ಶಂಕರರ ತತ್ವಗಳನ್ನು ಅನುಸರಿಸಿದರೆ ಜೀವನದಲ್ಲಿ ಸಾರ್ಥಕತೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಎ.08:- ಶಂಕರರ ತತ್ವಗಳನ್ನು ಅನುಸರಿಸುವ ಮೂಲಕ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯಬಹುದಾಗಿದೆ ಎಂದು ಶೃಂಗೇರಿ ಸಂಸ್ಥಾನದ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಕ್ತರಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದರು ಸ್ವಾಮಿಜೀ ಶಂಕರರ ಸ್ತೋತ್ರಗಳನ್ನು ನಿತ್ಯ ಪಠಿಸುವ ಮೂಲಕ ಜೀವನದಲ್ಲಿ ಅಭಿವೃದ್ಧಿ ಹೊಂದಬಹುದಾಗಿದೆ.
ಭಾಷ್ಯ, ವೇದ, ಸ್ತೋತ್ರ ಮೊದಲಾದ ವಿವಿಧ ಪ್ರಕಾರಗಳ ಮೂಲಕ ಜನ ಸಾಮಾನ್ಯರಿಗೆ ಸರಳ ರೀತಿಯಲ್ಲಿ ಅರ್ಥವಾಗುವಂತೆ ಶಂಕರರು ಗ್ರಂಥಗಳನ್ನು ರಚಿಸಿದ್ದಾರೆ. ಸ್ತೋತ್ರಗಳನ್ನು ನಿತ್ಯ ಪಠಿಸುವ ಮೂಲಕ ಜೀವನದಲ್ಲಿ ಅಭಿವೃದ್ಧಿ . ಹೊಂದಬಹುದಾಗಿದೆ ಎಂದರು
ಲೌಕಿಕ ಜೀವನದ ನಿತ್ಯ ಅಗತ್ಯಗಳನ್ನು ಪೂರೈಸಿದರೆ ಮೋಕ್ಷ ಸಾಧನೆಯಿಂದ ಸಾರ್ಥಕತೆಯನ್ನು ಸಾಧಿಸಬಹುದಾಗಿದೆ ಎಂದು ಶ್ರೀಗಳು ಹೇಳಿದರು.
ಬೆಳಿಗ್ಗೆ ನಗರಕ್ಕೆ ಆಗಮಿಸಿದ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳನ್ನು ಇಲ್ಲಿನ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧಿಪತಿಗಳಾದ ಶ್ರೀ ಶಂಕರ ಭಾರತೀ ಸ್ವಾಮಿಗಳು ಮತ್ತು ಅವರ ಶಿಷ್ಯರಾದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಮತ್ತು ಭಕ್ತ ವೃಂದದವರು ಇಲ್ಲಿನ ಬ್ರಾಹ್ಮಣ ಮಹಾಸಭಾ ವೃತ್ತದಲ್ಲಿ ಶ್ರದ್ದಾ ಭಕ್ತಿಯಿಂದ ಸ್ವಾಗತಿಸಿ, ಪೂರ್ಣ ಕುಂಭ ಹಾಗೂ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ದರು ಮಠಕ್ಕೆ
ವೇದಘೋಷದೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಗುರುವಂದನೆ, ಪುಸ್ತಕ ಬಿಡುಗಡೆ, ಸ್ತೋತ್ರ ಸಮರ್ಪಣೆ, ಗಣ್ಯರು ಮತ್ತು ಸಂಘ ಸಂಸ್ಥೆಗಳಿಂದ ಗುರುಗಳಿಗೆ ಮಂತ್ರಾಕ್ಷತೆ ಫಲ ಸಮರ್ಪಣೆ, ಕಾರ್ಯಕ್ರಮಗಳು ನೆರವೇರಿದವು. ಇದೇ ಸಂದರ್ಭದಲ್ಲಿ ಡಾ. ಮೋಹನ್ ದಾಸ್ ಭಟ್, ಡಾ.ಸೋಮಯಾಜಿ ಮತ್ತು ಸೋಮಶೇಖರ ಅವರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಶಾಸಕ ಡಿ.ರವಿಶಂಕರ್, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ರಾಮಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಪುರಸಭಾ ಸದಸ್ಯ ಕೆ.ಪಿ.ಪ್ರಭುಶಂಕರ್, ಉದ್ಯಮಿ ವೈ.ಎಸ್. ಕುಮಾರ್, ಕೆ.ಎನ್.ಸೋಮಯಾಜಿ, ಜೆ.ಪಿ.ಅರಸ್, ಮಠದ ಆಡಳಿತಾಧಿಕಾರಿ ಹೆಚ್.ಎಸ್.ನಾಗೇಶ್ ಮತ್ತು ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಹಾಜರಿದ್ದರು.