ಜಿಲ್ಲಾ ಕಸಾಪ ದಿಂದ ತತ್ವಪದ ಸಾಹಿತ್ಯ ಸಮ್ಮೇಳನ:ಸಮ್ಮೇಳನಾಧ್ಯಕ್ಷರಾಗಿ ಕಡಕೋಳದ ಮಠದ ಡಾ. ರುದ್ರಮುನಿ ಶಿವಾಚಾರ್ಯರು ಆಯ್ಕೆ
ಸಮ್ಮೇಳನಾಧ್ಯಕ್ಷರ ಪರಿಚಯ:
ಡಾ. ರುದ್ರಮುನಿ ಶಿವಾಚಾರ್ಯರು ಕಡಕೋಳ ಮಡಿವಾಳೇಶ್ವರ ಮಹಾಮಠದ ಪೀಠಾಧಿಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕಾಶಿಯ ಜಂಗಮವಾಡಿಯಲ್ಲಿ ವ್ಯಾಸಂಗ ಮಾಡಿ, ಯೋಗ ಮತ್ತು ಧ್ಯಾನದ ಮೂಲಕ ಸಿದ್ಧಿಯನ್ನು ಸಾಧಿಸಿ ಕಡಕೋಳ ಮಡಿವಾಳಪ್ಪ ನವರ ದಾರ್ಶನಿಕತೆಯಲ್ಲಿ ಮುನ್ನಡೆದಿದ್ದಾರೆ. ಶ್ರೀಗಳು ವಿಧಾಯಕ ಕಾರ್ಯಕ್ರಮಗಳ ಮೂಲಕ ಕಡಕೋಳ ಮತ್ತು ಸುತ್ತಮುತ್ತಲಿನ ಗ್ರಾಮದ ಜನರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಕಾಯಕದಲ್ಲೂ ನಿರತರಾಗಿದ್ದಾರೆ.
ವೀರೇಶ್ವರ ಪ್ರಕಾಶನದ ಮೂಲಕ ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನೆರವಿನಿಂದಲೂ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ನಾಡಿನ ಅನೇಕ ಅನುಭವಿ ಸಾಹಿತಿಗಳ ಮೂಲಕ ಕಡಕೋಳ ಮಡಿವಾಳಪ್ಪ ಮತ್ತು ಇನ್ನಿತರ ಅನೇಕ ತತ್ವಪದಕಾರರ ಕುರಿತು ಕಾರ್ಯಕ್ರಮಗಳ ಆಯೋಜನೆ ಮೂಲಕ ಅವರನ್ನು ಪರಿಚಯಿಸಿದ್ದಾರೆ.
ತತ್ವಪದಕಾರರಿಗೆ ಗೌರವ ತಂದುಕೊಡುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದಾರೆ ಮತ್ತು ಕಡಕೋಳ ಮಡಿವಾಳಪ್ಪ ನವರು ತಪಸ್ಸು ಮಾಡಿದ ಸ್ಥಳಗಳನ್ನು ಗುರುತಿಸಿ ಪುನರುತ್ಥಾನದ ಮೌಲಿಕ ಕಾರ್ಯ ಮಾಡುತ್ತಿದ್ದಾರೆ.