ಕ್ಯಾಂಡಿಡೇಟ್ಸ್ ಚೆಸ್: ಮೂರನೆ ಸುತ್ತಲ್ಲಿ ಪ್ರಜ್ಞಾನಂದಾಗೆ ಜಯ
ಟೊರೊಂಟೊ(ಕೆನಡಾ): ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್.ಪ್ರಜ್ಞಾನಂದ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಮೂರನೆ ಸುತ್ತಿನಲ್ಲಿ ಸಹ ಆಟಗಾರ ವಿದಿತ್ ಗುಜರಾತಿ ವಿರುದ್ಧ ಗೆದ್ದಿದ್ದಾರೆ. ಇವರ ಸಹೋದರಿಯಾದ ಆರ್.ವೈಶಾಲಿ ಕೂಡ ಗೆದ್ದಿದ್ದು ಟೂರ್ನಿಯಲ್ಲಿ ಮೊದಲ ಜಯ ಸಾಸಿದ್ದಾರೆ. ವೈಶಾಲಿ ಬಲ್ಗೆರಿಯಾದ ನುರ್ಗ್‍ಯುಲ್ ಸಾಲಿಮೊವಾ ವಿರುದ್ಧ ಜಯಿಸಿದರು.
ಇದಕ್ಕೂ ಮುನ್ನ ತಾರಾ ಚೆಸ್ ಪಟುಗಳಾದ ವಿದಿತ್ ಗುಜರಾತಿ ಹಾಗೂ ಡಿ.ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಮೊದಲು ಗೆಲುವು ಸಾಸಿದರು. ಪ್ರಜ್ಞಾನಂದ ವಿರುದ್ಧ ಗುಕೇಶ್ ಗೆದ್ದರು. ವಿದತ್ ವಿಶ್ವದ 3ನೇ ರ್ಯಾಂಕ್ ಆಟಗಾರ ಹಿಕರು ನಕಮುರಾ ಅವರನ್ನು ಸೋಲಿಸಿದರು. ಪ್ರಜ್ಞಾನಂದ ಅವರ ಸಹೋದರಿ ಆರ್.ವೈಶಾಲಿ ಚೀನಾದ ಝೋಂಗ್ಯಿ ವಿರುದ್ಧ ಸೋತರು. ಕೊನೆರು ಹಂಪಿ ರಷ್ಯದ ಕ್ಯಾಟೆರಿನಾ ಲಾಗ್ನೊ ವಿರುದ್ಧ ಡ್ರಾಗೆ ತೃಪ್ತಿಪಟ್ಟರು.