ಡಿ.ರವಿಶಂಕರ್ ಸಾರಾ.ಮಹೇಶ್‍ಗೆ ತಿರುಗೆಟು
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಎ.08:- ನಾನು 2 ಬಾರಿ ಸೋತರು ನಿವು ಅಧಿಕಾರದಲ್ಲಿದ್ದಾಗ ಎಲ್ಲಾ ರೀತಿಯ ಸಹಕಾರವನ್ನ ನೀಡಿದ್ದೇನೆ ಆದರೆ ಜನ ನನಗೋಂದು ಅವಕಾಶ ಕೊಟ್ಟಿದ್ದಾರೆ ನಾನು ಅಭಿವೃದ್ದಿ ಮಾಡಲು ಮುಂದಾದರೆ ರಾಜಕೀಯ ದ್ವೇಷ ಏಕೆ ಮಾಡುತ್ತಿರಿ ತಾಲ್ಲೂಕಿನಲ್ಲಿ ಸಾರಸ್ಯದ ರಾಜಕಾರಣ ನಡೆಯಲು ನನ್ನಗೆ ಸಹಕಾರಿಸಿ ಎಂದು ಮಾಜಿ ಶಾಸಕ ಸಾರಾ.ಮಹೇಶ್ ಅವರಿಗೆ ತಿರುಗೆಟು ನೀಡಿದರು.
ಪಟ್ಟಣದ ಕಾಳೇನಹಳ್ಳಿ ರಸ್ತೆಯಲ್ಲಿರುವ ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇತ್ತೀಚೆಗೆ ಕೆ.ಆರ್.ನಗರದಲ್ಲಿ ನಡೆದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪರ ಚುನಾವಣ ಪ್ರಚಾರದಲ್ಲಿ ಮಾಜಿ ಶಾಸಕ ಸಾ.ರಾ.ಮಹೇಶ್, ಶಾಸಕ ಡಿ.ರವಿಶಂಕರ್ ಅವರ ಕುಟುಂಬದ ಮೇಲೆ ನಡೆಸಿದ ಆರೋಪ ಮತ್ತು ಟಿಕೆಗಳಿಗೆ ಉತ್ತರಿಸಿದ ಶಾಸಕರು ನನ್ನನ್ನು ಬಿಕ್ಷೆ ಬಿಡಿ ಎಂದು ಟಿಕೆ ಮಾಡಿದ್ದಿರಿ ಹೌದು ಸ್ವಾಮಿ ನಾನು ಪ್ರತಿ ಮನೆ ಮನೆಗೆ ಹೋಗಿ ಮತ ಬಿಕ್ಷೆ ಪಡೆದು ಶಾಸಕ ನಾಗಿದ್ದೇನೆ ನನ್ನ ಸಂಸ್ಕೃತಿ ಹಿರಿಯರ ಮತ್ತು ಮತದಾರರ ಪಾದಗಳಿಗೆ ಸಮಸ್ಕಾರಿಸಿ ಗೌರವಿಸುವುದಾದರೆ ನಿಮ್ಮ ಸಂಸ್ಕೃತಿ ಹಿರಿಯರು ಮತದಾರರು ನಿಮ್ಮ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದು ಕೊಳ್ಳುವಂತಹದಾಗಿದೆ ಇದು ಯಾವ ಸಂಸ್ಕೃತಿ ಸ್ವಾಮಿ?
