ಪುಣೆಯಲ್ಲಿ ಕಣ್ವ ಪರಿಷತ್ ರಾಷ್ಟ್ರೀಯ ಸಭೆ
ಕಲಬುರಗಿ:ಏ.07:ಕಣ್ವ ಪರಿಷತ್ತಿನ ಮಹಾಧಿವೇಶನವನ್ನು ಪ್ರತಿ ವರ್ಷ ಒಂದು ರಾಜ್ಯದಲ್ಲಿ ನಡೆಸಲಾಗುವುದು.ಪ್ರತಿ ರಾಜ್ಯದಲ್ಲಿ ಕಣ್ವ ಪರಿಷತ್ತಿನ ಸಂಘಟನೆ ಬಲವರ್ಧನೆ ಗೊಳಿಸುಲು ಸದಸ್ಯತ್ವ ನೋಂದಣಿ ಅಭಿಯಾನವನ್ನು ಪ್ರಾರಂಭಿಸುವುದು. ಶ್ರೀಮತ್ ಕಣ್ವ ಮಠದ ಶ್ರೀಪಾದಂಗಳವರ ದಿಗ್ವಿಜಯ ಯಾತ್ರೆಯನ್ನು ವಿವಿಧ ರಾಜ್ಯಗಳಲ್ಲಿ ಮಾಡಲಾಗುವುದು ಎಂದು ಕಣ್ವ ಪರಿಷತ್ತಿನ ರಾಷ್ಟ್ರೀಯ ಸಭೆಯಲ್ಲಿ ರಾಷ್ಟ್ರಾಧ್ಯಕ್ಷರಾದ ಶ್ರೀಯುತ ಮನೋಹರ ಮಡಿಗೇರಿ ಹೇಳಿದರು.
ಮಹಾರಾಷ್ಟ್ರದ ಪುಣೆಯ, ಶ್ರೀಸಂತಜ್ಞಾನೇಶ್ವರ ಮಹಾರಾಜ ಮಂದಿರ, ಅಳಂದಿಯಲ್ಲಿ ನಡೆದ ಕಣ್ವ ಪರಿಷತ್ ರಾಷ್ಟ್ರೀಯ ಸಭೆಯನ್ನು ಉದ್ದೇಶಿಸಿ ಮಾತನಾಡಿ ವಿಪ್ರರು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದೆ ಬರಬೇಕು, ವಿಶೇಷವಾಗಿ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ಭಾಗಿಯಾಗಬೇಕು, ವೇದಾದ್ಯಯನ ಮಾಡುವುದು ವಿಧ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವುದು ನಮೆಲ್ಲರ ಕರ್ತವ್ಯ ಎಂದರು.
ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಪ್ರಹ್ಲಾದ ಎಸ್ ಕುಲಕರ್ಣಿ ಮಾತನಾಡಿ ಭಾರತದಾದ್ಯಂತ ಕಣ್ವರ 15 ಶಾಖೆಗಳಿವೆ ಅವುಗಳನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ ಶತಮಾನದ ಹಿಂದೆ ಅಖಿಲ ಭಾರತೀಯ ಶುಕ್ಲಯಜುರ್ವೇದೀಯ ಕಣ್ವ ಪರಿಷತ್ ಸ್ಥಾಪನೆಯಾಗಿದೆ ಎಂದರು. ಶ್ರೀಯಾಜ್ಞವಲ್ಕ್ಯ ಮಹರ್ಷಿಗಳ ಮತ್ತು ಕಣ್ವ ಶಾಖೆಗೆ ಕೊಡುಗೆ ನೀಡಿರುವ ಮಹನೀಯರನ್ನು ಗುರುತಿಸಿ ಕಣ್ವರತ್ನ, ಕಣ್ವ ವಿಭೂಷಣ ಹಾಗೂ ಕಣ್ವಶ್ರೀ ಪ್ರಶಸ್ತಿಗಳನ್ನು ಪರಿಷತ್ತಿನಿಂದ ನೀಡಲಾಗುತ್ತಿದೆ ಎಂದರು.
