ಸಂಸದನಾದರೆ ನಂದಗುಡಿಗೆ ಎಝಡ್ ಗೆ ಮರುಜೀವ ಸುಧಾಕರ್ ಭರವಸೆ
ಹೊಸಕೋಟೆ : ನಂದಗುಡಿ ಹೋಬಳಿಯಲ್ಲಿ ಕಳೆದ ೨೫ ವರ್ಷಗಳಿಂದ ನೆನೆಗುದಿಗೆ ಬಿದ್ದು ಅತಂತ್ರ ಪರಿಸ್ಥಿತಿಯಲ್ಲಿರುವ ಎಸ್ ಇಝಡ್ ಗೆ ನಾನು ಸಂಸದನಾದ ಕೆಲವೇ ತಿಂಗಳುಗಳಲ್ಲಿ ಮರುಜೀವ ನೀಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ತಿಳಿಸಿದರು.
ನಂದಗುಡಿ ಖಾಸಗಿ ಸಭಾಭವನದಲ್ಲಿ ನಡೆದ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಕಾಯಕ ಯೋಗಿ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಭಾರತದ ನೋಟವನ್ನೇ ಬದಲಾಯಿಸಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತವು ಶಕ್ತಿಯಾಗಿ ದೇಶವಾಗಿ ಹೊರಹೊಮ್ಮುವಂತೆ ಅವರು ಮಾಡಿರುವುದು. ದೊಡ್ಡ ಹೆಮ್ಮೆ. ಅವರ ಆಡಳಿತವನ್ನು ಮಾದರಿಯಾಗಿಟ್ಟುಕೊಂಡಿರುವ ನಾನು ಕಳೆದ ೧೦ ವರ್ಷಗಳಿಂದ ನಿರಂತರವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಎಂದರು.
ಈಗ ನನ್ನ ಸೇವೆಯನ್ನು ಇಡೀ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾತರ ಜಿಲ್ಲೆಗೆ ವಿಸ್ತರಿಸುವ ಅವಕಾಶ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿಗೆ ಇಡೀ ದೇಶವೇ ಗೌರವಿಸುವ ಕೆಲಸ ಆಗುತ್ತಿದೆ. ಈ ಭಾರಿಯ ನರೇಂದ್ರ ಮೋದಿಯವರು ಮೂರನೇ ಭಾರಿಗೆ ಪ್ರಧಾನಿ ಆಗುವುದು ನಿಶ್ಚಿತ. ಆದ್ದರಿಂದ ಅವರ ಜೊತೆ ಕೆಲಸ ಮಾಡಲು ಒಂದು ಅವಕಾಶಕೊಡಿ ಎಂದರು.
ಮಾಜಿ ಸಚಿವ ಎಂಟಿಬಿ ನಾಗರಾಜ್ ದೇಶದಲ್ಲಿ ಮೂರನೇ ಭಾರಿಗೆ ಪ್ರಧಾನಮಂತ್ರಿ ಆಗುವ ಯೋಗ ಇರುವುದು ನರೇಂದ್ರ ಮೋದಿಯವರಿಗೆ ಮಾತ್ರ. ನರೇಂದ್ರ ಮೋದಿಯವರ ಅಭಿವೃದ್ಧಿ ಮೆಚ್ಚಿ ಜೆಡಿಎಸ್ ಪಕ್ಷವು ಈ ಭಾರಿ ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ನಿಂತಿದೆ. ವಿಧಾನ ಸಭೆ ಚುನಾವಣೆಯಲ್ಲಿ ಗ್ಯಾರಂಟಿ ನಂಬಿ ಮತ ಹಾಕಿದ್ರಿ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದ ದಿನದಿಂದ ತೀವ್ರ ಬರಗಾಲ ಬಂದು ಮಳೆ ಇಲ್ಲದಂತಾಗಿದೆ. ಯಾವುದೇ ರೀತಿಯ ಅಭಿವೃದ್ಧಿ ಸಹ ಆಗುತ್ತಿಲ್ಲ. ಆದ್ದರಿಂದ ಮತದಾರರು ಈ ಭಾರಿ ಲೋಕಸಭೆ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಅವರಿಗೆ ಮತ ಹಾಕುವ ಮೂಲಕ ನರೇಂದ್ರ ಮೋದಿ ಕೈ ಬಲಪಡಿಸಬೇಕು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ. ಸತೀಶ್, ಉಪಾಧ್ಯಕ್ಷ ಎಂ. ಚಂದ್ರಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನುರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ಬಿ. ಎಂ. ನಾರಾಯಣಸ್ವಾಮಿ, ಜಿಪಂ ಮಾಜಿ ಸದಸ್ಯ ಸಿ. ನಾಗರಾಜ್, ಮುಖಂಡರಾದ ವೈ ಎಸ್ ಎಂ ಮಂಜು, ರಘುವೀರ್ ಖಿಜರ್ ಅಹಮದ್, ಬಾಲಚಂದ್ರ, ಕೆ. ಸುರೇಶ್, ಚಂದ್ರ ಮೋಹನ್, ಹನುಮಂತೆಗೌಡ, ಸುಜಾತ ನಾಗರಾಜ್ ಇದ್ದರು