ಮಾರ್ಕಬ್ಬಿನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ
ದೇವರಹಿಪ್ಪರಗಿ:ಸೆ.೨೦: ಬಸವನ ಬಾಗೇವಾಡಿ ತಾಲ್ಲೂಕಿನ ಇಂಗಳೆಶ್ವರ ಗ್ರಾಮದಲ್ಲಿ ಗುರುವಾರ ನಡೆದ ೨೦೨೪-೨೫ ನೇ ಸಾಲಿನ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮಾರ್ಕಬ್ಬಿನಹಳ್ಳಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಬಾಲಕರ ಗುಂಪು ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಕಬ್ಬಡಿ ದ್ವಿತೀಯ,೪್ಠ೧೦೦ ರಿಲೇ ಪ್ರಥಮ,
ಬಾಲಕಿಯರ ಗುಂಪು ವಿಭಾಗದಲ್ಲಿ ವಾಲಿಬಾಲ್ ದ್ವಿತೀಯ,ಖೋಖೊ ದ್ವಿತೀಯ.
ವೈಯಕ್ತಿಕ ವಿಭಾಗದಲ್ಲಿ ದರ್ಶನ ಐಹೊಳೆ ಗುಂಡು ಎಸೆತ ಮತ್ತು ಚಕ್ರ ಎಸೆತ ಪ್ರಥಮ,ಸ್ನೇಹ ಬಡಿಗೇರ ಚಕ್ರ ಎಸೆತ ಮತ್ತು ಉದ್ದ ಜಿಗಿತ ಪ್ರಥಮ ಗುಂಡು ಎಸೆತ ದ್ವಿತೀಯ,ಅಲಿಯಾ ಮನಿಯಾರ್,೬೦೦ ಮೀಟರ್ ಓಟ ದ್ವಿತೀಯ, ಆಸಿಫ್ ಗಣಿಯಾರ ೬೦೦ ಮೀಟರ್ ಓಟ ದ್ವಿತೀಯ,ಸಂಗಮೇಶ ಬಾಬಾನಗರ ಚಕ್ರ ಎಸೆತ, ಉದ್ದು ಜಿಗಿತ ದ್ವಿತೀಯ,ರೇವಣಸಿದ್ಧಯ್ಯ ಹಿರೇಮಠ ೪೦೦ ಮೀಟರ್ ಓಟ ದ್ವಿತೀಯ, ಪಡೆದಿರುತ್ತಾರೆ.
ಕ್ರೀಡೆಯಲ್ಲಿ ಭಾಗವಿಸುವ ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸಧೃಢವಾಗಲು ಸಹಾಯವಾಗಿದೆ.ವಿದ್ಯಾಬ್ಯಾಸದ ಜೊತೆ ಕ್ರೀಡೆಯಲ್ಲಿ ಪಾಲಗೊಂಡ ಮಕ್ಕಳು ಸಾಧನೆ ಮಾಡಿದ್ದೆಯಾದಲ್ಲಿ ಉತ್ತಮವಾದ ಭವಿಷ್ಯವಿದೆ ಕ್ರೀಡಾಪಟುಗಳಿಗೆ ನಮ್ಮ ದೇಶದಲ್ಲಿ ಉತ್ತಮ ಗೌರವವಿದೆ.ಎಂದು ಪ್ರಭಾರಿ ಮುಖ್ಯ ಶಿಕ್ಷಕ ಎಚ್ ಎಸ್. ತಳವಾರ ತಿಳಿಸಿದರು.
ಕ್ರೀಡೆಯಲ್ಲಿ ಮಕ್ಕಳು ಉತ್ತಮವಾಗಿ ಆಟ ಆಡಿ ವಿಜೇತರಾಗಿ ಶಾಲೆಗೆ ಸಮಗ್ರ ಪ್ರಶಸ್ತಿ ತಂದು ಶಾಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳು ಇದೆ ರೀತಿ ರಾಜ್ಯ, ಮತ್ತು ರಾಷ್ಟ್ರಮಟದಲ್ಲಿಯೂ ಸಾಧನೆಯನ್ನು ಮಾಡಲಿ ಎಂದು ಶಾಲಾ ಶಿಕ್ಷಕರು ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.