ಶಾಂತಿನಿಕೇತನ ಕಾಲೇಜಿನಲ್ಲಿ ಪ್ರತಿಭಾನ್ವೇಷಣೆ ಪರೀಕ್ಷೆ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.8:ನಗರದ ಪ್ರತಿಷ್ಠಿತ ಶಾಂತಿನಿಕೇತನ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಪ್ರತಿಭಾನ್ವೇಷಣೆ (ಟ್ಯಾಲೇಂಟ ಸರ್ಚ್ – 2024) ಪರೀಕ್ಷೆ ನೆಡೆಸಲಾಯಿತು.
ವಿಜಯಪುರ ನಗರ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕಿನ 10 ನೇ ತರಗತಿ ಪರಿಕ್ಷೇ ಬರೆದ ಒಟ್ಟು – 616 ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಈ ಪರೀಕ್ಷೆಯಲ್ಲಿ ಭಾಗವಹಿಸಿದರು.
ಈ ಪರೀಕ್ಷೆಯ ಫಲಿತಾಂಶವನ್ನು ಏ.8 ರಂದು ತಿಳಿಸಲಾಗುವದು. ಈ ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಚೇರಮನ್ ಸುರೇಶ ಬಿರಾದಾರ, ಸಂಸ್ಥೆಯ ಅಧ್ಯಕ್ಷೆ ಶೀಲಾ ಎಸ್. ಬಿರಾದಾರ, ನಿರ್ದೇಶಕರಾದ ಶರತ್ ಬಿರಾದಾರ, ಹಣಕಾಸು ಅಧಿಕಾರಿ ಭರತ ಬಿರಾದಾರ, ಪ್ರಾಚಾರ್ಯ ಪಿ. ಚರಣಕುಮಾರ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.