ಟೆನಿಕ್ವಾಯಿಟ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಕೊಲ್ಹಾರ:ಸೆ.೨೦: ವಿಜಯಪುರದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ (ಪ.ಪೂ) ವತಿಯಿಂದ ಜರುಗಿದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಟೆನಿಕ್ವಾಯಿಟ್ ಸ್ಪರ್ಧೆಯಲ್ಲಿ ಇಲ್ಲಿನ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಯಾದಗಿರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಟೆನಿಕ್ವಾಯಿಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ದ್ವಿತೀಯ ಪಿ.ಯು.ಸಿ ಬಾಲಕಿಯರಾದ ಕಾದಂಬರಿ ಪೂಜಾರಿ,ರೇಣುಕಾ ನಾಯಕ ,ಪ್ರಥಮ ಪಿ.ಯು.ಸಿ ಸರಿತಾ ಚವ್ಹಾಣ ,ಸುಕನ್ಯಾ ಚಿಮ್ಮಲಗಿ,ಸಂಜನಾ ಬೆಳ್ಳುಬ್ಬಿಯವರಿಗೆ ವಿಜಯಪುರ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಶ್ರೀದುರ್ಗಿ ಹಾಗೂ ಕ್ರೀಡಾ ಸಂಯೋಜಕ ಗಣೇಶ ಗುನ್ನಾಪುರ ಪ್ರಶಸ್ತಿ ವಿತರಿಸಿದರು.
ಅಭಿನಂದನೆಗಳು : ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಯು.ಗಿಡ್ಡಪ್ಪಗೋಳ,ಕಾರ್ಯದರ್ಶಿ ಎಸ್.ಬಿ.ಪತಂಗಿ ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು,ಕಾಲೇಜಿನ ಸಿಬ್ಬಂದಿ ವರ್ಗದವರು ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕ ರಮೇಶ ತೋಟದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ತಂಡದ ವ್ಯವಸ್ಥಾಪಕರಾಗಿ ಉಪನ್ಯಾಸಕ ಎಂ.ಸಿ.ಹೊನವಾಡ ಕಾರ್ಯನಿರ್ವಹಿಸಿದರು.
