ಜವಾಹರ ನವೋದಯ ವಿದ್ಯಾಲಯಕ್ಕೆ ಜ್ಯೋತಿ ದಾನಪ್ಪ ಆಯ್ಕೆ
ಹುಮನಾಬಾದ್:ಏ.8: ತಾಲ್ಲೂಕಿನ ಹುಡಗಿ ಗ್ರಾಮದ ಬಸವತೀರ್ಥ ವಿದ್ಯಾಪೀಠ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿನಿ ಜ್ಯೋತಿ ದಿನೇಶ ದಾನಪ್ಪ ಅವಳು 2023, 34 ನೇ ಸಾಲಿನಲ್ಲಿ ನಡೆದ ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾಳೆ,
ವಿದ್ಯಾರ್ಥಿನಿಯು ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗುವ ಮೂಲಕ ಹುಡಗಿ ಬಸವತೀರ್ಥ ವಿದ್ಯಾಪೀಠ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಕೀರ್ತಿಯೂ ಜಿಲ್ಲಾ ಮಟ್ಟದಲ್ಲಿ ಹೆಚ್ಚಿಸಿದ್ದಾಳೆ, ಸಂಸ್ಥೆಯ ಅಧ್ಯಕ್ಷ ಕಲ್ಲಪ್ಪಾ ಮಾಳಶೆಟ್ಟಿ ಕಾರ್ಯದರ್ಶಿ ಶಂಕರ ನಂದಿ, ಮುಖ್ಯಗುರು ವಿಜಯಕುಮಾರ ಶಹಾನೂರ ಶಿಕ್ಷಕರಾದ ಕಾಶಯ್ಯ ತೆಲಂಗಾಣಿ, ಮಾಣಿಕಪ್ಪ ಮಳಶೆಟ್ಟಿ, ಮಹಾದೇವಿ ನಂದಿ, ಕಾಳಿದಾಸ ಪೆನೆ, ಶ್ರೀಮಂತ ರಾಜೇಶ್ವರ, ದಿಗಂಬರ್ ಕಾಂಬಳೆ, ಸುಬ್ಬಣ್ಣ ನಾಗರಕಟ್ಟಿ, ಕರೆಪ್ಪ ಮೇಳಶೆಟ್ಟಿ, ವಿಜಯಲಕ್ಷಿ ಮೀತ್ರಾ ಅವರು ಹರ್ಷವ್ಯಕ್ತಪಡಿಸಿ, ವಿದ್ಯಾರ್ಥಿನಿಗೆ ಅಭಿನಂದಿಸಿದ್ದಾರೆ.