ಯುಗಾದಿಯಂದು ಶ್ರೀ ಅಕ್ಕಮಹಾದೇವಿ ಪಲ್ಲಕ್ಕಿ ಉತ್ಸವ
ಬೀದರ:ಏ.7:ದ್ವಾದಶ ಜ್ಯೋತೀರ್ಲಿಂಗಳಲ್ಲಿ ಒಂದಾಗಿರುವ ಶ್ರೀಶೈಲ ಮಹಾಕ್ಷೇತ್ರದಲ್ಲಿ ಯುಗಾದಿ ಹಬ್ಬದ ನಿಮಿತ್ಯ ಶ್ರೀ ಭ್ರಮರಾಂಬಾ ಶ್ರೀ ಮಲ್ಲಿಕಾರ್ಜುನರ ಐತಿಹಾಸಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಅಕ್ಕಮಹಾದೇವಿ ಸಂಸ್ಮರಣೋತ್ಸವ ನಡೆಯವುದು. ಈ ವರ್ಷ ‘ತಪೋರತ್ನ’ ಪೂಜ್ಯ ಶ್ರೀ ಕರುಣಾದೇವಿ ಮಾತಾ ಅವರ ಸತ್ ಸಂಕಲ್ಪದಂತೆ ಮಹಾಶಿವಶರಣೆ ವೈರಾಗ್ಯನಿಧಿ ಶ್ರೀ ಅಕ್ಕ ಮಹಾದೇವಿಯವರ ಪಲ್ಲಕ್ಕಿ ಮೆರವಣಿಗೆ ನಡೆಯುವುದು.
ಯುಗಾದಿ (9-4-2024) ದಿನ ಬೆಳಗ್ಗೆ 7 ಗಂಟೆಗೆ ಶ್ರೀ ಅಕ್ಕಮಹಾದೇವಿ ಚೈತನ್ಯ ಪೀಠದಿಂದ ಹೊರಡುವ ಉತ್ಸವವನ್ನು ಪೂಜ್ಯ ಶ್ರೀ ಕರುಣಾದೇವಿ ಮಾತಾ ಚಾಲನೆ ನೀಡುವರು ಚೈತನ್ಯ ಪೀಠದ ಸಂಚಾಲಕರಾದ ಶ್ರೀ ಷ.ಬ್ರ ಡಾ|| ರಾಜಶೇಖರ ಶಿವಾಚಾರ್ಯರ ಸಾರಥ್ಯದಲ್ಲಿ ಮೆರವಣಿಗೆ ನಡೆಯುವುದು. ಚೈತನ್ಯ ಪೀಠದಿಂದ ಹೊರಡುವ ಉತ್ಸವವು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪ್ರದಕ್ಷಿಣಗೊಂಡು ಬಯಲು ವೀರಭದ್ರ ಸ್ವಾಮಿ, ನಂದಿ ಸರ್ಕಲ್ ಮುಖಾಂತರ ಚೈತನ್ಯ ಪೀಠ ತಲುಪುವುದು ನಂತರ ಶ್ರೀ ಅಕ್ಕಮಹಾದೇವಿ ಸಂಸ್ಮರಣೋತ್ಸವ ಧರ್ಮಸಭೆ ನಡೆಯುವುದೆಂದು ವೀರಶೈವ ರಕ್ಷಣಾ ವೇದಿಕೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.