ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆ ಪೆಂಡಿಂಗ್:ನ್ಯಾ.ಕಿಣಗಿ
ತಾಳಿಕೋಟೆ:ಏ.7: ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಸಂಬಂದಿಸಿ ಸರ್ಕಾರ ಮಟ್ಟದಲ್ಲಿ ಪೆಂಡಿಂಗ್ ಉಳಿದಿದ್ದು ಸರ್ಕಾಮಟ್ಟದಿಂದ ಮಂಜೂರು ಮಾಡಿಸಿಕೊಂಡು ಬಂದರೆ ಕೂಡಲೇ ಪ್ರಾರಂಭಕ್ಕೆ ಅನುಕೂಲವಾಗಲಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ವಿಜಯಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶ್ರೀ ಅಶೋಕ ಎಸ್ ಕಿಣಗಿ ಅವರು ನುಡಿದರು.
ಶನಿವಾರರಂದು ತಾಳಿಕೋಟೆ ಪಟ್ಟಣದ ಹಳೆಯ ಪುರಸಭೆ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ವಿಜಯಪುರ, ಲೋಕೋಪಯೋಗಿ ಇಲಾಖೆ, ಮತ್ತು ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಸಿವಿಲ್ ನ್ಯಾಯಾದೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಲಯವನ್ನು ನೂತನವಾಗಿ ಸೃಜಿಸಲ್ಪಟ್ಟ ಸಿವಿಲ್ ನ್ಯಾಯಾದೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಈಗಾಗಲೇ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಸಂಬಂದಿಸಿ ಪ್ರಥಮವಾಗಿ ಮುದ್ದೇಬಿಹಾಳ, ಬ.ಬಾಗೇವಾಡಿ, ಇಂಡಿ, ಯಿಂದ ಅರ್ಜಿಗಳು ಬಂದಿದ್ದವು ಅವುಗಳಿಗೆ ಸಂಬಂದಿಸಿ ಈಗಾಗಲೇ ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಪ್ರಾರಂಬಿಸುವ ಸಲುವಾಗಿ ಸರ್ಕಾರ ಮಟ್ಟದಲ್ಲಿ ಉಳಿದಿದೆ ಮುದ್ದೇಬಿಹಾಳದಲ್ಲಿ ಜಿಲ್ಲಾ ನ್ಯಾಯಾಲಯ ಪ್ರಾರಂಬಿಸುವವರೆಗೂ ಬ.