ನುಡಿದಂತೆ ನಡೆದ ಕಾಂಗ್ರೆಸ್ – ಪರಮೇಶ್ವರ್ ನಾಯಕ್
ಆನೇಕಲ್. ಏ. ೮- ಚುನಾವಣೆ ಬಂದ ಸಮಯದಲ್ಲಿ ಕರ್ನಾಟಕ ಜನರ ಮುಂದೆ ಬರುವ ಪ್ರದಾನಿ ನರೇಂದ್ರ ಮೋದಿರವರು ರಾಜ್ಯದಲ್ಲಿ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ತೊಂದರೆ ಆದಾಗ ಜನರ ಬಳಿ ಹೋಗಿಲ್ಲ ಎಂದು ಮಾಜಿ ಸಚಿವ ಪರಮೇಶ್ವರ್ ನಾಯಕ್ ಆರೋಪಿಸಿದರು.
ಅವರು ಜಿಗಣಿ ಯಲ್ಲಿ ಆಯೋಜಿಸಿದ್ದ ಬಂಜಾರ ಸಮುದಾಯದ ಸಭೆಯಲ್ಲಿ ಡಿ.ಕೆ. ಸುರೇಶ್ ರವರ ಪರವಾಗಿ ಮತಯಾಚಿಸಿ ಮಾತನಾಡಿದರು. ರಾಜ್ಯದ ತೆರಿಗೆ ವಿಚಾರದಲ್ಲಿ ಡಿಕೆ ಸುರೇಶ್ ರವರು ಮಾತನಾಡಿದಾಗ ಅದಕ್ಕೂ ಕೂಡ ಬಿಜೆಪಿಯವರು ಹಲವಾರು ಸುಳ್ಳಿನ ಕಂತೆಗಳನ್ನು ಕಟ್ಟಿ ಡಿ.ಕೆ.ಸುರೇಶ್ ರವರನ್ನು ದೇಶದ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ ಎಂದರು. ಕಾಂಗ್ರೆಸ್ ಸರ್ಕಾರ ವಿಧಾನ ಸಭೆ ಚುನಾವಣೆ ಸಮಯದಲ್ಲಿ ರಾಜ್ಯದ ಜನತೆಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದಾರೆ ಎಂದು ತಿಳಿಸಿದರು, ಇನ್ನು ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಕೆ.ಸುರೇಶ್ ರವರಿಗೆ ಬಂಜಾರ ಸಮುದಾಯ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಸಾಹಿತಿ ಬಿ.ಟಿ ಲಲಿತಾ ನಾಯಕ್ ಮಾತನಾಡಿ ಡಿಕೆ ಸುರೇಶ್ ಒಬ್ಬ ಸಮರ್ಥ ರಾಜಕಾರಣಿ ಸಮಾಜದಲ್ಲಿನ ಅಂಕುಡೊಂಕುಗಳನ್ನು ನೇರವಾಗಿ ಮಾತನಾಡುವ ಶಕ್ತಿ ಇರುವ ವ್ಯಕ್ತಿಯಾಗಿದ್ದು ಮತ್ತು ಬಡವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಮರ್ಥರು ಆಗಿದ್ದು ಇವರನ್ನು ಜನ ಅತಿ ಹೆಚ್ಚಿನ ಅಂತರದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಡಿಕೆ ರವಿ, ಮಹದೇವನಾಯಕ್, ಮುತ್ತಪ್ಪ ನಾಯಕ್, ಜಿಗಣಿ ಪುರಸಭಾ ಸದಸ್ಯರಾದ ಪ್ರಹ್ಲಾದ ರೆಡ್ಡಿ, ಗಿರಿಷ್ಮಾ ಶ್ರೀದರ್, ಜಿಗಣಿ ವಿನೋದ್, ಆನಂದ್ ಗೌಡ, ಸವಿತಾ ಮುರಳಿ, ಅಮುದಾ ಮಂಜುನಾಥ್, ಜಿ.ಮಧು, ಫ್ಯಾನ್ಸಿ ರಮೇಶ್, ಆರ್.ಮಧು, ರತ್ನಮ್ಮ ರಾಮಪ್ಪ ಮತ್ತು ಮುಖಂಡರಾದ ಮಂಜುನಾಥ್ ರೆಡ್ಡಿ, ಚಂದ್ರಶೇಖರ್, ಅಂಬರೀಷ್ ಸಮರ್ಥ, ಸತೀಶ್, ಶ್ರೀನಿವಾಸ್, ರಮೇಶ್ ನಾಯಕ್, ಭೀಮಾ ನಾಯಕ್, ನರಸಿಂಹಮೂರ್ತಿ ನಾಯಕ್ ಮತ್ತು ಬಂಜಾರ ಸಮುದಾಯದ ಮುಖಂಡರು ಭಾಗವಹಿಸಿದ್ದರು.