ಎಂಬಿಬಿಎಸ್ ವಿದ್ಯಾರ್ಥಿ ದೇವಸ್ಥಾನದ ಕೆರೆಗೆ ಬಿದ್ದು ಮೃತ್ಯು
ಕುಂದಾಪುರ: ತಾಲೂಕಿನ ಕೋಟೇಶ್ವರದ ದೇವಸ್ಥಾನ ಕೆರೆಗೆ ಬಿದ್ದು ಎಂಬಿಬಿಎಸ್ ಮುಗಿಸಿದ್ದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.  ಹಂಗಳೂರಿನ ಗೌರೀಶ್ ಬಿ.ಆರ್.(೨೫) ಮೃತ ವಿದ್ಯಾರ್ಥಿ. ಎಂಬಿಬಿಎಸ್ ಮುಗಿಸಿದ್ದ ಅವರು ಉನ್ನತ ವಿದ್ಯಾಭ್ಯಾಸದ ಸಿದ್ಧತೆ ನಡೆಸುತ್ತಿದ್ದರು. ಬುಧವಾರ ಸಂಜೆ ಈಜುಕೊಳದಲ್ಲಿ ಈಜಲು ಹೋಗುವುದಾಗಿ ಮನೆಯಿಂದ ತೆರಳಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಕೋಟೇಶ್ವರ ದೇವಸ್ಥಾನದ ಕೆರೆ ಸಮೀಪ ಬುಧವಾರ ತಡರಾತ್ರಿ ಅವರ ಬ್ಯಾಗ್, ಮೊಬೈಲ್ ಫೋನ್, ಚಪ್ಪಲಿ ಕಂಡು ಬಂದಿತ್ತು. ಸಂಜೆ ೫:೩೦ರಿಂದ ರಾತ್ರಿ ೧೧ ಗಂಟೆಯ ನಡುವೆ ಕೆರೆಗೆ ಕಾಲುಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಗುರುವಾರ ಬೆಳಗ್ಗೆ ಕೆರೆಯಲ್ಲಿ ಹುಡುಕಿದಾಗ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಮೃತ ಯುವಕನ ಸಹೋದರ ವಿಘ್ನೇಶ್ ಬಿ.ಆರ್. ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಕಾಂ ಪದವೀಧರ ಆತ್ಮಹತ್ಯೆ
ಬಿ.ಕಾಂ ಪದವೀಧರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಉಡುಪಿ ಕೃಷ್ಣರಾಜ (೩೧) ಇವರು ಬಿ.ಕಾಂ ವ್ಯಾಸಂಗ ಮುಗಿಸಿ ಬೆಂಗಳೂರಿನಲ್ಲಿ ಖಾಸಗೀ ಕಂಪೆನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದರು.
ಕಳೆದ ೬ ತಿಂಗಳಿಂದ ಕೆಲಸವಿಲ್ಲದೇ ಊರಿಗೆ ಬಂದಿದ್ದು ಇತ್ತೀಚೆಗೆ ಸುಮಾರು ೩ ತಿಂಗಳಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ ೩೩/೨೦೨೪ ಕಲಂ:೧೯೪ ಃಓSS ರಂತೆ ಪ್ರಕರಣ ದಾಖಲಾಗಿರುತ್ತದೆ.