ಏ. 13ರಂದು ಕಲ್ಯಾಣ ಕರ್ನಾಟಕ ಈಡಿಗ ಮುಖಂಡರ ಮಹತ್ವದ ಸಭೆ
ಕಲಬುರಗಿ:ಏ.7: ಕಲ್ಯಾಣ ಕರ್ನಾಟಕ ಭಾಗದ ಎಲ್ಲ ತಾಲೂಕುಗಳ ಈಡಿಗ ಮುಖಂಡರ ಸಭೆಯನ್ನು ಏ.13 ರಂದು ಕಲ್ಬುರ್ಗಿಯಲ್ಲಿ ಕರೆಯಲಾಗಿದೆ ಎಂದು ಚಿತ್ತಾಪುರ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿಯವರು ತಿಳಿಸಿದ್ದಾರೆ.
ಕಲ್ಬುರ್ಗಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದ್ದು ಏಪ್ರಿಲ್ 13 ರಂದು ರಾಮಮಂದಿರ ಸಮೀಪದ ಹೋಟೆಲ್ ಅನಂತ) ಸಭಾಂಗಣದಲ್ಲಿ (ಸನ್ ಇಂಟರ್ ನ್ಯಾಷನಲ್ ಹೋಟೆಲ್) ಸಭೆಯನ್ನು ಆಯೋಜಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಎಲ್ಲ ತಾಲೂಕುಗಳ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡು ಈಡಿಗ, ಬಿಲ್ಲವ, ನಾಮಧಾರಿ ಧೀವರ ಸೇರಿದಂತೆ ಸಮುದಾಯದ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಕಳೆದ ಸರಕಾರ ಈಡಿಗ ನಿಗಮವನ್ನು ಘೋಷಣೆ ಮಾಡಿದ್ದರೂ ಅಧಿಕಾರಕ್ಕೆ ಬಂದ ಕಾಂಗ್ರೆಸ್ 10 ತಿಂಗಳಲ್ಲಿ ಎರಡು ಬಜೆಟ್ ಗಳನ್ನು ಮಂಡಿಸಿದರು.ಈ ಸಮುದಾಯಕ್ಕೆ ನಯಾಪೈಸೆ ನೀಡದೆ ಕಡೆಗಣಿಸಿದೆ. ಎಲ್ಲ ರಾಜಕೀಯ ಪಕ್ಷಗಳು ರಾಜ್ಯದ ಸುಮಾರು 70 ಲಕ್ಷಕ್ಕೂ ಅಧಿಕವಿರುವ ಈಡಿಗ ಬಿಲ್ಲವ ನಾಮಧಾರಿ ಸಮುದಾಯದ ಜನರನ್ನು ಕೇವಲ ವೋಟಿಗಾಗಿ ಬಳಸಿ ನಂತರ ಕೈಬಿಡುತ್ತಿರುವುದು ಸಮುದಾಯಕ್ಕೆ ಬಾರಿ ನೋವನ್ನುಂಟು ಮಾಡಿದೆ. ಈ ಬಗ್ಗೆ ಒಂದು ದೃಢ ನಿರ್ಧಾರವನ್ನು ಕೈಗೊಳ್ಳಲು ಸಮಾಜದ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಲು ಈ ಮಹತ್ವದ ಸಭೆಯನ್ನು ಆಯೋಜಿಸಲಾಗಿದೆ ಸಭೆಯಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಲ ಮತ್ತು ಕಲ್ಯಾಣ ಕರ್ನಾಟಕ ಈಡಿಗ ಹೋರಾಟ ಸಮಿತಿ ಕೂಡ ಪಾಲ್ಗೊಳ್ಳಲಿದ್ದು ಮಹತ್ವದ ನಿರ್ಣಯವನ್ನು ಅಂಗೀಕರಿಸಲಾಗುವುದು. ಸಮುದಾಯದ ಜನರು ಆರ್ಥಿಕ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು ಕುಲಕಸುಬು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಈ ಸಮುದಾಯಕ್ಕೆ ಯಾವುದೇ ರಾಜಕೀಯ ಪಕ್ಷಗಳು ಆಸರೆಯಾಗದೆ ಮೊಸಳೆ ಕಣ್ಣೀರು ಸುರಿಸುತ್ತಿರುವುದರಿಂದ ಈ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುಖಂಡರ ನಿರ್ಧಾರದಂತೆ ಕಠಿಣ ನಿಲುವು ತೆಗೆದುಕೊಳ್ಳಲಾಗುವುದು ಎಂದು ಡಾ. ಶ್ರೀಗಳು ತಿಳಿಸಿದ್ದಾರೆ.
ಈ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಲ್ಬುರ್ಗಿ ಈಡಿಗ ಸಮಾಜದ ಅಧ್ಯಕ್ಷರಾದ ರಾಜೇಶ್ ಜಗದೇವ್ ಗುತ್ತೇದಾರ್ ವೆಂಕಟೇಶ ಗುಂಡಾನೂರು, ಸಮಾಜದ ಪ್ರಮುಖರಾದ ರಾಜೇಶ್ ಗುತ್ತೇದಾರ್ ನಾಗಯ್ಯ ಗುತ್ತೇದಾರ್ ಚಿತ್ತಾಪುರ ವೆಂಕಟಯ್ಯ ಮುಕ್ತೇದಾರ್ ಸೇಡಂ ಶೇಖರ ಗಾರಂಪಳ್ಳಿ ಚಿಂಚೋಳಿ ನಾಗರಾಜ ಜೇವರ್ಗಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.