ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ
ಕಲಬುರಗಿ:ಏ.6: ನಗರದ ಹೈಕೋರ್ಟ್-ರಾಮಮಂದಿರ ರಸ್ತೆಯಲ್ಲಿರುವ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ 5, 8 ಹಾಗೂ 9ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಈ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಅವರು ಮಾತನಾಡಿ, ಮಕ್ಕಳ ಮಾನಸಿಕ ಮತ್ತು ವ್ಯಕ್ತಿತ್ವ ಅರಳಿಸುವಿಕೆಯ ಭಾಗವಾಗಿರುವ ಪರೀಕ್ಷೆಗಳ ಕುರಿತು ನಿರ್ಧಾರ ಕೈಗೊಳ್ಳುವಾಗ ಸರಕಾರ ಆದಷ್ಟೂ ಪೋಷಕರ ಸಲಹೆಗಳಿಗೆ ಆದ್ಯತೆ ನೀಡಬೇಕೆಂದು ಅಭಿಪ್ರಾಯಪಟ್ಟರು.
ಮೇಲಾಗಿ, ಬೋರ್ಡ್ ಪರೀಕ್ಷೆಗಳನ್ನು ಕೈಗೊಳ್ಳುವುದರಿಂದ ಮಕ್ಕಳು ತಮ್ಮ ಪಠ್ಯಕ್ರಮವನ್ನು ಆಳವಾಗಿ ಅಧ್ಯಯನ ಕೈಗೊಳ್ಳಲು ಅನುಕೂಲವಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ಇಂಥದ್ದೊಂದು ನಿರ್ಧಾರ ದೂರಗಾಮಿ ಹಾಗೂ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ, 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಕೈಗೊಳ್ಳುವ ಸರಕಾರದ ನಿರ್ಧಾರ ಸ್ವಾಗತಾರ್ಹ ಎಂದರು.
ವಿದ್ಯಾರ್ಥಿಗಳಿಗೆ ಸನ್ಮಾನ: ಇದೇವೇಳೆ, ಐದನೇ ತರಗತಿಯ ಕು.ಸೌಮ್ಯ ಬಂಡೇಶ್ (ಪ್ರಥಮ), ಜೀವನ್ ಶಿವಶಂಕರ (ದ್ವಿತೀಯ) ಹಾಗೂ ಸಮೃದ್ಧಿ ವಿಶಾಲ (ತೃತೀಯ), ಎಂಟನೇ ತರಗತಿ ವಿದ್ಯಾರ್ಥಿಗಳಾದ ಸುದೇμÁ್ಣ ವಿಠ್ಠಲ ಓಂಕಾರ್ (ಪ್ರಥಮ), ಸಿಂಚನಾ ರಾಘವೇಂದ್ರ (ದ್ವಿತೀಯ), ಸಿದ್ಧಾಂತ ಇಸ್ಮಾಯಿಲ್ ಮತ್ತು ಅನುμÁ್ಕ ಕಿಶನರಾವ್ (ತೃತೀಯ), ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಶ್ರೇಯಸ್ ಸಿದ್ರಾಮಪ್ಪ (ಪ್ರಥಮ), ಸೃಷ್ಟಿ ಪಶುಪತಿ (ದ್ವಿತೀಯ), ನಿಹಾರಿಕಾ ಬಸವರಾಜ (ತೃತೀಯ) ಅವರನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಇದೇ ವೇಳೆ, 9ನೇ ತರಗತಿಯ ವಿದ್ಯಾರ್ಥಿನಿ ನಿಹಾರಿಕಾ ಬಸವರಾಜ ಬೋರ್ಡ್ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆದ ಹಿನ್ನೆಲೆಯಲ್ಲಿ ವಿಶೇಷವಾಗಿ ಸತ್ಕರಿಸಲಾಯಿತು.
ವಿವೇಕಾನಂದ ವಿದ್ಯಾ ನಿಕೇತನ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷೆ ಸುವರ್ಣ ಎಸ್. ಭಗವತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಅಂಬಿಕಾ ರೆಡ್ಡಿ, ಶೈಕ್ಷಣಿಕ ನಿರ್ದೇಶಕ ನಿಖಿಲ್ ಪಾಟೀಲ್ ಉಪಸ್ಥಿತರಿದ್ದರು.
ಸರಕಾರ ಪ್ರತಿ ವರ್ಷ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸಬೇಕು. ಇದರಿಂದ ಮಕ್ಕಳು ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ, ಓದಿನಲ್ಲಿ ಮುನ್ನಡೆ ಸಾಧಿಸಲು ಅನುಕೂಲವಾಗುತ್ತದೆ.