ಭವ್ಯ ಭಾರತದ ನಿರ್ಮಾಣಕ್ಕಾಗಿ ಮತದಾನ

ಭವ್ಯ ಭಾರತದ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ನಾಗರೀಕರು ಮತದಾನ ಚಲಾಯಿಸುವುದು ಪ್ರಮುಖ ಜವಾಬ್ದಾರಿ ಹಾಗೂ ಆಧ್ಯ ಕರ್ತವ್ಯ. ಪ್ರತಿಯೊಬ್ಬ ನಾಗರಿಕನು ಬಯಸುವಂತೆ ತಾನು ಒಂದು ಮನೆ ಕಟ್ಟುವಾಗ ಅಡಿಪಾಯಕ್ಕೆ ಹಾಕುವ ಹವಳ ಮುತ್ತು ರತ್ನ ಇವೆಲ್ಲವನ್ನು ನಮ್ಮ ಕಟ್ಟಡ ಸುಭದ್ರವಾಗಿರಲಿ ನೂರು ಕಾಲ ಬಾಳಲಿ ಯಾವ ವಿಜ್ಞಗಳು ಅಡೆತಡೆಗಳು ಬರದಂತೆ ಕಾಪಾಡಲಿ ಎಂದು ನಾವು ಕಟ್ಟಡವನ್ನು ನಿರ್ಮಿಸುತ್ತೇವೋ ಹಾಗೆ ಅದೇ ರೀತಿಯಲ್ಲಿ ನಮ್ಮ ದೇಶದ ಉಳಿವಿಗಾಗಿ ಭವ್ಯ ಭಾರತದ ನಿರ್ಮಾಣಕ್ಕಾಗಿ, ಏಕತೆ ಅಖಂಡತೆ ಭದ್ರತೆಗಾಗಿ ಜನಪರ ಆಡಳಿತಕ್ಕಾಗಿ ದೇಶದ ಸಮಗ್ರ ಅಭಿವೃದ್ಧಿಗಾಗಿ ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವುದು ನಮ್ಮ ಅತ್ಯಮೂಲ್ಯವಾದ ಜವಾಬ್ದಾರಿ ಆಗಿರುತ್ತದೆ. ಪ್ರಾಮಾಣಿಕ ಜನ ಸೇವಕರನ್ನು ಆರಿಸುವಂತೆ ಪ್ರತಿಯೊಬ್ಬ ನಾಗರಿಕರು, ಯುವ ಪೀಳಿಗೆಯವರು ಯಾವುದೇ ಅಮಿಶಕ್ಕೂ ಒಳಗಾಗದೆ ಮತದಾನವನ್ನ ಚಲಾಯಿಸಿ ಸುಭದ್ರ ಸರ್ಕಾರ ಜನಪರ ಸರ್ಕಾರವನ್ನು ಆಯ್ಕೆ ಮಾಡಬೇಕೆಂದು ಕೇಳಿಕೊಳ್ಳತ್ತೇನೆ. ಮತ ಚಲಾಯಿಸುವಾಗ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿರುತ್ತದೆ.
– ಸೌಮ್ಯ ಸತೀಶ್ ಧಾರವಾಡ
ದಾವಣಗೆರೆ.