ಹೊಲದ ದಾರಿಗೆ ಅವಕಾಶ ಕಲ್ಪಿಸಿ: ಜಿಲ್ಲಾಧಿಕಾರಿಗೆ ರೈತರ ಮೊರೆ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨೦:ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಚಡಚಣ ತಾಲೂಕಾ ಘಟಕ ನೇತೃತ್ವದಲ್ಲಿ ಹೊಲ ಗದ್ದೆಗಳಿಗೆ ಹೋಗಿ-ಬರಲು ಅನಾದಿ ಕಾಲದಿಂದ ಇರುವ ದಾರಿ ಬಂದ್ ಮಾಡಿದ್ದು ಮನಃ ಪ್ರಾರಂಭ ಮಾಡಿ ಕೊಡಲು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ರಾಜ್ಯ ಉಪಾಧ್ಯಕ್ಷÀ ಗುರುನಾಥ ಬಗಲಿ ಮಾತನಾಡಿ, ಗ್ರಾಮದಿಂದ ೪ ಕಿ.ಮೀ. ಅಂತರದಲ್ಲಿರುವ ಗುಡ್ಡದ, ಬಿರಾದಾರ, ಯಲಮg (ಯಡ್ರಾಂವಕರ) ಬಳ್ಳೊಳ್ಳಿ ಹಾಗೂ ಪಾಟೀಲ ಹೀಗೆ ಹಲವು ಸಮುದಾಯದ ಸುಮಾರು ೩೦ ರಿಂದ ೩೫ ವಸ್ತಿಗಳ ಜನರಿಗೆ ಅನಾದಿ ಕಾಲದಿಂದಲೂ ಇರುವ ದಾರಿಯನ್ನು ರೈತರು ಅವಲಂಬಿತರಾಗಿದ್ದಾರೆ. ರೈತರು ಹೊಲ-ಗದ್ದೆಗಳಿಗೆ ಹೋಗಿ-ಬರಲು ಮತ್ತು ಹೊಲದಲ್ಲಿ ಬೆಳೆದ ದವಸ ಧಾನ್ಯಗಳನ್ನು ಸಾಗಿಸಲು, ಏನಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ಮತ್ತು ಮಕ್ಕಳಿಗೆ ಶಾಲೆಗೆ ಹೋಗಿ ಬರಲು ಈ ಮೊದಲಿನಿಂದ ಇದ್ದ ದಾರಿಯನ್ನು ನಾಮದೇವ ಸುರ್ವೇ ಎಂಬುವರು ಸ.ನಂ: ೭೩೮ ರಲ್ಲಿ ಹಾಗೂ ರಾವಸಾಬ ಮೋಳಕೆ ಎಂಬುವರು ಸ.ನಂ ೭೩೯ ರಲ್ಲಿ ವಿನಾ: ಕಾರಣ ಮುಳ್ಳುಕಂಟಿಗಳನ್ನು ಹಚ್ಚಿ ಬಂದ್ ಮಾಡಿರುತ್ತಾರೆ. ಇದರಿಂದ ಹತ್ತಾರು ಜನ ಶಾಲೆಗೆ ಹೋಗುವ ಮಕ್ಕಳಿಗೆ ಮತ್ತು ಈ ದಾರಿಯನ್ನೇ ಅವಲಂಬಿತವಾಗಿರುವ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಈ ಬಗ್ಗೆ ಸಂಬAಧಿಸಿದ ವ್ಯಕ್ತಿಗಳ ಬಳಿ ರೈತರು ವಿಚಾರಿಸಲಾಗಿ ಇಲ್ಲದ ಸಬೂಬು ಹೇಳಿ ದಾರಿಯಲ್ಲಿರುವ ಮುಳ್ಳುಕಂಟಿಗಳನ್ನು ತೆಗೆದು ದಾರಿ ಸುಗಮಗೊಳಿಸಿ ಕೊಡಲು ನಿರಾಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ ಮಾತನಾಡಿ, ಈ ಬಗ್ಗೆ ಚಡಚಣ ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದು ಇನ್ನೂವರೆಗೆ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಆದ್ದರಿಂದ ದಿನಾಲು ಶಾಲೆಗೆ ಹೋಗುವ ಮಕ್ಕಳಿಗೆ ಹಾಗೂ ನಮ್ಮೇಲ್ಲ ಕುಟುಂಬಗಳಿಗೆ ಗ್ರಾಮಕ್ಕೆ, ಹೋಗಿ ಬರಲು ತುಂಬಾ ತೊಂದರೆಯಾಗುತ್ತಿದೆ. ಕಾರಣ ಆದಷ್ಟು ಬೇಗನೆ ಈ ದಾರಿಯನ್ನು ತೆರವುಗೊಳಿಸಿ ರೈತರಿಗೆ, ಮಕ್ಕಳಿಗೆ, ವೃದ್ಧರಿಗೆ ಆಗಿರುವ ತೊಂದರೆಯನ್ನು ಸರಿಪಡಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದÀಲ್ಲಿ ಶಾಂತಪ್ಪ ಬಿರಾದಾರ, ರಮೇಶ ಗುಡ್ಡದ, ರಾಮಗೊಂಡ ಬಿರಾದಾರ, ಉಮೇಶ ಗುಡ್ಡದ, ಸಂತೋಷ ಗುಡ್ಡದ, ಅಮಸಿದ್ದ ಬಿರಾದಾರ, ಪ್ರಕಾಶ ಪಾಟೀಲ, ಮಲ್ಲಪ್ಪ ಗುಡ್ಡದ, ಸೋಮಲಿಂಗ ಗುಡ್ಡದ, ಮಾಳಪ್ಪ ಯಲಮರ, ಮಲಕಪ್ಪ ಪಾಟೀಲ, ಶಾಂತಪ್ಪ ಗುಡ್ಡದ, ಗುರಪ್ಪ ಝಳಕಿ, ರಮೇಶ ಬಿರಾದಾರ, ಗುರುಶಾಂತಗೌಡ ಬಿರಾದಾರ, ಸುರೇಶ ಗುಡ್ಡದ, ನಿಂಗಪ್ಪ ಗುಡ್ಡದ, ಪಾಂಡು ಯಲಮರ, ಶ್ರೀಮಂತ ಬಳ್ಳೊಳ್ಳಿ, ಮಾಳಪ್ಪ ಯಲಮರ, ಸಿದ್ರಾಮ ಕುಂಬಾರ, ಅಣ್ಣಪ್ಪ ಬಿರಾದಾರ, ನಿಂಗಪ್ಪ ಬಿರಾದಾರ, ಶಾಮ ಯಲಮಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.