ಸೈಕಲ್ ಜಾಥಾ ಮೂಲಕ ಮತದಾನ ಜಾಗೃತಿ
ಗುಳೇದಗುಡ್ಡ,ಏ.7: ಪಟ್ಟಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಮತದಾನ ಜಾಗೃತಿ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಕಾರ್ಯಕ್ರಮ ನಡೆಯಿತು.
ಬಾದಾಮಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ದುರಗೇಶ ರುದ್ರಾಕ್ಷಿ ಅವರು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ಮತವೂ ಅಮೂಲ್ಯವಾಗಿದ್ದು, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದ ಅಭಿವೃದ್ಧಿಗೆ ನೀವು ನಿಮ್ಮ ಮತ ಚಲಾಯಿಸುವುದು ಅವಶ್ಯವಾಗಿದ್ದು, ಪ್ರತಿಯೊಬ್ಬ ಮತದಾರರು ಚುನಾವಣೆಯಲ್ಲಿ ಪಾಲ್ಗೊಂಡು ಮತವನ್ನು ಚಲಾಯಿಸಬೇಕು ಎಂದು ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ಸೈಕಲಾ ಜಾಥಾ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮತದಾನದ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಗಳಾ ಎಂ. ತಾಪಂ ಮಲ್ಲಿಕಾರ್ಜುನ ಬಡಿಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೈ. ಕುಂದರಗಿ, ಪುರಸಭೆ ಮುಖ್ಯಾಧಿಕಾರಿ ರಾಜೇಶ ಕೆ., ದೈಹಿಕ ಶಿಕ್ಷಣಾಧಿಕಾರಿ ಹಳಗೇರಿ, ಪಿ.ಸಿ.ಬೇಟಗೇರಿ, ಬುಳ್ಳಾ ರಾಜಶೇಖರ ಹುನಗುಂದ, ಎಂ.ಪಿ.ಮಾಗಿ, ರಾಜಶೇಖರ ಪಾಗಿ, ವೈ.ಜಿ.ತಳವಾರ, ಪುರಸಭೆ ಮ್ಯಾನೇಜರ ಎ.ಎಚ್. ಮುದ್ದೇಬಿಹಾಳ, ಎಸ್. ಎಸ್.ಪಟ್ಟಣಶೆಟ್ಟಿ, ರವಿ ನಿಲುಗಲ್, ಸಿ.ಎಂ. ಕುರುಬರ, ವಿವೇಕಾನಂದ ದೇವಾಂಗಮಠ, ವಿವೇಕಾನಂದ ಭಜಂತ್ರಿ ಸೇರಿದಂತೆ ಇತರರು ಇದ್ದರು.