ಜೀವನಾನುಭವಗಳು ನಮ್ಮ ಸಾರ್ಥಕ ಬದುಕಿಗೆ ನೆಲೆ ಒದಗಿಸುತ್ತವೆ: ಹೂಗಾರ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.7:ವಿದ್ಯಾರ್ಥಿ ದೆಶೆಯಿಂದಲೇ ಗುರುಗಳ ಆಳವಾದ ಅಧ್ಯಯನ, ನೈಜವಾದ ಘಟನೆಗಳ ನಿರೂಪಣೆ ಮತ್ತು ಗುರುಗಳ ಹೃದಯ ವೈಶಾಲ್ಯತೆಯು ಮನುಷ್ಯನನ್ನಾಗಿ ತಯಾರು ಮಾಡುವಲ್ಲಿ ಸಹಾಯಕವಾಗುವವು ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಬಿ. ಹೂಗಾರ ಅವರು ಹೇಳಿದರು.
ಶ್ರೀ ಸಿದ್ಧೇಶ್ವರ ಸ್ವಾಮಿಗಳ ಕುರಿತು ಚೌಪದಿ ಬರೆದಿರುವದನ್ನು ಓದಿ ತೋರಿಸಿದ್ದರಿಂದ ಅವರ ಸಮ್ಮತಿಯ ಮೂಲಕ ‘ಭುವನಕೆ ಬಂದ ಬೆಳಕು’ ಕೃತಿಯು ಬಿಡುಗಡೆ ಮಾಡಲು ಸಾಧ್ಯವಾಯಿತು ಎಂದು ಶ್ರೀ ಎ.ಎಸ್.ಹಿಪ್ಪರಗಿ ಪ್ರತಿಷ್ಠಾನ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭ ಮತ್ತು ಡಾ. ಫ.ಗು. ಹಳಕಟ್ಟ ಸಂಶೋಧನ ಕೇಂದ್ರದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ ಡಾ. ಎಂ.ಎಸ್. ಮದಭಾವಿ ಅವರು ಪ್ರಾರಂಭದ ವೃತ್ತಿಯ ದಿನಗಳನ್ನು ಹಂಚಿಕೊಂಡರು. ಸಂಶೋಧನ ಕೇಂದ್ರದಲ್ಲಿರುವುದರಿಂದ ಸುದೀರ್ಘವಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು ಎಂದರು.
ಎಂ.ಎಂ. ಅಂಗಡಿ, ಪರಶುರಾಮ ಪೋಳ, ಗುರುಬಾಯಿ ದೇವಣಗಾಂವ ಅವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಡಾ. ಗುರುಲಿಂಗ ಕಾಪಸೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಬಿ.ಎಂ. ಪಾಟೀಲ ವಚನಗಾಯನ ಮಾಡಿದರು. ಪ್ರತಿಷ್ಠಾನದಮ ಅಧ್ಯಕ್ಷ ಪ್ರೊ.ಎಸ್.ಬಿ. ದೊಡಮನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಸಿ.ನಾಗಠಾಣ ಸಾಧಕರನ್ನು ಪರಿಚಯಿಸಿದರು. ಡಾ. ವಿ.ಡಿ. ಐಹೊಳ್ಳಿ ಸ್ವಾಗತಿಸಿದರು. ಎಸ್.ಎಂ. ಹದಿಮೂರ ನಿರೂಪಿಸಿದರು. ವಿದ್ಯಾವತಿ ಅಂಕಲಗಿ ವಂದಿಸಿದರು.
ಬಿ.ಆರ್. ಬನಸೋಡೆ, ಸಂಗಮೇಶ ಬದಾಮಿ, ರಾವಸಾಹೇಬ ಬಿರಾದಾರ. ಎಸ್.ಜಿ. ನಾಡಗೌಡ, ಎಸ್.ವಾಯ್. ಗದಗ, ಸಿದ್ಧಣ್ಣ ಉತ್ನಾಳ, ವಿಠಲ ತೇಲಿ, ಎಂ.ಬಿ. ಮಡಗೊಂಡ, ಶಕುಂತಲಾ ದೊಡಮನಿ, ಎಂ.ಎಸ್. ಚಾಂದಕವಠೆ, ಎ.ಎಸ್. ಕಂಚ್ಯಾಣಿ, ಜೆ.ಎಸ್. ಕಂಚ್ಯಾಣಿ, ಎಸ್.ಎಚ್. ಕಸಬೆಗೌಡ, ಎಸ್.ಎಂ. ಔರಸಂಗ, ಬಿ.ಎಚ್. ಬಾದರಬಂಡಿ, ಬಿ.ಕೆ. ಗೋಟ್ಯಾಳ, ಬಿ.ಎಂ. ಜುಮನಾಳ, ಮ.ಗು. ಬಿರಾದಾರ, ಆರ್.ಎಚ್. ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.