ಉತ್ಪಾದಕರಿಗೆ ಬಹುಮಾನ, ಸನ್ಮಾನ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಸೆ.20:- ಪಿರಿಯಾಪಟ್ಟಣ ಬೆಟ್ಟದಪುರ ಸಮೀಪದ ಗಂಗನಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಗುರುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ಉತ್ಪಾದಕರಿಗೆ ಬಹುಮಾನ ನೀಡಿ, ಅಭಿನಂದನೆ ಸಲ್ಲಿಸಲಾಯಿತು. ಮೈಮುಲ್ ವಿಸ್ತರಣಾಧಿಕಾರಿ ಅವಿನಾಶ್, ಅಧ್ಯಕ್ಷ ಪುಟ್ಟಮಾದೇಗೌಡ, ನಿರ್ದೇಶಕರಾದ ಪ್ರಕಾಶ್, ಕಮಲಮ್ಮ, ಹೇಮೇಶ್, ಯೋಗೇಶ್, ಶಂಕರೇಗೌಡ, ಪುಟ್ಟಸ್ವಾಮಯ್ಯ, ಮುಕುಂದ, ಗಣೇಶ್ ನಾಯಕ, ರವಿ, ಸುಂದ್ರಮ್ಮ, ಕಾರ್ಯದರ್ಶಿ ಮಹದೇವ್, ಸಿಬ್ಬಂದಿ ಮಂಜೇಗೌಡ ಇದ್ದರು.