ಉಪಾಧ್ಯಕ್ಷರಾದ ಶ್ರೀಕೃಷ್ಣ ಪುರಾಣಿಕ್ ಗುರೂಜಿ ಮಾತನಾಡಿ ಕಣ್ವ ಅನುಯಾಯಿಗಳು, ಆದಿತ್ಯ ಸಂಪ್ರದಾಯದವರು, ಶ್ರೀಯಾಜ್ಞವಲ್ಕ್ಯ ಮಹರ್ಷಿಗಳು ನೀಡಿದ ಶುಕ್ಲಯಜುರ್ವೇದವನ್ನು, ಕಣ್ವ ಋಷಿಗಳ ಮುಖಾಂತರ ಶ್ರುತಿ ಮತ್ತು ಸ್ಮೃತಿ ರೂಪದಲ್ಲಿ ಗುರುಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ ಎಂದರು. ಪ್ರತಿಯೊಬ್ಬರ ಮನೆಯಲ್ಲಿ ಕಣ್ವ ಸಂಹಿತೆ ಪೂಜಿಸಬೇಕು ಹಾಗೂ ಷೋಡಶಶೋಪಚಾರಗಳನ್ನು ವೇದ ಶಾಖೆಗಳಿಗೆ ಅನುಗುಣವಾಗಿ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸ್ವಶಾಖಿಯರಿಗಾಗಿ www.kanvamatrimony.in ವೆಬ್ ಸೈಟನ್ನು ಉದ್ಘಾಟಿಸಲಾಯಿತು. ಬೆಳಿಗ್ಗೆ ಪಂಡಿತರು ಹಾಗೂ ಪರಿಷತ್ತಿನ ಸದಸ್ಯರಿಂದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯಅಷ್ಟೋತ್ತರ ಮತ್ತು ಕಣ್ವ ಮಹರ್ಷಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ ಪಾರಾಯಣ ಮಾಡಲಾಯಿತು.
ರಂಗನಾಥ್ ಜೋಶಿ, ವಿನುತ ಜೋಶಿ
ಪರಿಷತ್ತಿನ ಮಹಾರಾಷ್ಟ್ರದ ಅಧ್ಯಕ್ಷ ವಿಲಾಸ್ ಡೋಕ್ರಾಸ, ಭೀಮರಾವ್ ಕುಲಕರ್ಣಿ ವೆಂಕಟೇಶ್ ಕುಲಕರ್ಣಿ, ಭೀಮಸೇನರಾವ್ ಸಿಂಧಗೇರಿ, ಸುಭಾಷ್ ಮಡಿಗೇರಿ, ಸಂಜಯ್ ಕುಲಕರ್ಣಿ, ಸದಾನಂದ ಜೋಶಿ, ಲಕ್ಷ್ಮಿಕಾಂತ್ ಜೈಪುರಕರ್, ಗೋವಿಂದರಾವ್ ಆಲಂಪಲ್ಲಿ, ರಮೇಶಾಚಾರ್ ಬಾದರ್ಲಿ, ಬಿ. ಹೆಚ್ ಜಹಾಗೀರದಾರ್, ಸತೀಶ್ ದೇಶಪಾಂಡೆ, ನರೇಂದ್ರ ಕಾವಡೆ, ಶರತ್ ಕುಲಕರ್ಣಿ, ಪ್ರದೀಪ್ ಕುಲಕರ್ಣಿ, ಶ್ವೇತಾ ಆರ್ ಜೋಶಿ, ಶೈಲಜಾ ಜೋಶಿ ಹಾಗೂ ವಿವಿಧ ರಾಜ್ಯಗಳ ಪದಾಧಿಕಾರಿಗಳು ಇದ್ದರು