ಬಳ್ಳಾರಿಯಲ್ಲಿ 7.60 ಲಕ್ಷ ನಗದು ಬೆಳ್ಳಿ ಚಿನ್ನಾಭರಣ ವಶ
ಬಳ್ಳಾರಿ ಏ.7: ನಗರದ ಕಂಬಳಿ ಬಜಾರ್ ನಲ್ಲಿಯ ಚಿನಹನದ ವ್ಯಾಪಾರಿ ಮನೆಯಲ್ಲಿ ದಾಖಲೆ ಇಲ್ಲದ ಒಟ್ಟು 7.60 ಲಕ್ಷ ನಗದು ಬೆಳ್ಳಿ ಚಿನ್ನಾಭರಣವನ್ನು ಬ್ರೂಸ್ ಪೇಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಮಗೆ ದೊರೆತ ಖಚಿತ ಮಾಹಿತಿಯಿಂದ ಪೊಲೀಸರು ಇಂದು ಮಧ್ಯಾಹ್ನ ನರೇಶ್ ಸೋನಿ ಎಂಬಾತನ ಮನೆಯ ಮೇಲೆ ದಾಳಿ ನಡೆಸಿ. 5.60 ಕೋಟಿ ರೂ ನಗದು, 3 ಕಿಲೋ ಚಿನ್ನ.
103 ಕಿಲೋ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.
ಇವರು ನಗರದ ಎಲ್ ಎನ್ ಟೆಂಪಲ್ ಸ್ಟ್ರೀಟ್ ನಲ್ಲಿ ಹೇಮಾ ಜುವೆಲರ್ಸ್ ಸಗಟು ಗಟ್ಟಿ ಚಿನ್ನ ಬಿಸ್ಕತ್ ವ್ಯಾಪಾರ ಮಾಡುತ್ತಿದ್ದನಂತೆ.
ಜೊತೆಗೆ ಈ‌ ಹಿಂದೆ ಕೆಆರ್ ಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದರಂತೆ.
ನಿನ್ನೆ ನಗರದ ಎರೆಡು ಅಂಗಡಿಗಳ ಮೇಲೆ ಮಾರಾಟ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರಿಂದ ಅಂಗಡಿಯಲ್ಲಿದ್ದುದನ್ನು ಮನೆಗೆ ತೆಗೆದುಕೊಂಡುಹೋಗಿ ಇಟ್ಟಿರಬೇಕು. ಯಾರೋ ಆಗದವರು ಈ ಖಚಿತ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕೆಪಿ ಆ್ಯಕ್ಟನಲ್ಲಿ ದೂರು ದಾಖಲಿಸಿ ಆದಾಯ ತೆರಿಗೆ ಇಲಾಕೆಗೆ ಪ್ರಜರಣ ವರ್ಗಾವಣೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಿದೆಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಹೇಳಿದ್ದಾರೆ.
