆರ್.ಕ್ಷೇತ್ರದ ವಾರ್ಡ್ ನಂ 54 ಕನಕಗಿರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿರುಸಿನ ಮತಭೇಟೆ ನಡೆಸಿದರು.
ಈ ವೇಳೆ ಎಂ.ಲಕ್ಷ್ಮಣ ಮಾತನಾಡಿ, ಈ ಬಾರಿ ನನಗೆ ಒಂದು ಅವಕಾಶ ಕೊಡಿ. ರಾಜ್ಯದ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲವಾಗುತ್ತಿವೆ.
ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸರಕಾರ ಗೆದ್ದು ಅಧಿಕಾರಕ್ಕೆ ಬಂದರೆ 5 ನ್ಯಾಯ ಯೋಜನೆ ಮೂಲಕ 21 ಗ್ಯಾರಂಟಿಗಳನ್ನು ಜನರಿಗೆ ನೀಡಲಿದ್ದಾರೆ.
ಹೀಗಾಗಿ ಅವಕಾಶ ಮಾಡಿ ಕೊಡಬೇಕು ಸಾಮಾನ್ಯ ಕಾರ್ಯಕರ್ತರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮತಯಾಚನೆ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಲ್. ಭಾಸ್ಕರ್ ಗೌಡ ,ಆರ್.ಗಿರೀಶ್ ಮಾಜಿ ಮೇಯರ್ ಬಿ.ಕೆ ಪ್ರಕಾಶ್, ಪುರುಷೋತ್ತಮ್, ಬೀರಿ ಹುಂಡಿ ಬಸವಣ್ಣ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಬಿ.ಎಂ ರಾಮ್, ಕೃಷ್ಣ ರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕನಕಗಿರಿಗೆ ಮೈಸೂರು ಕೊಡಗು ಲೋಕ ಸಭಾ ಕ್ಷೇತ್ರ ಅಭ್ಯರ್ಥಿ ಎಂ .ಲಕ್ಷ್ಮಣ್ ರವರು ಭೇಟಿ ನೀಡಿ ಮತಯಾಚನೆ ಮಾಡಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್, ಮಹಿಳಾ ಅಧ್ಯಕ್ಷೆ ಭವ್ಯ, ಬಿ.ಎಂ.ರಾಮು, ಪ್ರಧಾನ ಕಾರ್ಯದರ್ಶಿ ಗಿರೀಶ್, ವೆಂಕಟೇಶ್ ಮುಂತಾದವರು ಲಕ್ಷ್ಮಣ್ ಅವರಿಗೆ ಸಾಥ್ ನೀಡಿದರು.