ಸದ್ಗುರು ಗಣೇಶ್ವರ ಅವಧೂತರ 37ನೇ ಜಾತ್ರಾ ಮಹೋತ್ಸವ
ಬೀದರ:ಏ.7:ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸದ್ಗುರು ಗಣೇಶ್ವರ ಅವಧೂತ ಅವರ ಏ. 7 ರಿಂದ ಏ. 11 ರ ವರೆಗೆ ಐದು ದಿವಸಗಳ ಪಯರ್ಂತ ಗುರುದೇವರ 37ನೇ ಜಾತ್ರಾ ಮಹೋತ್ಸವವನ್ನು ಅತ್ಯಂತ ವೈಭವ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ
ಏ. 07 ರಂದು ರವಿವಾರ ಬೆಳಿಗ್ಗೆ 6.00 ರಿಂದ 9.00 ಗಂಟೆಯವರೆಗೆ ಸಹಸ್ರಲಿಂಗಗಳಿಗೂ ಕ್ಷೇತ್ರಸ್ತಿ ಸಕಲ ದೇವರ ವಿಗ್ರಜಗಳಿಗೂ ಅಭಿಷೇಕ ನಂತರ 9-30 ರಿಂದ 10.30 ರ ವರೆಗೆ ಅವಧೂತರ ಧ್ವಜಾರೋಹಣ ನಂತರ ಗುರುಪಾದಕ್ಕೆ ರುದ್ರಾಭಿಷೇಕ, ಸಾಯಂಕಾಲ 5.00 ರಿಂದ 7.00 ಗಂಟೆಯವರೆಗೆ ಮಾತೆಯರಿಂದ ದಿನಾಲು ಈಶ್ವರ ಗೀತೆ, ಗುರು ಗೀತೆ, ಪಾರಾಯಣ, ಏ.08 ಹಾಗೂ 09 ರಂದು ಬೆಳಿಗ್ಗೆ 10.00 ರಿಂದ 1.30 ರ ವರೆಗೆ ಪ್ರಚನ ಕಾರ್ಯಕ್ರಮದ ನಂತರ 2.00 ಗಂಟೆಯಿಂದ ಪ್ರಸಾದ ವಿತರಣೆ ಕಾರ್ಯಕ್ರಮ, ಏ. 10 ರಂದು ಬುಧವಾರ ದೀಪೆÇೀತ್ಸವ ಮತ್ತು ಸಂಗೀತ ಕಾರ್ಯಕ್ರಮ ಹಾಗೂ ಏ.11 ರ ಗುರುವಾರ ಮುಂಜಾನೆ 11.00 ಗಂಟೆಗೆ ತಪೆÇೀಮಂದಿರದಲ್ಲಿ ದಿವ್ಯದೇವತ್ತ ರಥದಲ್ಲಿ ಪೂಜ್ಯ ಗುರುಗಳ ಭಾವಚಿತ್ರ ಪಲ್ಲಕ್ಕಿಯಿಟ್ಟು ಮೆರವಣಿಗೆ ಮತ್ತು ವಿಶ್ವಪೂಜೆ ಸದ್ಗುರು ಪರಮಾತ್ಮನ ಪ್ರಿತ್ಯರ್ಥ ದಿನವಿಡಿ ಮಹಾಪ್ರಸಾದ ವಿತರಣೆ ಹಾಗೂ ರಾತ್ರಿ 9-00 ರಿಂದ ಸಂಗೀತ ಕಲಾಆವಿದರಿಂದ ಸಂಗೀತ ದರ್ಬಾ ಕಾರ್ಯಕ್ರಮ ಬೆಳಗಿನ ಜಾವ 6-00 ಗಂಟೆಯವರೆಗೆ ನಂತರ ಮಹಾಮಂಗಳಾರತಿಯೊಂದಿಗೆ ಮುಕ್ತಾಯಗೊಳ್ಳುವುದು.
ಕಾರಣ ಆಸ್ತಿಕ ಸದ್ಭಕ್ತರು ಈ ಮಹೋತ್ಸವದಲ್ಲಿ ತ್ರಿಕ್ರಣಪೂರ್ವಕ ಪಾಲ್ಗೊಂಡು ಶ್ರೀಗಳ ಪರಮ ಬೋದಾಮ್ರತವನ್ನು ಭಕ್ತವೃಂದದವರಿಂದ ಸೇವಿಸಿ ಪ್ರಸಾದವನ್ನು ಸ್ವೀಕರಿಸಿ ಗುರುದರ್ಶನ ಪಡೆದುಕೊಂಡು ಪುನೀತರಾಗಬೇಕೆಂದು ಚೌಳಿ ಅಪ್ಪನವರ ಶಿಷ್ಯರಾದ ಶ್ರೀ ಪ್ರಕಾಶ ಮಹಾರಾಜರು ಮನವಿ ಮಾಡಿಕೊಂಡಿದ್ದಾರೆ.