ಬಾಗೇವಾಡಿಯಲ್ಲಿ, ಇಂಡಿಯಲ್ಲಿ ಜಿಲ್ಲಾ ನ್ಯಾಯಾಲಯ ಪ್ರಾರಂಬಿಸಲು ಬರುವದಿಲ್ಲಾ ಮುದ್ದೇಬಿಹಾಳದಲ್ಲಿ ನ್ಯಾಯಾಲಯ ಪ್ರಾರಂಬಕ್ಕೆ ಸಂಬಂದಿಸಿ ಈಭಾಗದ ಸರ್ಕಾರಕ್ಕೆ ಸಂಬಂದಿಸಿದ ಜನಪ್ರತಿನಿಧಿಗಳ ಸಹಕಾರ ತೆಗೆದುಕೊಂಡು ಮಂಜೂರು ಮಾಡಿಸಿಕೊಂಡು ಬಂದರೆ ಕೂಡಲೇ ಪ್ರಾರಂಬಿಸಲು ಅನುಕೂಲವಾಗಲಿದೆ ಎಂದರು. ತಾಳಿಕೋಟೆ ಭಾಗಕ್ಕೆ ಸಂಬಂದಿಸಿ 2019 ರಿಂದ 2500 ಕ್ಕಿಂತಲೂ ಹೆಚ್ಚು ಕೇಸುಗಳು ಪೆಂಡಿಂಗ್ ಉಳಿದಿವೆ ಇದನ್ನು ಗಮನದಲ್ಲಿ ಇಟ್ಟುಕೊಂಡು ತಾಳಿಕೋಟೆಯಲ್ಲಿ ಪುಲ್ ಟೈಮ್ ನ್ಯಾಯಾಲಯ ಪ್ರಾರಂಬಿಸಲು ಆಗದಿದ್ದರೂ ಕೂಡಾ ಮೊದಲು ಎರಡು ದಿನವಾದರೂ ಕಲಾಪ ನಡೆಸಲು ಅನುಕೂಲ ಮಾಡಿದರೆ ಆದಷ್ಟು ಕೇಸ್ಸುಗಳು ಬೇಗನೇ ಇತ್ಯರ್ಥವಾಗಬಹುದು ಎಂದು ನ್ಯಾಯಾಲಯವನ್ನು ಪ್ರಾರಂಬಿಸಿದ್ದೇವೆ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳು ಕಲಾಪ ನಡೆಯಲಿದೆ ಮುಂದೆ ಈ ಭಾಗದ ಜನಪ್ರತಿನಿಧಿಗಳ ಸಹಕಾರ ಪಡೆದುಕೊಂಡು ಸರ್ಕಾರದಿಂದ ಪುಲ್ ಟೈಮ್ ನ್ಯಾಯಾಲಯ ನಡೆಸಲು ಅನುಮತಿ ಮಾಡಿಕೊಂಡು ಬಂದರೆ ವಾರದ ಸೋಮವಾರದಿಂದ ಶನಿವಾರದ ವರೆಗೆ ನ್ಯಾಯಾಲಯದ ಕಲಾಪವನ್ನು ನಡೆಸಬಹುದಾಗಿದೆ ಎಂದ ಅವರು ಸದ್ಯ ತಾಳಿಕೋಟೆಯಲ್ಲಿ ಪ್ರಾರಂಬಿಸಿರುವ ನ್ಯಾಯಾಲಯದ ಕಟ್ಟಡವು ತಾತ್ಕಾಲಿಕವಾಗಿದೆ ಈಗಾಗಲೇ 4 ಏಕರೆ ಜಮೀನು ನೀಡುವ ಸಂಬಂದ ಜಿಲ್ಲಾಧಿಕಾರಿಗಳು ಸರ್ವೇ ನಂ.165/ಬಿ ದಲ್ಲಿ ನೀಡುವ ಸಂಬಂದ ತಹಶಿಲ್ದಾರರಿಗೆ ಪತ್ರಮುಖ್ಯೇನ ಸೂಚನೆಯನ್ನು ನೀಡಿದ್ದಾರೆ ಈ ಜಾಗೆಯಲ್ಲಿ ನ್ಯಾಯಾಲಯ ಕಟ್ಟಡ ಮತ್ತು ನ್ಯಾಯವಾದಿಗಳ ವಸತಿ ಗ್ರಹ, ಬಾರ ಅಸೋಶೇಷನ್ ಕಟ್ಟಡ ನಿರ್ಮಾಣವಾಗಲಿದೆ ಇದು ಕೂಡಲೇ ಆದರೆ ಹೈಕೋರ್ಟ ಕಡೆಯಿಂದ ಏನು ಅವಶ್ಯಕ ಸೌಲಭ್ಯಗಳು ಬೇಕು ಅವೇಲ್ಲವನ್ನು ಕೂಡಲೇ ಒದಗಿಸುವಂತಹ ಕೆಲಸ ಮಾಡುತ್ತೇವೆಂದು ಬರವಸೆ ನೀಡಿದ ಅವರು ನಾನು ಇದೇ ವಿಜಯಪುರ ಜಿಲ್ಲೆಯ ಬ.ಬಾಗೇವಾಡಿ ತಾಲೂಕಿನಲ್ಲಿ ಹುಟ್ಟಿ ಬೆಳೆದವನಾಗಿದ್ದೇನೆ ನನ್ನ ಅವಧಿಯಲ್ಲಿ ಈ ಭಾಗಕ್ಕೆ ನಮ್ಮ ವಿಜಯಪುರ ಜಿಲ್ಲೆಗೆ ನನ್ನಿಂದ ಏನು ಸಹಾಯ ಸಹಕಾರ ಮಾಡಲು ಆಗುತ್ತೋ ಅದೇಲ್ಲವನ್ನು ಮಾಡಿಕೊಡುತ್ತೇನೆಂದ ನ್ಯಾ.ಅಶೋಕ ಕಿಣಗಿ ಅವರು ಹೇಳಿದರು.
ಇನ್ನೋರ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಶ್ರೀ ಶಿವಾಜಿ ಅನಂತ ನಲವಡೆ ಅವರು ಮಾತನಾಡಿ ತಾಳಿಕೋಟೆ ಭಾಗದ ಜನರ ಬಹು ನಿರಿಕ್ಷೀತ ಕನಸ್ಸೊಂದು ನನಸ್ಸಾಗಿದೆ ಈ ಕನಸ್ಸನ್ನು ನನಸು ಮಾಡಿದವರು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ವಿಜಯಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶ್ರೀ ಅಶೋಕ ಎಸ್ ಕಿಣಗಿ ಅವರು ಆಗಿದ್ದಾರೆ ನ್ಯಾಯಮೂರ್ತಿ ಅಶೋಕ ಕಿಣಗಿ ಸರ್ ಅವರು ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದಾರೆ ಜಿಲ್ಲೆಯ ಆಡಳಿತಕ್ಕೆ ಸಂಬಂದಿಸಿದ ಸಮಸ್ಯೆಗಳು ಬಂದಾಗ ಕೂಡಲೇ ಇತ್ಯರ್ಥ ಪಡಿಸಿ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ ತಾಳಿಕೋಟೆಯಲ್ಲಿ ನ್ಯಾಯಾಲಯ ಪ್ರಾರಂಭಕ್ಕೆ ತಾತ್ಕಾಲಿಕ ಕಟ್ಟಡವನ್ನು ಗುರುತಿಸಿ ನೀಡಿದಾಗ ಅನುಮತಿ ನೀಡುವದರೊಂದಿಗೆ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಈ ನ್ಯಾಯಾಲಯದ ಹೊಸ ಕಟ್ಟಡಕ್ಕೆ ಸಂಬಂದಿಸಿ ಪಟ್ಟಣದಲ್ಲಿ 165/ಬಿ ಸರ್ವೆ ನಂ.ದಲ್ಲಿ 4 ಏಕರೆ ಜಮೀನು ನೀಡುವ ಸಂಬಂದ ಜಿಲ್ಲಾಧಿಕಾರಿಗಳು ತಹಶಿಲ್ದಾರರಿಗೆ ನಿರ್ದೇಶನವನ್ನು ನೀಡಿದ್ದು ಅದು ತ್ವರಿತಗತಿಯಲ್ಲಿ ಆಗಬೇಕಿದೆ ಎಂದರು.
ಇನ್ನೋರ್ವ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅವರು ಪ್ರಸ್ಥಾವಿಕ ಮಾತನಾಡಿ ಮಾತನಾಡಿ ತಾಳಿಕೋಟೆ ಪಟ್ಟಣವು ನೂತನ ತಾಲೂಕಾ ಕೇಂದ್ರವಾಗಿ ಅಸ್ಥಿತ್ವಕ್ಕೆ ಬಂದ ನಂತರ ಕಳೆದ 2 ವರ್ಷಗಳಿಂದ ಇಲ್ಲಿ ನ್ಯಾಯಾಲಯ ಪ್ರಾರಂಬಿಸಬೇಕೆಂದು ಸಾಕಷ್ಟು ಜನ ನ್ಯಾಯವಾದಿಗಳು ಪಟ್ಟಣದ ಎಲ್ಲ ಜನರ ಸಹಕಾರದೊಂದಿಗೆ ಪ್ರಯತ್ನ ಮಾಡುತ್ತಾ ಬಂದಿದ್ದರ ಫಲವಾಗಿ ಇಂದು ನ್ಯಾಯಾಲಯವು ಪ್ರಾರಂಬಗೊಂಡಿದೆ ಅತ್ಯಂತ ಸರಳ ಸ್ವಭಾವದ ವ್ಯಕ್ತಿಯಾಗಿರುವ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ವಿಜಯಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಶ್ರೀ ಅಶೋಕ ಕಿಣಗಿ ಸರ್ ಅವರು ನ್ಯಾಯಾಲಯ ಪ್ರಾರಂಬಕ್ಕೆ ಅನುಮತಿ ನೀಡಿದ್ದಾರೆ ಈ ಭಾಗದ ಜನರು ಅವರಿಗೆ ಕೃತಜ್ಞರಾಗಿದ್ದಾರೆಂದ ಅವರು ಈ ಭಾಗದ 2 ಸಾವಿರಕ್ಕೂ ಮೇಲ್ಪಟ್ಟು ಕೇಸ್ಸುಗಳು ನ್ಯಾಯಾಲಯದಲ್ಲಿವೆ ಅವುಗಳು ಇನ್ನುಮುಂದೆ ತಾಳಿಕೋಟೆ ನ್ಯಾಯಾಲಯದಲ್ಲಿಯೇ ಇತ್ಯರ್ಥಗೊಳ್ಳಲಿವೆ ಹಿಂದೆ ಮುದ್ದೇಬಿಹಾಳದಲ್ಲಿಯ ನ್ಯಾಯಾಲಯಕ್ಕೆ ಈ ಭಾಗದಿಂದ 50 ಕೀಲೋ ಮೀಟರ್‍ವರೆಗೆ ಎಲ್ಲ ಕೆಲಸಗಳನ್ನು ಬಿಟ್ಟು ಹೋಗುವಂತಹ ಪರಸ್ಥಿತಿ ಇತ್ತು ಅದು ಈಗ ಮುಕ್ತಿ ಸಿಕ್ಕಂತಾಗಿದೆ ನ್ಯಾಯಾಲಯ ಸ್ಥಾಪನೆಯ ಉದ್ದೇಶ ವ್ಯಾಜ್ಯಗಳನ್ನು ಕಡಿಮೆ ಮಾಡುವದಕ್ಕಾಗಿದೆ ವ್ಯಾಜ್ಯಗಳನ್ನು ಹೆಚ್ಚಿಗೆ ಮಾಡಬಾರದು ಇದು ಸರ್ಕಾರದ ಮತ್ತು ಉಚ್ಚ ನ್ಯಾಯಾಲಯದ ಉದ್ದೇಶವು ಆಗಿದೆ ಈ ನಿಟ್ಟಿನಲ್ಲಿ ಎಲ್ಲರೂ ಸಾಗಬೇಕೆಂದರು.
