ಡಾ.ವಿಷ್ಣುವರ್ಧನ್ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ: ಇಂದುಶೇಖರ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.20- ಸಾಹಸಸಿಂಹ ಡಾ ವಿಷ್ಣುವರ್ಧನ್‍ರವರು ಕನ್ನಡಚಿತ್ರರಂಗದ ಶ್ರೇಷ್ಠ ನಟರಾಗಿ, ಮಾನವೀಯ ಮೌಲ್ಯಗಳ ಹರಿಕಾರರಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ ಎಂದುಡಾ. ವಿಷ್ಣುವರ್ಧನ್ ಅಭಿಮಾನಿಗಳ ಸ್ನೇಹ ಬಳಗದ ಅಧ್ಯಕ್ಷರು, ನಿಕಟಪೂರ್ವ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ತಿಳಿಸಿದರು.
ಅವರು ನ್ಯಾಯಾಲಯg Àಸ್ತೆಯಲ್ಲಿರುವ ಮೈದಾನದಲ್ಲಿ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸ್ನೇಹ ಬಳಗ ಹಮ್ಮಿಕೊಂಡಿದ್ದ 74ನೇ ವಿಷ್ಣುವರ್ಧನ್ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ವಿಶೇಷವಾಗಿ ತಯಾರಿಸಲ್ಪಟ್ಟ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತ ವಿಷ್ಣುವರ್ಧನ್‍ರವರು ಭಾರತದ ಶ್ರೇಷ್ಠ ಚಲನಚಿತ್ರ ನಟರು. ಸುಸಂಸ್ಕøತರು ಹಾಗೂ ಜೀವನ ಮೌಲ್ಯಗಳನ್ನು ಕೋಟ್ಯಾಂತರ ಅಭಿಮಾನಿಗಳಿಗೆ ನೀಡಿದವರು. ಅವರ ಚಿತ್ರಗಳು ಅಪಾರವಾದ ಮಾನವ ವ್ಯಕ್ತಿತ್ವ ನಿರ್ಮಾಣ, ಶುದ್ಧಜೀವನ,ಹೆಣ್ಣು ಮಕ್ಕಳಿಗೆ ಗೌರವ ನೀಡುವ ಸಂದೇಶಗಳನ್ನು ನೀಡುತ್ತಿತ್ತು ವಿಷ್ಣುವರ್ಧನ್‍ರವರ ನಾಗರಹಾವು, ಸಾಹಸಸಿಂಹ, ಆಪ್ತಮಿತ್ರ, ಬಂಧನ, ಮುತ್ತಿನ ಹಾರ, ಈ ಬಂಧನ ಚಿತ್ರಗಳು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದೆ. ಕನ್ನಡಚಿತ್ರರಂಗದ ಅಪ್ಪಟ ಪ್ರತಿಭೆ ಎಂದು ಬಣ್ಣಿಸಿದರು. ಜಿಲ್ಲಾಕೇಂದ್ರದಲ್ಲಿ ಒಂದು ವೃತ ಹಾಗೂ ರಸ್ತೆಗೆ ವಿಷ್ಣುವರ್ಧನ್‍ರವರ ಹೆಸರನ್ನು ನಾಮಕರಣ ಮಾಡಬೇಕೆಂದು ನಗರಸಭೆಗೆ ಮನವಿಯನ್ನು ಮಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಾಗೂ ರಾಷ್ಟ್ರಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಭಾರತೀಯ ಚಲನಚಿತ್ರರಂಗದ ಅಪರೂಪದ ವ್ಯಕ್ತಿತ್ವ ಹೊಂದಿದ್ದ ನಟ ವಿಷ್ಣುವರ್ಧನ್ ಸಂತನಂತೆ ಬದುಕಿದವರು. ಕೊಡುಗೆ ದಾನಿಯಾದರೂ ಎಂದು ಯಾರಿಗೂ ಹೇಳದ ವ್ಯಕ್ತಿತ್ವ ಅವರದಾಗಿತ್ತು. ಕನ್ನಡ ಚಲನಚಿತ್ರರಂಗದ ಮೂಲಕ ವಿಶ್ವಕ್ಕೆ ಅಪಾರ ಕೊಡುಗೆ ನೀಡಿದ ವಿಷ್ಣುವರ್ಧನ್‍ರವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ನಾಡು, ನುಡಿ, ಜಲ, ಭಾμÉಯ ಜೊತೆಗೆ ಸಾಂಸಾರಿಕ ಜೀವನ, ರಾಷ್ಟ್ರ ಪ್ರೇಮ, ಸಂಸ್ಕೃತಿಯ ರಕ್ಷಣೆ, ಜೀವನದ ಹೊಂದಾಣಿಕೆ ಹಾಗೂ ಸಾಮಾಜಿಕ ಮೌಲ್ಯಗಳ ಚಿಂತನೆಯ ಆದರ್ಶ ಚಿತ್ರಗಳನ್ನು ರಚಿಸಿ ಕೋಟಿ ಕೋಟಿ ಅಭಿಮಾನಿಗಳಲ್ಲಿ ಹಾಗೂ ಜನರಲ್ಲಿ ಶ್ರೇಷ್ಠವಾದ ಮೌಲ್ಯಗಳನ್ನು ನೀಡಿ, ಮನೋಜ್ಞ ಅಭಿನಯದ ಮೂಲಕ ಮಾನವನ ಪರಿವರ್ತನೆಗೆ ಚಿತ್ರರಂಗದ ಮೂಲಕ ಪ್ರಭಾವ ಬೀರಿದ್ದಾರೆ. ಅವರ 74ನೇ ಜನ್ಮದಿನೋತ್ಸವವನ್ನು ವಿಶೇಷವಾಗಿ ಆಚರಿಸುವ ಮೂಲಕ ಅವರನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮವನ್ನು ಅಭಿಮಾನಿಯ ಬಳಗ ಏರ್ಪಡಿಸಿರುವುದು ಸಂತೋಷವೆಂದರು. ಸರ್ಕಾರ ಹಾಗೂ ಸಮಾಜ ವಿಷ್ಣುವರ್ಧನ್‍ರವರನ್ನು ಗೌರವಿಸುವ ಕಾರ್ಯವನ್ನು ಮಾಡುತ್ತಿದೆ.
ಮೈಸೂರಿನಲ್ಲಿ ವಿಷ್ಣುವರ್ಧನ್‍ರವರ ವಿಶೇಷವಾದ ನೆನಪಿನ ಸ್ಥಳವನ್ನು ನಿರ್ಮಿಸಿದೆ. ಬೆಂಗಳೂರಿನ ಬನಶಂಕರಿಯಿಂದ ಕೆಂಗೇರಿಯವರೆಗಿನ 14.5 ಉದ್ದದರಸ್ತೆಗೆ ವಿಷ್ಣುವರ್ಧನ್‍ರವರ ಹೆಸರನ್ನು ಇಟ್ಟು ಏμÁ್ಯದಲ್ಲಿಯೇ ಚಿತ್ರರಂಗದ ನಟರ ಹೆಸರನ್ನು ಉದ್ದz Àರಸ್ತೆಗೆ ನೀಡಿ ಗೌರವಿಸಿದೆ ಎಂದರು.ಕಾರ್ಯಕ್ರಮದಲ್ಲಿ ಸಾಹಸಸಿಂಹ ವಿಷ್ಣುವರ್ಧನ್‍ರವರ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಷ್ಣುವರ್ಧನ್ ಅಭಿಮಾನಿ ಸ್ನೇಹ ಬಳಗದ ಪುಟ್ಟುವರ್ಧನ್, ಸುರೇಶ್ ನಾಗ್ ಹರದನಹಳ್ಳಿ, ಕೂಸಣ್ಣ, ಸುಗಂಧರಾಜ್, ಶಿವಣ್ಣ ಇದ್ದರು.