ಯಾವುದೇ ಕೆಲಸ ಆಗ ಬೇಕು ಎಂದರೆ ತೋಟದ ಮನೆಗೆ ಹೋಗಬೇಕು ಎಂದು ನಮ್ಮ ಕುಟುಂಬದ ಬಗ್ಗೆ ವ್ಯಂಗವಾಡಿದ್ದಿರಿ ಹೌದು ಸ್ವಾಮಿ ನಮ್ಮ ಮನೆ ಇರುವುದು ತೋಟದ ಮನೆಯಲ್ಲಿ ಅಪ್ಪ-ಮಗ ಒಟ್ಟಿಗೆ ಇದ್ದೇವೆ ಅದು ನಮ್ಮ ಕ್ಷೇತ್ರದಲ್ಲಿರುವುದು ದಿನ ನಿತ್ಯ ಜನರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡುತ್ತಿದ್ದೇನೆ ನಿಮ್ಮ ತರ 50ಕೀ.ಮಿ ದೂರ ವಿರುವ ಮೈಸೂರಿಗೆ ಕರೆಸಿಕೊಂಡು ಹಿರಿಯರು-ಕಿರಿಯರು ಎನ್ನದೆ ಕ್ಯೂನಲ್ಲಿ ನಿಲ್ಲಿಸುತ್ತಿರಿ ಎಂದು ವ್ಯಂಗವಾಡಿದರು.
ಪುರಸಭೆಯ ವಾಣಿಜ್ಯ ಮಳಿಗೆಗಳ ವಿಚಾರವಾಗಿ ನಿಮ್ಮ ಪಕ್ಷದ ಕಾರ್ಯಕರ್ತರೊಬ್ಬ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿರುವುದು ಖಂಡನೀಯ ಮಳಿಗೆಗಳ ವಿಚಾರವಾಗಿ ಒಂದು ರೂಪಾಯಿ ಹಣ ಪಡೆದಿದ್ದರೆ ಅವತ್ತೆ ರಾಜಕೀಯದಿಂದ ದೂರ ಉಳಿಯುತ್ತೇನೆ ದಾಖಲೆಗಳು ಇಲ್ಲದೆ ಆರೋಪ ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ನಾನು ಶಾಸಕ ನಾದ ಮೇಲೆ ಯಾವುದೇ ಪಕ್ಷ, ಜಾತಿ, ಧರ್ಮಗಳನ್ನು ವಿಂಗಡಣೆ ಮಾಡದೇ ಎಲ್ಲಾ ಸಮಾಜಗಳ ಸರ್ವೂತೋಮುಖ ಅಭಿವೃದ್ದಿಗೆ ಸ್ಪಂದಿಸುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಎಸ್.ಟಿ ಘಟಕದ ಉಪಾಧ್ಯಕ್ಷ ಶ್ರೀನಿವಾಸ್, ಬ್ಲಾಕ್ ಅಧ್ಯಕ್ಷರುಗಳಾದ ಎಂಎಸ್.ಮಹದೇವ, ಉದಯ್ ಶಂಕರ್, ನಗರಧ್ಯಕ್ಷ ರಮೇಶ್, ಪ್ರಭಾಕರ್, ವಕ್ತಾರ ಸೈಯಾದ್ ಜಾಬೀರ್, ಪುರಸಭಾ ಸದಸ್ಯರಾದ ಕೋಳಿ ಪ್ರಕಾಶ್, ಜಾವೀದ್ ಪಾಷ, ನಟರಾಜ್, ಶಿವುನಾಯಕ್, ಶಂಕರ್ ಸ್ವಾಮಿ, ಮಿಕ್ಸರ್ ಶಂಕರ್, ನಗರಯೋಜನ ಪ್ರಾದಿಕಾರದ ಅಧ್ಯಕ್ಷ ಗಡ್ಡಮಹೇಶ್, ಮುಖಂಡರಾದ ನರಸಿಂಹರಾಜು, ನಾಗೇಂದ್ರ, ಹಾಡ್ಯ ಮಹದೇವಸ್ವಾಮಿ, ಮಂಜಪ್ಪ, ಗೀತಾಮಹೇಶ್, ವಿನಯ್, ಎಸ್.ಟಿ ಘಟಕದ ಅಧ್ಯಕ್ಷ ತಿಪ್ಪೂರು ಮಹದೇವ, ಎಸ್.ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ನಂದೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.