ಥ್ರೋಬಾಲ್:ವಿಭಾಗಿಯ ಮಟ್ಟಕ್ಕೆ ಎರಡನೇ ಬಾರಿ ಆಯ್ಕೆ
ಸಂಜೆವಾಣಿ ವಾರ್ತೆ
ಹನೂರು ಸೆ 20 :- ತಾಲೂಕಿನ ಮಾರ್ಟಳ್ಳಿ ಸೇಂಟ್ ಮೇರಿಸ್ ಪ್ರೌಢಶಾಲೆಯ ಬಾಲಕಿಯರು ಜಿಲ್ಲಾ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗಿಯ ಮಟ್ಟಕ್ಕೆ ಸತತ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಶಾಲೆಗೆ ಕೀರ್ತಿ ತಂದುಕೊಟ್ಟ ವಿದ್ಯಾರ್ಥಿಗಳನ್ನು ಶಾಲೆಯ ವ್ಯವಸ್ಥಾಪಕರಾದ ಫಾದರ್ ಟೆನ್ನಿ ಕುರಿಯನ್ ಮುಖ್ಯ ಶಿಕ್ಷಕರಾದ ಸುನಿಲ್ ಮತ್ತು ದೈಹಿಕ ಶಿಕ್ಷಕರಾದ ಅಗಸ್ಟೀನ್ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.