ಗಾಂಜಾ ಸಂಗ್ರಹಿಸಿದ್ದ ಆರೋಪಿ ಬಂಧನ
ಸಂಜೆವಾಣಿ ವಾರ್ತೆ
ಹನೂರು ಏ.07:- ಮಾರಾಟ ಮಾಡುವ ಸಲುವಾಗಿ ಶೆಡ್‍ನಲ್ಲಿ ಒಣ ಗಾಂಜಾವನ್ನು ಸಂಗ್ರಹಿಸಿದ್ದ ಆರೋಪಿಯನ್ನು ರಾಮಾಪುರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಜಲ್ಲಿಪಾಳ್ಯ ಗ್ರಾಮದ ಮುತ್ತು 56 ವರ್ಷ ಬಂಧಿತ ಆರೋಪಿ.
ಘಟನೆ ವಿವರ : ಜಲ್ಲಿಪಾಳ್ಯ ಗ್ರಾಮದ ಮುತ್ತು ಮಾರಾಟ ಮಾಡುವಉದ್ದೇಶದಿಂದ ಒಣ ಗಾಂಜಾವನ್ನು ಗ್ರಾಮದ ಶೆಡ್‍ನಲ್ಲಿ ಸಂಗ್ರಹಿಸಿದ್ದನು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಧರ್ಮೇಂದ್ರ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಮನೋಜ್‍ಕುಮಾ ರ್, ಮುಖ್ಯ ಪೇದೆಗಳಾದ ನಾಗೇಂದ್ರ, ಸಿದ್ದೇಶ್ ಕುಮಾರ್, ಮಂಜು, ಪೇದೆಗಳಾದ ರವಿ ಚೌಹಾಣ್, ಪರಮೇಶ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಶೆಡ್ ಪರಿಶೀಲಿಸಿದಾಗ ಗಾಂಜಾ ಇರುವುದು ದೃಢಪಟ್ಟಿದೆ. ಬಳಿಕ 1 ಕೆಜಿ 900 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂ ಡ ಪೆÇಲೀಸರು ಆರೋಪಿಯ ನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ರಾಮಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.