ಚೆಕ್‍ಪೋಸ್ಟ್ ಪರಿಶೀಲನೆ
ಲಕ್ಷ್ಮೇಶ್ವರ,ಏ.7: ಲಕ್ಷ್ಮೇಶ್ವರ ಪೆÇಲೀಸ್ ಠಾಣಾ ವ್ಯಾಪ್ತಿಯ ಗೋನಾಳ ಮತ್ತು ರಾಮಗಿರಿ ಚೆಕ್ ಪೆÇೀಸ್ಟ್ಗಳಿಗೆ ಜಿಲ್ಲಾಧಿಕಾರಿ ಎಂಎಲ್ ವೈಶಾಲಿ ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚೆಕ್ಪೋಸ್ಟ್ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರುಗಳು ಪ್ರತಿಯೊಂದು ವಾಹನಗಳನ್ನು ಕೂಲಂಕುಶವಾಗಿ ತಪಾಸಣೆ ಮಾಡುವಂತೆ ಮತ್ತು ಯಾವುದೇ ನಿರ್ಲಕ್ಷ್ಯ ವಹಿಸದಂತೆ ಸೂಚಿಸಿದರು ಸಿಬ್ಬಂದಿಗಳು ಹದ್ದಿನ ಕಣ್ಣಿಟ್ಟು ವಾಹನಗಳನ್ನು ತಪಾಸಣೆಗೆ ಒಳಪಡಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ, ಪಿಎಸ್‍ಐ ಈರಣ್ಣ ರಿತ್ತಿ, ಕಂದಾಯ ಇಲಾಖೆಯ ಉಪ ತಹಸಿಲ್ದಾರ ಕಿಮಾಯ, ಗ್ರಾಮ ಆಡಳಿತ ಅಧಿಕಾರಿ ಹವಳದ, ಚೆಕ್ ಪೆÇೀಸ್ಟ್ ಸಿಬ್ಬಂದಿ ಮತ್ತು ಪೆÇಲೀಸ್ ಸಿಬ್ಬಂದಿ ಇದ್ದರು.