ಮತದಾನ ಜಾಗೃತಿಗೆ ಸೈಕಲ್ ಜಾಥಾಓಟ್ ಮಾಡದಿದ್ದರೆ ಜನಪ್ರತಿನಿದಿಗಳನ್ನು ಪ್ರಶ್ನಿಸಲು ಆಗಲ್ಲ: ಮಿಶ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.07: ನಗರ ಪ್ರದೇಶದಲ್ಲಿ ಕಡಿಮೆಯಾಗುತ್ತಿರುವ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮತದಾನದ ಮಹತ್ವ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಇಂದು ಗಣಿನಾಡು ಬಳ್ಳಾರಿ ನಗರದಲ್ಲಿ ಸೈಕಲ್ ಜಾಥಾ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಇದನ್ನು ಆಯೋಜಿಸಿತ್ತು. ಮುನಿಸಿಪಲ್ ಕಾಲೇಜು ಮೈದಾನದಿಂದ ಆರಂಭಗೊಂಡ  ಸೈಕಲ್ ಜಾಥಾದಲ್ಲಿ  ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಬಳ್ಳಾರಿ  ಸೈಕಲ್ ಕ್ಲಬ್ ಸದಸ್ಯರು ಸೇರಿದಂತೆ ನೂರಾರು ಜನ ಸಾರ್ವಜನಿಕರೂ ಪಾಲ್ಗೊಂಡಿದ್ದರು.
ಗಡಿಗಿ ಚೆನ್ನಪ್ಪ ಸರ್ಕಲ್ ಮೂಲಕ ಸಾಗಿದ ಜಾಥಾದಲ್ಲಿ ಮತದಾನದ ಮಹತ್ವದ ಘೋಷಣೆಗಳನ್ನು ಕೂಗುತ್ತ ಮತ್ತು ಮತದಾನದ ಹಕ್ಕಿನ ಬಗ್ಗೆ ತಿಳಿಸುವ ಪಲಕಗಳೊಂದಿಗೆ  ಸ್ಟೇಷನ್ ರಸ್ತೆ, ಕೋಟೆ ಪ್ರದೇಶ, ಸುಧಾ ಸರ್ಕಲ್, ಇನ್ ಪ್ಯಾಂಟ್ರಿ ರಸ್ತೆ, ಎಸ್ಪಿ ಸರ್ಕಲ್ ಮೂಲಕ‌   8 ಕಿಲೋ ಮೀಟರ್ ಸಾಗಿದ ಜಾಥಾ ದುರ್ಗಮ್ಮ ದೇವಸ್ಥಾನಕ್ಕೆ ಬಂದು ವಿರಮಿಸಿತು. ಜಾಥಾ ಆರಂಭಕ್ಕೂ ಮುನ್ನ ಮತದಾನದ ಪ್ರತಿಜ್ಞಾ ವಿಧಿ ಭೋದಿಸಲಾಯ್ತು.
ಜಾಥಾಗೆ ಚಾಲನೆ ನೀಡಿದ್ದಲ್ಲದೆ ಸ್ವತಃ ತಾವು ಸೈಕಲ್ ತುಳಿದು ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ಮತದಾನ ಮಾಡದೇ ಲೋಕ ತಂತ್ರದಲ್ಲಿ ಜನಪ್ರತಿನಿದಿಗಳನ್ನು ಪ್ರಶ್ನಿಸಲು ಆಗಲ್ಲ. ಅದಕ್ಕಾಗಿ ಮತದಾನ ಮಾಡಬೇಕು. ಈ ತಿಂಗಳ 9 ರ ವರಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶವಿದೆ. ಎಂದು ತಿಳಿಸಿದರು.
ಜಾಥಾದಲ್ಲಿ ಪಾಲ್ಗೊಂಡಿದ್ದ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ಶರಣಪ್ಪ ಸಂಕನೂರು. ಜಿಲ್ಲಾಡಳಿತ ಶೇ 100 ರಷ್ಟು ಮತದಾನಕ್ಕೆ ಸಾಕಷ್ಟು ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುತ್ತಿದೆ. ಏನೇ ಮಾಡಿದರೂ ಮತದಾನ ಆಗದಿದ್ದರೆ ಉಪಯೋಗವಿಲ್ಲ.
