ಅಂಬೇಡ್ಕರ್ ಜಯಂತಿ ಭಿತ್ತಿಪತ್ರ ಬಿಡುಗಡೆ: ವಿನೂತನವಾಗಿ ಅಂಬೇಡ್ಕರ್ ಜಯಂತಿ ಆಚರಣೆಗೆ ನಿರ್ಧಾರ
ಔರಾದ್ : ಏ.8:ಪಟ್ಟಣದಲ್ಲಿ ಏ.12ರಿಂದ 14ರವರೆಗೆ ಆಚರಿಸಲಾಗುತ್ತಿರುವ ಡಾ. ಬಿಆರ್. ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖಂಡ ಬಸವರಾಜ ದೇಶಮುಖ ಹೇಳಿದರು.
ಪಟ್ಟಣದ ಕನ್ನಡ ಭವನದಲ್ಲಿ ಈಚೇಗೆ ಸುಭಾಷ ಚಂದ್ರಬೋಸ್ ಯುವಕ ಸಂಘ ಹಾಗೂ ಸಿವಿಲ್ ರೈಟ್ಸ್ ಪೆÇ್ರಟೆಕ್ಷನ್ ಕಮಿಟಿ ಹಮ್ಮಿಕೊಂಡ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಲ್ಲ ಸಮುದಾಯದವರು ಸೇರಿ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡಲು ಮುಂದಾಗಿರುವದು ಹರ್ಷ ತಂದಿದೆ ಎಂದರು.
ಪಟ್ಟಣ ಪಂಚಾಯತ ಸದಸ್ಯ ಇಮಾನವೆಲ್ ದರಬಾರೆ ಮಾತನಾಡಿ, ಸುಭಾಷ್ ಚಂದ್ರಬೋಸ್ ಯುವಕ ಸಂಘ ಹಾಗೂ ಸಿವಿಲ್ ರೈಟ್ಸ್ ಪೆÇ್ರಟೆಕ್ಷನ್ ಕಮಿಟಿ ಏ 12 ರಿಂದ ಮೂರು ದಿನಗಳ ಕಾಲ ಡಾ. ಬಿಆರ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ನಾನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದು ವಿನೂತನ ಕಾರ್ಯಕ್ರಮವಾಗಿದ್ದು, ತಾಲೂಕಿನ ನಾನಾ ಗ್ರಾಮಗಳಿಂದ ಅಂಬೇಡ್ಕರ್ ಅವರ ಅನುಯಾಯಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸಿವಿಲ್ ರೈಟ್ಸ್ ಪೆÇ್ರಟೆಕ್ಷನ್ ಕಮಿಟಿಯ ಪ್ರಮುಖ ರಾಹುಲ್ ಖಂದಾರೆ ಮಾತನಾಡಿ, ಜಯಂತಿ ನಿಮಿತ್ತ ಹಮ್ಮಿಕೊಳ್ಳುವ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ 3 ಸಾವಿರ, ದ್ವಿತೀಯ 2 ಸಾವಿರ, ತೃತೀಯ 1 ಸಾವಿರ ಬಹುಮಾನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಏ.12ರಂದು ಬೆಳಗ್ಗೆ 10 ಗಂಟೆಗೆ ಪ್ರಬಂಧ ಸ್ಪರ್ಧೆ ನಡೆಯಲಿದೆ. ಏ.13 ಬೆಳಗ್ಗೆ 9 ಗಂಟೆಗೆ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ. ಜಾಥಾದಲ್ಲಿ ಮಹಾತ್ಮರ ಭಾವಚಿತ್ರಗಳೊಂದಿಗೆ ವಿನೂತನವಾಗಿ ಜಾಥ ನಡೆಯಲಿದ್ದು, ಬಳಿಕ ಕನ್ನಡ ಭವನದಲ್ಲಿ ಮಧ್ಯಾಹ್ನ 11: 30 ಗಂಟೆಗೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು. ಅಲ್ಲದೇ ಏ. 14ರಂದು ಸಾಯಂಕಾಲ ರಾಮನಗರ ಬಡಾವಣೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಮೆರವಣಿಗೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಯುವಕ ಸಂಘದ ಅಧ್ಯಕ್ಷ ರತ್ನದೀಪ ಕಸ್ತೂರೆ, ಶರಣಪ್ಪ ಪಾಟೀಲ್, ಅನಿಲ? ನಿರ್ಮಳೆ, ಕರವೇ ಅಧ್ಯಕ್ಷ ಅನಿಲ ದೇವಕತ್ತೆ, ಪ್ರಕಾಶ ಕಾಂಬಳೆ, ಸಂತೋಷ ಶಿಂಧೆ, ಶಾಂತಕುಮಾರ ಭಾವಿಕಟ್ಟೆ, ವಿಶ್ವದೀಪ ಕಸ್ತೂರೆ, ಸುಧಾಕರ್ ಚವ್ಹಾಣ ಸೇರಿದಂತೆ ಅನೇಕರಿದ್ದರು.