ಪ್ರಶಸ್ತಿಗಾಗಿ ಕಾಯಕ ಮಾಡದೇ ಮನಸ್ಸಿನ ತೃಪ್ತಿಗಾಗಿ ಕಾಯಕ ಮಾಡುವುದು ಲೇಸು : ಎಸ್.ವಿ. ಬುರ್ಲಿ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೦:ಎಲೆ ಮರೆಯ ಕಾಯಿಯಂತೆ ಹಗಲಿರುಳೆನ್ನದೇ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೇ ಆದಲ್ಲಿ ಜನರು ಮೆಚ್ಚುವುರಲ್ಲದೇ ಗೌರವ ಸನ್ಮಾನಗಳು ಲಭಿಸುವುದುಂಟು. ತೋರಿಕೆಗಾಗಿ ಅಥವಾ ಪ್ರಶಸ್ತಿಗಾಗಿ ಕಾಯಕ ಮಾಡದೇ ಮನಸ್ಸಿನ ತೃಪ್ತಿಗಾಗಿ ಕಾಯಕ ಮಾಡುವುದು ಲೇಸು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತರೂ ಆದ ಎಸ್.ವಿ. ಬುರ್ಲಿ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜಯಪುರ ಜಿಲ್ಲಾ ಘಟಕದ ಕಚೇರಿಯಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪುರಸ್ಕೃತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಬೆಂಗಳೂರು ಇವರು ನೀಡುವ “ರಾಜ್ಯ ಮಟ್ಟದ ಕಾಯಕರತ್ನ” ಪ್ರಶಸ್ತಿಗೆ ಪುರಸ್ಕೃತರಾದ ಸರೋಜಾ ಕೌಲಾಪುರ ಹಾಗೂ ವಿಜಯಪುರ ಶಾಲಾ ಶಿಕ್ಷಣ ಇಲಾಖೆಯವರು ಶಿಕ್ಷಕ ದಿನಾಚರಣೆಯಂದು ನೀಡುವ “ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ” ಪ್ರಶಸ್ತಿ ಪುರಸ್ಕೃತರಾದ ರಾಜಕುಮಾರ ಚವ್ಹಾಣ ಅವರನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕ ವಿಜಯಪುರ ವತಿಯಿಂದ ಸನ್ಮಾನಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಆರ್. ಆರ್.ಮಿಸಾಳೆ, ಕಾರ್ಯದರ್ಶಿ ಬಿ.ಆಯ್. ಪರಂಡಿ, ಉಪಾಧ್ಯಕ್ಷ ಬಿ.ಎ. ಆಸಂಗಿ, ರಾಜಕುಮಾರ ಅರಗೆ, ಸುಮಾ ಚೌಧರಿ, ಸದಸ್ಯರಾದ ಜ್ಯೋತಿ ದೇಸಾಯಿ, ರೂಪಾ ಪಡನಾಡ, ಜಯಶ್ರೀ ಬುರ್ಲಿ, ಎ.ವಿ. ಪಾಟೀಲ, ಮಹಾದೇವ ದೇವರ, ಬಸವರಾಜ ಚೌಧರಿ ಹಾಗೂ ಇತರರು ಉಪಸ್ಥಿತರಿದ್ದರು.