 ಕಳೆದ 2019 ಲೋಕಸಭಾ ಚುನಾವಣೆಗೆ ಹೋಲಿಸಿದರೆ  ಕಳೆದ ವರ್ಷ ನಡೆದ ವಿಧಾನಸಭಾ
ಚುನಾವಣೆಯಲ್ಲಿ ಶೇ 3.5  ರಷ್ಟು ಹೆಚ್ಚಿನ ಮತದಾನವಾಗಿತ್ತು. ಆದರೆ ಬಳ್ಳಾರಿ ನಗರದಲ್ಲಿ ಕೇವಲ 63 ರಷ್ಟು ಮಾತ್ರ ಮತದಾನವಾಗಿತ್ತು. ಮತದಾನ ಮಾಡಿದರೆ ಏನು ಬರುತ್ತೆ, ನ್ನ ಒಂದು ಓಟಿನಿಂದ ಯಾವುದೇ ಬದಲಾವಣೆ ಆಗಲುದೆಂಬ ನಿರಾಸಕ್ತಿಯ  ಮನೋಭಾವನೆ ಬಿಟ್ಟು ಎಲ್ಲರೂ ಬಂದು ಮತದಾನ ಮಾಡಬೇಕು ಎಂದರು.
ಎಸ್ಪಿ ರಂಜಿತ್ ಕುಮಾರ್ ಬಮನಡಾರು ಮಾತನಾಡಿ ಈ ಬಾರಿ ಈ ಕ್ಷೇತ್ರದಲ್ಲಿ ಶೇ 90 ರಷ್ಟು ಮತದಾನವಾಗ ಬೇಕು. ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಎಲ್ಲ ವ್ಯವಸ್ಥೆ ಮಾಡಿದೆಂದರು.
ಸಂಜೆವಾಣಿ ಜೊತೆ ಮಾತನಾಡಿದ ಮತದಾರ ಶ್ರೀನಾಥ್, ನ್ಯಾಯಸಮ್ಮತ, ಪಾರದರ್ಶಕವಾಗಿ ಯಾವುದೇ ಅಮಿಷಗಳಿಗೆ ಒಳಗಾಗದೇ ಎಲ್ಲರೂ ಮತದಾನ‌ಮಾಡಬೇಕು ಎಂಬ ಜಾಗೃತಿಗಾಗಿ ಈ ಜಾಥಾ ಮಾಡಿದೆ. ಚುನಾವಣಾ ಆಯೋಗ ಮತದಾನಕ್ಕೆ ಅನೇಕ ಸೌಲಭ್ಯ ನೀಡಿದೆ. 85 ಕ್ಕೂ ಹೆಚ್ಚು ವಯಸ್ಸಿನವರಿಗೆ, ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ ಕಲ್ಪಿಸಿದೆ.  ಹಾಗಾಗಿ ಪ್ರತಿಯೊಬ್ಬರು ಮತದಾನ ಮಾಡಿದಾಗ ಪ್ರಜಾಪ್ರಭುತ್ವಕ್ಕೆ ಮೌಲ್ಯ ದೊರೆಯಲಿದೆ. ಬಿಸಿಲಿನ ನೆಪ ಹೇಳದೆ ಬೆಳಿಗ್ಗೆ ಇಲ್ಲ ಸಂಜೆ ಮತದಾನ ಮಾಡಬಹುದಾಗಿದೆಂದರು.
ಈ ವೇಳೆ ಎಸಿ ಹೇಮಂತ್, ಎಡಿಸಿ  ಮಹಮ್ಮದ್ ಝುಬೇರ, ಪಾಲಿಕೆ ಆಯುಕ್ತ ಕಲೀಲ್, ಅರಣ್ಯ ಅಧಿಕಾರಿ ರವಿಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.