ಡಾ. ಬಾಬುಜಗಜೀವನರಾಮ್ ಜಯಂತಿ
ಚನ್ನಮ್ಮನ ಕಿತ್ತೂರ,ಏ.7: ಮೊದಲಿನ ಕಾಲದಿಂದಲೂ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು, ಜಾತಿ-ಪದ್ದತಿ, ಅಸ್ಪøಶ್ಯ ಎಂಬ ಮನೋಭಾವನೆಗಳನ್ನು ತೊಡೆದುಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿ ಶೋಷಿತ ಸಮುದಾಯದ ಏಳಿಗೆಗೆ ಶ್ರಮಿಸುವುದರ ಮೂಲಕ ಸಮಾನತೆಯ ಸಂದೇಶಕ್ಕೆ ಸ್ಪಷ್ಟ ರೂಪ ಕೊಟ್ಟ ನಾಯಕರು ಡಾ. ಬಾಬು ಜಗಜೀವನರಾಮ್ ಎಂದು ತಹಶೀಲ್ದಾರ ರವೀಂದ್ರ ಹಾದಿಮನಿ ಹೇಳಿದರು.
ತಾಲೂಕಾಡಳಿತ, ತಾಪಂ, ಪಪಂ, ಹಾಗೂ ಪಪಂ ಎಂಕೆಹುಬ್ಬಳ್ಳಿ, ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಪಪಂ ಆವರಣದ ಬಿ ಆರ್ ಅಂಬೇಡ್ಕರ ಭವನದಲ್ಲಿ ಡಾ, ಬಾಬು ಜಗಜೀವನರಾಮ್‍ರವರ 117ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಗೈದು ಮಾತನಾಡಿದ ಅವರು ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ ಮಾತನಾಡಿ ಅಂದಿನ ಸಮಾಜದಲ್ಲಿ ಅಸ್ಪøಶ್ಯತೆಯನ್ನು ಹೋಗಲಾಡಿಸುವಲ್ಲಿ ಜಗಜೀವನರಾಮ್ ಅವರ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತೇಂದರು.
ಕಿತ್ತೂರ-ಬೈಲಹೊಂಗಲ ಜಂಟಿ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕಿ ಕಲಾವತಿ ದೇಶನೂರ ಮಾತನಾಡಿ ದೇಶದಲ್ಲಿ ಸಪರ್ಮಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಗÀಣನೀಯ ಬದಲಾವಣೆ ತಂದರು. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಭಿಯಾಗಿಸಿದ್ದರೆಂದರು.
ದಲಿತ ಮುಖಂಡ ಫಕ್ಕೀರ ಜಾಗಂಟಿ ಸೇರಿದಂತೆ ಇನ್ನೂ ಹಲವರು ಮಾತನಾಡಿದರು.
ಈ ವೇಳೆ ಎಸಿಡಿಪಿಓ ದೀಪಾ ಹೆಬ್ಬಳ್ಳಿ, ಕಂದಾಯ ನಿರೀಕ್ಷಕ ಮಹಾಂತಯ್ಯಾ ಹಿರೇಮಠ, ಕ್ಯೂರೇಟರ್ ರಾಘವೇಂದ್ರ, ಅರಣ್ಯ ಇಲಾಖೆಯ ಸಂಜಯ ಮಗದುಮ, ತಾಲೂಕು ದಲಿತ ಅಧ್ಯಕ್ಷ ರಾಜು ಜಾಗಂಟಿ, ನಾಗಪ್ಪ ಚಿನ್ನನವರ, ಬಸವರಾಜ ಕೆಳಗಡೆ, ಸಂಜೀವ ಲೋಕಾಪೂರ, ಮಡಿವಾಳಪ್ಪ ವಕ್ಕುಂದ, ಎಸ್.ಎಸ್.ಹಂಚಿನಮನಿ, ಸುರೇಶ ಜಾಗಂಟಿ, ದಲಿತ ಮುಖಂಡರು ಸಮಾಜ ಕಲ್ಯಾಣ ಇಲಾಖೆ, ಪಪಂ ಸಿಬ್ಬಂದಿ, ತಾಲೂಕಿನ ಎಲ್ಲ ಅಧಿಕಾರಿ, ಸಾರ್ವಜನಿಕರಿದ್ದರು.