ವೇದಿಕೆಯ ಮೇಲೆ ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಸಂಪತ್‍ಕುಮಾರ ಬಳೋಲಗಿಡದ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಕ ಅಭಿಯಂತರ ರಾಜು ಮುಜುಮದಾರ, ಉಪಸ್ಥಿತರಿದ್ದರು.
ಈ ಸಮಯದಲ್ಲಿ ಹಿರಿಯ ನ್ಯಾಯವಾದಿಗಳಾದ ಎಂ.ಎಚ್.ಹಾಲಣ್ಣವರ, ವ್ಹಿ.ಎಂ.ನಾಗಠಾಣ, ಜೆ.ಎ.ಚಿನಿವಾರ, ಎಂ.ಎಸ್.ನಾವದಗಿ, ಎಂ.ಎಂ.ಮುದ್ದೇಬಿಹಾಳ, ವಿಶ್ವನಾಥರಡ್ಡಿ ಮದರಕಲ್ಲ, ಎಸ್.ಆರ್.ಸಜ್ಜನ, ಎಸ್.ಎಂ.ಗುಡದಿನ್ನಿ, ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ.ಗೌಡರ, ಹಾಗೂ ನ್ಯಾಯವಾದಿಗಳಾದ ಎಂ.ಆರ್.ಪಾಟೀಲ, ಆನಂದ ಮದರಕಲ್ಲ, ಆನಂದ ಕೊಂಗಡ್ಡಿ, ಆನಂದ ದೊಡಮನಿ, ಬಸನಗೌಡ ಮುಂದಿನಮನಿ, ಪ್ರಭಾಕರ ಗುಡಗುಂಟಿ, ಎಂ.ಎಚ್.ಜೂಲಿ, ಸುರೇಶ ನಾರಿ, ಎಂ.ಎಸ್.ಹಜೇರಿ, ಆರ್.ಎಚ್.ಇನಾಮದಾರ, ಎಸ್.ಆರ್.ದೇಸಾಯಿ, ಮುತ್ತು ಜಾಗೀರದಾರ, ಈರಪ್ಪ ಕುಂಭಾರ, ವ್ಹಿ.ಜಿ.ಮದರಕಲ್ಲ, ಎಸ್.ಆರ್.ಸಜ್ಜನ, ಎಂ.ಎಸ್.ಅಮಲ್ಯಾಳ, ಝ.ಕೆ.ಚಿತ್ತರಗಿ, ಬಸವರಾಜ ನಾಡಗೌಡ, ಎಸ್.ಎಂ.ಚಿಲ್ಲಾಳಶೆಟ್ಟರ, ವಿರೇಶ ಬಾಗೇವಾಡಿ, ಶಾಂತು ದೋರನಹಳ್ಳಿ, ಎಂ.ಎಸ್.ಪಾಟೀಲ, ಆರ್.ಎಂ.ಪಾಟೀಲ, ಆರ್.ಎಸ್.ಐನಾಪೂರ, ಆಯ್.ಕೆ.ಸಾಸನೂರ, ಎನ್.ಬಿ.ಮುದ್ನಾಳ, ವಾಯ್.ವಾಯ್.ದೊಡಮನಿ, ಕಾರ್ತಿಕ ಕಟ್ಟಿಮನಿ, ಟಿ.ಎಸ್.ನೀರಲಗಿ, ಎನ್.ಆಯ್.ಮಸ್ಕಾನಾಳ, ಕೆ.ಬಿ.ದೊಡಮನಿ, ಟಿ.ಎಸ್.ಚಲವಾದಿ, ಭರತ ಅಗರವಾಲ, ಎಂ.ಕೆ.ಮೇತ್ರಿ, ಮೊದಲಾದವರು ಉಪಸ್ಥಿತರಿದ್ದರು.
ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಶ್ರೀ ಶಿವಾಜಿ ಅನಂತ ನಲವಡೆ ಅವರು ಸ್ವಾಗತಿಸಿದರು. ಹಿರಿಯ ದಿವಾಣಿ ನ್ಯಾಯಾದೀಶರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ಶ್ರೀಮತಿ ಲಕ್ಷ್ಮೀ ನಿಂಗಪ್ಪ ಗರಗ ವಂದಿಸಿದರು.